25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸೆ.28: ಬಳಂಜದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿಯಿಂದ ಸಾರ್ವಜನಿಕ ಶ್ರೀ ಶಾರದೋತ್ಸವ

ಬಳಂಜ: ಕಳೆದ ನಾಲ್ಕೂವರೆ ದಶಕಗಳ ಭವ್ಯ ಪರಂಪರೆಯಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿಯು ವಿನೂತನ ಕಾರ್ಯಕ್ರಮಗಳ ಮೂಲಕ ಎಲ್ಲರ ಗಮನ ಸೆಳೆದ ಸಂಘಟನೆಯಾಗಿದೆ. ಸಂಘದ ನೇತೃತ್ವದಲ್ಲಿ ಹಾಗೂ ಊರವರ ಸಹಕಾರದೊಂದಿಗೆ ತೃತೀಯ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವವು ಸೆ.28 ರಂದು ವಿವಿಧ, ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಭಜನಾ ಕಾರ್ಯಕ್ರಮಗಳೊಂದಿಗೆ ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ವಿಜೃಂಭಣೆಯಿದ ಜರುಗಲಿದೆ ಎಂದು ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಬಳಂಜ ತಿಳಿಸಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಬರೋಡ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಭಗೀರಥ ಜಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ ಪುಷ್ಪಗಿರಿ, ಪುತ್ತೂರು ಅಕ್ಷಯ ಕಾಲೇಜು ಅಧ್ಯಕ್ಷ ಜಯಂತ್ ನಡುಬೈಲು, ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಶಶಿಧರ ಡೋಂಗ್ರೆ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್, ಭಾರತೀಯ ಮಜ್ದೂರು ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು, ಗುರುವಾಯನಕೆರೆ ಕೆನರಾ ಸ್ಟೆöÊನ್ ಲೆಸ್ ಸ್ಟೀಲ್ ಇಂಡಸ್ಟ್ರೀಸ್ ಮಾಲಕ ವಿನಯಚಂದ್ರ ಭಾಗವಹಿಸಲಿದ್ದಾರೆ. ಹಾಗೂ ಬೆಳಿಗ್ಗೆ ಗಂಟೆ 8.30ರಿಂದ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ ಎಂದರು.


ಸಾಧಕರಿಗೆ ಸನ್ಮಾನ: ಶಾರದೋತ್ಸವ ಕಾರ್ಯಕ್ರಮದಲ್ಲಿ ವಿಜಯರತ್ನ ಪ್ರಶಸ್ತಿ ಪುರಸ್ಕೃತರಾದ ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ, ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ ಕೆ.ಮೋಹನ್ ಕುಮಾರ್, ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ, ಶೈಕ್ಷಣಿಕ ಕ್ಷೇತ್ರದ ಯುವ ಸಾಧಕ ಸುಮಂತ್ ಕುಮಾರ್ ಜೈನ್, ಧಾರ್ಮಿಕ ಕ್ಷೇತ್ರದ ಪ್ರೋತ್ಸಾಹಕ, ಗುಜರಾತ್ ಉದ್ಯಮಿ ಶೇಖರ್ ದೇವಾಡಿಗ ಪಾಲಬೆ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದರು.


ಕಾರ್ಯಕ್ರಮಗಳು: ಬೆಳಿಗ್ಗೆ ವೈದಿಕ ಕಾರ್ಯಕ್ರಮಗಳು, ಭಜನಾ ಕಾರ್ಯಕ್ರಮ, ೯.೩೦ಕ್ಕೆ ಶ್ರೀ ಶಾರದಾ ದೇವಿಯ ಮೂರ್ತಿ ಪ್ರತಿಷ್ಠೆ, ಬೆಳಿಗ್ಗೆ ಗಂಟೆ ೧೦ ರಿಂದ ಮಕ್ಕಳಿಗೆ ಅಕ್ಷರಾಭ್ಯಾಸ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಮಧ್ಯಾಹ್ನ ೧.೦೦ ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ೫.೦೦ಕ್ಕೆ ಮಹಾಪೂಜೆ, ಮಂಗಳಾರತಿ, ಸಂಜೆ ೫.೩೦ರಿಂದ ದೇವರ ಭವ್ಯ ಶೋಭಾಯಾತ್ರೆಯು ವಿವಿಧ ವೇಷ ಭೂಷಣಗಳೊಂದಿಗೆ ಸುಡುಮದ್ದು ಪ್ರದರ್ಶನ, ಭಜನೆ, ಕಲಾತಂಡಗಳ ಸಹಿತ ಕಾಪಿನಡ್ಕ ಪಲ್ಗುಣಿ ನದಿಯಲ್ಲಿ ಶಾರದಾ ದೇವಿಯ ಮೂರ್ತಿ ವಿಸರ್ಜನೆ ನಡೆಯಲಿದೆ ಎಂದರು.

