24.8 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಲವಂತಿಗೆ ಶಿವಾನಿ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ

ಮಲವಂತಿಗೆ ಗ್ರಾಮ ಪಂಚಾಯತ್ ಮಟ್ಟದ ಶಿವಾನಿ ಸಂಜೀವಿನಿ ಮಹಿಳಾ ಒಕ್ಕೂಟ (ರಿ)ಇದರ ಮಹಾಸಭೆಯನ್ನು ಸೆ.24 ರಂದು ಮಲವಂತಿಗೆ ಶಾಲಾ ವಠಾರದಲ್ಲಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಕೃಪಾ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷರು ವಲಯಮೇಲ್ವಿಚಾರಕರು ಹಾಗೂ ಎಲ್ಲಾ ಗಣ್ಯರು ಸಭಾ ಕಾರ್ಯಕ್ರಮ ವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು.

ಸ್ವಚ್ಛತಾ ಸಿಬ್ಬಂದಿ ರೇವತಿ ಮತ್ತು ಸಮುದಾಯ ಬಂಡವಾಳ ನಿಧಿ ಸಾಲ ಪಡೆದು ಹೈನುಗಾರಿಕೆ ನಡೆಸಿ ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದಿದ ನಾಗಮ್ಮ ಇವರನ್ನು ಒಕ್ಕೂಟದ ವತಿಯಿಂದ ಅಭಿನಂದಿಸಲಾಯಿ‌ತು.

ವಲಯ ಮೇಲ್ವಿಚಾರಕರು ಸಂಜೀವಿನಿ ಯೋಜನೆಯ ಉದ್ದೇಶ ಮತ್ತು ಮಹಿಳೆಯರು ಸ್ವಉದ್ಯೋಗ ಮಾಡಿ ಆರ್ಥಿಕವಾಗಿ ಸ್ವಾವಲಂಬಿ ಜೀವನವನ್ನು ನಡೆಸಬೇಕು ಮತ್ತು ಮಹಿಳೆಯರಿಗೆ ಸಿಗುವಂತಹ ಸರ್ಕಾರದ ಯೋಜನೆಗಳ ಬಗ್ಗೆ ವಿವರಿಸಿ ಎಲ್ಲರನ್ನು ಶುಭ ಹಾರೈಸಿದರು. ಸಭೆಯಲ್ಲಿ ಸಂಜೀವಿನಿ ಧ್ಯೇಯ ಗೀತೆ ಹಾಡಲಾಯಿತು. ಅದೃಷ್ಟ ಮಹಿಳೆ ಎಂಬ ಆಟ ನಡೆಸಿ ಬಹುಮಾನ ವಿತರಿಸಲಾಯಿತು. ಹೊಸದಾಗಿ ರಚನೆಯಾದ ಸಂಘದ ಸದಸ್ಯರನ್ನು ಹೂವು ನೀಡುವುದರ ಮೂಲಕ ಒಕ್ಕೂಟಕ್ಕೆ ಸ್ವಾಗತಿಸಲಾಯಿತು.ಸಿಹೆಚ್ ಒ ರಮ್ಯಾ ಲಿಂಗತ್ವ ಆಧಾರಿತ ಮಾಹಿತಿ ಮತ್ತು ಆರೋಗ್ಯದ ಬಗೆಗಿನ ಮಾಹಿತಿಯನ್ನು ಉತ್ತಮ ರೀತಿಯಲ್ಲಿ ನೀಡಿದರು.

ವಿನೋದ ಸ್ವಾಗತಿಸಿದರು. ಕೃಷಿ ಸಖಿ ಹೇಮಾವತಿ 2024-25 ರ ವಾರ್ಷಿಕ ವರದಿಯನ್ನು, ರೇಖಾ ನಿರೂಪಿಸಿ ಜಮಾ ಮತ್ತು ಖರ್ಚು ಮಂಡಿಸಿದರು. ಪೂರ್ಣಿಮಾ ಅವರು ಧನ್ಯವಾದವಿತ್ತರು.

Related posts

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಸನ್: ಅತ್ಯುತ್ತಮ ವಲಯ ಪ್ರಶಸ್ತಿಯಲ್ಲಿ ಬೆಳ್ತಂಗಡಿ ವಲಯ ತೃತೀಯ ಸ್ಥಾನ

Suddi Udaya

ಕರ್ನಾಟಕ ಮುಸ್ಲಿಮ್ ಜಮಾಅತ್ (ಕೆ.ಎಂ.ಜೆ) ಗುರುವಾಯನಕೆರೆ ಸರ್ಕಲ್‌ನ ನೂತನ ಸಮಿತಿ ರಚನೆ

Suddi Udaya

ಸಂಚಾರಿಸುತ್ತಿದ್ದ ಬೈಕ್ ಮೇಲೆ ಕಾಡುಕೋಣ ದಾಳಿ: ಸವಾರನಿಗೆ ಗಾಯ

Suddi Udaya

ಬಾಯ೯ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಭಕ್ತರಿಂದ ಭಜನಾ ಸಂಕೀರ್ತನೆ

Suddi Udaya

ವಲಯ ಮಟ್ಟದ ಗೀತ ಗಾಯನ ಸ್ಪರ್ಧೆ :ನಡ ಸ.ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ

Suddi Udaya

ಸಿವಿಲ್‌ ಇಂಜಿನಿಯರಿಂಗ್‌ ಪ್ರಾಜೆಕ್ಟ್ ಆವಿಷ್ಕಾರಕ್ಕೆ ಇಂಗ್ಲೆಂಡ್‌ ಮೂಲದ ಪೇಟೆಂಟ್ ಲಭ್ಯ

Suddi Udaya
error: Content is protected !!