ಬೆಳ್ತಂಗಡಿ :ಕಳೆದ 15 ವರ್ಷಗಳಿಂದ ಗ್ರಾಹಕರ ಪ್ರೀತಿ ನಂಬಿಕೆ ಗಳಿಸಿ, ಮೊಬೈಲ್ ಸೇಲ್ಸ್ ಅಂಡ್ ಸರ್ವಿಸ್ ನಲ್ಲಿ ಗುಣಮಟ್ಟದ ಸೇವೆ ನೀಡಿ, ಸತತ ಆರು ವರ್ಷಗಳಿಂದ ಅಯಾನ್ಶ್ ಮೊಬೈಲ್ ಮಳಿಗೆಯನ್ನು ಪ್ರಾರಂಭಿಸಿ, ಹೊಸತನದೊಂದಿಗೆ ನವೀಕರಣಗೊಂಡ ನೂತನ ಮಳಿಗೆ ಉದ್ಘಾಟನೆಯು ಬೆಳ್ತಂಗಡಿ ಸಂತೆಕಟ್ಟೆಯಲ್ಲಿರುವ ಲಕ್ಷ್ಮೀನಾರಾಯಣ ಕಾಂಪ್ಲೆಕ್ಸ್ ನಲ್ಲಿ ಸೆ. 25 ರಂದು ನಡೆಯಿತು.

ನವೀಕರಣಗೊಂಡ ನೂತನ ಸಂಸ್ಥೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು ದೀಪ ಪ್ರಜ್ವಲನೆಗೈದು ಉದ್ಘಾಟಿಸಿ ಭಗವಂತನ ಅನುಗ್ರಹದಿಂದ ಸಂಸ್ಥೆಯು ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದರು.

ಈ ಸಂದರ್ಭದಲ್ಲಿ ಅರಿಹಂತ್ ಅವರ ಮಾತಾ- ಪಿತರಾದ ದರ್ಶನ್ ಮತ್ತು ವಿಮಲ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ಅಳದಂಗಡಿ ರಾಜಶೇಖರ ಶೆಟ್ಟಿ, ಕಟ್ಟಡ ಮಾಲಕರಾದ ವಿಶ್ವನಾಥ ಶೆಟ್ಟಿ, ಹರ್ಷೇಂದ್ರ ಜೈನ್, ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಸಂತೋಷ್ ಕುಮಾರ್, ಪವರ್ ಆನ್ ಬ್ಯಾಟರಿ ಮಾಲಕ ಶೀತಲ್ ಜೈನ್,ಪ್ರಮುಖರಾದ ಶಶಿಧರ ಎ, ಪ್ರದೀಪ್ ಜೈನ್ ಶಿರ್ಲಾಲು,ಅಕ್ಷಯ್ ಜೈನ್ ಅಳದಂಗಡಿ,ಜೆಸಿ ನಾರಾಯಣ ಶೆಟ್ಟಿ ಹಾಗೂ ಅರಿಹಂತ್ ಅವರ ಮನೆಯವರು,ಬಂಧು- ಮಿತ್ರರು ಉಪಸ್ಥಿತರಿದ್ದರು.

ಆಗಮಿಸಿದ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕ ಅರಿಹಂತ್ ಜೈನ್ ಸ್ವಾಗತಿಸಿ, ಸತ್ಕರಿಸಿದರು.











