25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪ್ರಸನ್ನ ಫಾರ್ಮಸಿ ಕಾಲೇಜಿನಲ್ಲಿ ವಿಶ್ವ ಫಾರ್ಮಸಿಸ್ಟ್ ದಿನಾಚರಣೆ

ಬೆಳ್ತಂಗಡಿ: ಪ್ರಸನ್ನ ಎಜ್ಯುಕೇಶನ್ ಟ್ರಸ್ಟ್ನಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸನ್ನ ಫಾರ್ಮಸಿ ಕಾಲೇಜು, ಬೆಳ್ತಂಗಡಿಯಲ್ಲಿ ವಿಶ್ವ ಫಾರ್ಮಸಿಸ್ಟ್ ದಿನಾಚರಣೆ ಸೆ.25 ರಂದು ಭವ್ಯವಾಗಿ ನೆರವೇರಿತು.

ಮುಖ್ಯ ಅತಿಥಿಗಳಾಗಿ ಶ್ರೀ ಗುರುರಾಜ ಪಡ್ವೇತನಯ, ಹಿರಿಯ ಫಾರ್ಮಸಿಸ್ಟ್, ಗುರುದೇವಿ ಮೆಡಿಕಲ್, ಉಜಿರೆ ಅವರು ಆಗಮಿಸಿ, ಫಾರ್ಮಸಿಸ್ಟ್ ವೃತ್ತಿಯ ಮಹತ್ವ ಹಾಗೂ ಆರೋಗ್ಯ ಸೇವೆಯಲ್ಲಿ ಅವರ ಅವಿಭಾಜ್ಯ ಪಾತ್ರವನ್ನು ವಿವರಿಸಿದರು.

ಕಾರ್ಯಕ್ರಮವು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಮಲ್ಲಿಕಾರ್ಜುನ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಪ್ರಸನ್ನ ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ಡಾ. ರೇಷ್ಮಾ ಜಿ ಗೌಡ, ಪ್ರಸನ್ನ ಆಯುರ್ವೇದ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ. ಬಿ.ಕೆ. ಪ್ರಶಾಂತ್, ಹಾಗೂ ಪ್ರಸನ್ನ ಐಟಿಐ ಕಾಲೇಜು ಪ್ರಾಂಶುಪಾಲ ಅಖಿಲೇಶ್ ಕೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಲ್ಲರೂ ಒಟ್ಟಾಗಿ ಔಷಧಶಾಸ್ತ್ರಜ್ಞರ ಪ್ರತಿಜ್ಞಾ ವಚನ ಸ್ವೀಕರಿಸಿದರು. ಅತಿಥಿಗಳ ಪ್ರೇರಣಾದಾಯಕ ಭಾಷಣದಿಂದ ವಿದ್ಯಾರ್ಥಿಗಳಲ್ಲಿ ಫಾರ್ಮಸಿ ವೃತ್ತಿಯ ಬಗ್ಗೆ ಅರಿವು ಹಾಗೂ ಹೊಣೆಗಾರಿಕೆಯ ಭಾವನೆ ಇನ್ನಷ್ಟು ಗಾಢವಾಯಿತು.


ಸಮಾರಂಭವನ್ನು ಪ್ರತೀಕ್ಷಾ ನಿರೂಪಿಸಿದರು. ಹಿಲಾನಾ ಸ್ವಾಗತಿಸಿ, ಡಾ. ದೀಕ್ಷಾ ಕೃತಜ್ಞತಾಪೂರ್ವಕ ವಂದನಾ ಪ್ರಸ್ತಾಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಶಿಕ್ಷಕ ವೃಂದ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ದಿನಾಚರಣೆಯನ್ನು ಯಶಸ್ವಿಗೊಳಿಸಿದರು.

Related posts

ಬೊಳಿಯಾರು ಆಟೋ ರಿಕ್ಷಾದ ಮೇಲೆ ಕಾಡಾನೆ ದಾಳಿ: ಆಟೋ ಚಾಲಕ ದಿನೇಶ್‌ರವರನ್ನು ಭೇಟಿಯಾದ ರಕ್ಷಿತ್ ಶಿವರಾಂ

Suddi Udaya

ಲಯನ್ಸ್ ಕ್ಲಬ್ ವತಿಯಿಂದ ಈದ್ ಸೌಹಾರ್ದ ಸಂದೇಶ ಕಾರ್ಯಕ್ರಮ: ಭಾರತ ಸೌಹಾರ್ದತೆಯ ಸುಂದರ ಹೂದೋಟ- ಝಮೀರ್ ಸ‌ಅದಿ

Suddi Udaya

ಉಜಿರೆ ಎಸ್.ಡಿ.ಎಮ್ ಸಿ.ಬಿ.ಎಸ್.ಇ ಶಾಲೆಯ ವಿದ್ಯಾರ್ಥಿಗಳಿಗೆ ದ್ವಿತೀಯ ಸೋಪಾನ ಹಾಗೂ ದ್ವಿತೀಯ ಚರಣ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

Suddi Udaya

ಚಾಂದ್ರಮಾನ ಯುಗಾದಿಯಂದು ಮದ್ದಡ್ಕ ತಾಯಿ ಪಿಲಿಚಾಮುಂಡಿ ದೈವದ ವರ್ಷಾವಧಿ ನೇಮೋತ್ಸವ

Suddi Udaya

ಬೆಳಾಲುಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಉಚಿತ ಯೋಗ ಶಿಬಿರ

Suddi Udaya

ಕಲ್ಮಂಜ ಗ್ರಾಮದ ಮಿಯ ನಿವಾಸಿ ಉಜಿರೆ ಅಡಿಕೆ ವ್ಯಾಪಾರಿ ಅಚ್ಚುತ ಭಟ್ ಮನೆಯಿಂದ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ: ರೂ.8.42 ಲಕ್ಷ ನಗದು ಸಹಿತ ಚಿನ್ನಾಭರಣ ವಶ: ನಾಲ್ಕು ವರ್ಷಗಳ ಹಿಂದೆ ಮನೆಯವರನ್ನು ಕಟ್ಟಿ ಹಾಕಿ ನಡೆದ ದರೋಡೆ

Suddi Udaya
error: Content is protected !!