September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕುತ್ಲೂರು: ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯಿಂದ ವಾತ್ಸಲ್ಯ ಮನೆ ಹಸ್ತಾಂತರ

ನಾರಾವಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಗುರುವಾಯನಕೆರೆ, ನಾರಾವಿ ವಲಯದ ಕುತ್ಲೂರು ಗ್ರಾಮದ ದರ್ಖಾಸು ಎಂಬಲ್ಲಿ ವಾಸವಾಗಿರುವ ಸುಶೀಲ ರವರಿಗೆ ವಾತ್ಸಲ್ಯ ಮನೆಯನ್ನು ಅನಿತಾ ಸುರೇಂದ್ರ ಕುಮಾರ್, ಶ್ರದ್ಧಾ ಅಮಿತ್ ಹಾಗೂ ಕುಮಾರಿ ಮೈತ್ರಿ ಅವರಿಂದ ಸುಶೀಲ ಇವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್, ಪಾರ್ಶ್ವನಾಥ ಬಂಗ ಸಾಲ್ಯೂರು ಗುತ್ತು ಅಧ್ಯಕ್ಷರು ಪರುಷಗುಡ್ಡೆ ಜಿನ ಬಸದಿ ಕುತ್ಲೂರು, ವಸಂತ ಭಟ್ ಮತ್ತು ವಿನಯ ಕುಮಾರ್ ಹೆಗ್ಡೆ ಸಂಚಾಲಕರು ಧರ್ಮಸ್ಥಳ ಸತ್ಯದರ್ಶನ ಸಮಿತಿ, ಮಹಾವೀರ ಅಜ್ರಿ ಧರ್ಮಸ್ಥಳ, ನಾರಾವಿ ವಲಯ, ಸದಾನಂದ ಬಂಗೇರ ಅಧ್ಯಕ್ಷರು ಕೇಂದ್ರ ಪ್ರಗತಿ ಬಂಧು ಒಕ್ಕೂಟ , ನಿರ್ದೇಶಕರು, ಶ್ರೀಮತಿ ಅಮೃತಾ ಶೆಟ್ಟಿ ಮತ್ತು ವಲಯದ ಗಣ್ಯರು ಗಳಾದ ಜಯಂತ್ ಕೋಟ್ಯಾನ್ ಮರೋಡಿ, ಶಶಿಕಾಂತ ಆರಿಗ ಕುತ್ಲೂರು, ಉದಯ ಕುಮಾರ್ ಹೆಗ್ಡೆ ನಾರಾವಿ, ರಾಜು ಶೆಟ್ಟಿ ಕೊಕ್ರಾಡಿ, ವಿಶ್ವನಾಥ ಶೆಟ್ಟಿ ಸುಳ್ಕೇರಿ, ಡಾಕಯ್ಯ ಪೂಜಾರಿ, ತುಂಗಪ್ಪ ಪೂಜಾರಿ, ಆನಂದ ಪೂಜಾರಿ, ಕನಕವರ್ಮ ಜೈನ್, ಸುದಾರ್ಶನ್ ಹೆಗ್ಡೆ,ಕೃಷ್ಣಪ್ಪ ಪೂಜಾರಿ, ಶಿವಣ್ಣ ಶೆಟ್ಟಿ , ಪ್ರಭಾಕರ ದೇವಾಡಿಗ, ರತ್ನಾಕರ ಸಾಲ್ಯಾನ್,ಕೇಶವ ಪೂಜಾರಿ ,ಮತ್ತು ಶ್ರೀಮತಿ ಶಾರದಾ ,ಯಶೋಧಾ, ರಾಜಶ್ರೀ ಕುತ್ಲೂರು ಹಾಗೂ ಸಂತೋಷ್ ಮತ್ತು ಏಕನಾಥ ಅಧ್ಯಕ್ಷರು ಗಳು ಪ್ರಗತಿ ಬಂಧು ಒಕ್ಕೂಟ ಎ,ಬಿ ಕುತ್ಲೂರು ಶ್ರೀಮತಿ ವಾರಿಜಾ ಕೊಕ್ರಾಡಿ, ರಾಜು ಪೂಜಾರಿ ಮರೋಡಿ.ಬಿ, ದಿನೇಶ್ ಶೆಟ್ಟಿ, ಸಂಯೋಜಕರು ಹಾಗೂ ಪ್ರತಿನಿಧಿಗಳು ಶೌರ್ಯ ವಿಪತ್ತು ಘಟಕ ನಾರಾವಿ ವಲಯ, ಸಂತೋಷ್ ಕುಮಾರ್ ಮತ್ತು ಮಂಜುಶ್ರೀ ಕುಣಿತ ಭಜನಾ ಮಂಡಳಿ ಕುತ್ಲೂರು, ಹಾಲು ಉತ್ಪಾದಕರ ಸಹಕಾರ ಸಂಘ ಕುತ್ಲೂರು , ಅಧ್ಯಕ್ಷರು/ಸದಸ್ಯರು ಜನಜಾಗೃತಿ ಸಮಿತಿ ಕುತ್ಲೂರು ಮತ್ತು ನಾರಾವಿ ವಲಯದ ಎಲ್ಲಾ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಹಾಗೂ ವಲಯ ಒಕ್ಕೂಟದ ಪದಾಧಿಕಾರಿಗಳು , ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು , ಗ್ರಾಮಸ್ಥರು ಉಪಸ್ಥಿತರಿದ್ದರು.


ಗುರುವಾಯನಕೆರೆ ಯೋಜನಾಧಿಕಾರಿ ಅಶೋಕ್ ಬಿ. ಸ್ವಾಗತಿಸಿದರು, ಕಾರ್ಯಕ್ರಮದ ಸಂಯೋಜನೆಯನ್ನು ನಾರಾವಿ ವಲಯ ಮೇಲ್ವಿಚಾರಕಿ ಶ್ರೀಮತಿ ವಿಶಾಲ ಕೆ ನಿರ್ವಹಿಸಿ, ಕುತ್ಲೂರು ಕರುಣಾಕರ್ ಜೈನ್ ವಂದಿಸಿದರು.

Related posts

ಬೆಳ್ತಂಗಡಿ ಮುಳಿಯ ಜುವೆಲ್ಲರ್ಸ್ ವತಿಯಿಂದ ಅಟ್ಲಾಜೆ ಸ.ಕಿ.ಪ್ರಾ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ

Suddi Udaya

ಬಂದಾರು ಸರಕಾರಿ ಶಾಲೆಯಲ್ಲಿ ಪೋಷಕರಿಂದ ಶ್ರಮದಾನ

Suddi Udaya

ಬೆಳಾಲು: ಮಾಯ ಸ.ಉ.ಪ್ರಾ. ಶಾಲೆಯಲ್ಲಿ ರೂ.8.35 ಲಕ್ಷ ವೆಚ್ಚದಲ್ಲಿ ಶಾಲಾ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ

Suddi Udaya

ಜಾಗದ ನೋಂದಣಿ ಮಾಡಿಕೊಡುವುದಾಗಿ ಹಣ ಪಡೆದು ವಂಚನೆ ಆರೋಪ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಎಸ್‌ಡಿಟಿಯು ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಮಾಸಿಕ ಸಭೆ.

Suddi Udaya

ಯಕ್ಷಧ್ರುವ ಯಕ್ಷ ಶಿಕ್ಷಣ ನಾಟ್ಯಾಭ್ಯಾಸ

Suddi Udaya
error: Content is protected !!