ವಿಶೇಷ ಆಕರ್ಷಣೆ
ಹರೀಶ್ ವೈ ಚಂದ್ರಮ ಮತ್ತು ಸಂದೇಶ್ ಮದ್ದಡ್ಕ ಇವರ ಸಹಕಾರದೊಂದಿಗೆ ಜಿಲ್ಲೆಯ ಪ್ರಸಿದ್ದ ಭಜನಾ ತಂಡಗಳ ೫೦೦ ಕ್ಕೂ ಹೆಚ್ಚಿನ ಭಜಕರಿಂದ ಕುಣಿತ ಭಜನೆ, ಆಕರ್ಷಕ ಸುಡುಮದ್ದು ಪ್ರದರ್ಶನ, ಶ್ರೀಮಾತ ನಾಲ್ಕೂರು ತಂಡದ ನೇತೃತ್ವದಲ್ಲಿ ಟ್ಯಾಬ್ಲೋ, ಕರಾವಳಿಯ ಪ್ರಸಿದ್ಧ ಕಲಾವಿದರಿಂದ ನಾಸಿಕ್ ಬ್ಯಾಂಡ್ ಪ್ರದರ್ಶನ, ಊರ- ಪರವೂರ ಕಲಾಪ್ರತಿಭೆಗಳಿಂದ ಸಾಂಸ್ಕೃತಿಕ ವೈಭವ, ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಪಿಲಿ ನಲಿಕೆ, ಗೊಂಬೆ ಕುಣಿತ, ಟ್ಯಾಬ್ಲೊ.

ಪುರುಷರಿಗೆ ೫೫೦ ಕೆ.ಜಿ ವಿಭಾಗದ ಮುಕ್ತ ಹಗ್ಗಜಗ್ಗಾಟ ಸ್ಪರ್ಧೆ: ಶಾರದೋತ್ಸವದ ಪ್ರಯುಕ್ತ ಪುರುಷರಿಗೆ ೫೫೦ ಕೆ.ಜಿ ವಿಭಾಗದ ಮುಕ್ತ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯು ಸರಿಯಾಗಿ ೧೨ ಗಂಟೆಗೆ ಪ್ರಾರಂಭವಾಗಲಿದೆ.ಪ್ರಥಮ ರೂ ೫೦೦೦ ಮತ್ತು ಟ್ರೋಪಿ, ದ್ವೀತಿಯ ರೂ.೩೦೦೦ ಮತ್ತು ಟ್ರೋಪಿ, ತೃತೀಯ ೧೦೦೦ ಮತ್ತು ಟ್ರೋಪಿ, ಪ್ರವೇಶ ಶುಲ್ಕ ರೂ. ೫೦೦ ನಿಗದಿಪಡಿಸಲಾಗಿದೆ. ಮಾಹಿತಿಗಾಗಿ ೮೮೬೧೫೧೪೮೭೦ ನಂಬರನ್ನು ಸಂಪರ್ಕಿಸಬಹುದಾಗಿದೆ.

Related posts

ಉಜಿರೆ: ವಾಸದ ಮನೆ ಕೆಡವಿ ಮನೆ ಸೊತ್ತು ಬೀದಿಗೆಸೆದ ವಿಲಕ್ಷಣ ಘಟನೆ: ವೀಡಿಯೋ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಗೆ ಜೀವ ಬೆದರಿಕೆ

Suddi Udaya

ಉಜಿರೆ ಎಸ್. ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಉದ್ಯಮಶೀಲತೆ ಕಾರ್ಯಾಗಾರ

Suddi Udaya

ಪುಂಜಾಲಕಟ್ಟೆ: ಶಂಕಿತ ರೇಬಿಸ್ ಗೆ ಪ್ರಶಾಂತ್ ಮೃತ್ಯು

Suddi Udaya

ಮಾವಿನಕಟ್ಟೆ: ಸ್ವಾತಿ ಎಂ. ಶೆಟ್ಟಿರವರಿಗೆ ಬೆಸ್ಟ್ಔಟ್ ಗೋಯಿಂಗ್ ಸ್ಟೂಡೆಂಟ್ ಅವಾರ್ಡ್ ಪ್ರಶಸ್ತಿ

Suddi Udaya

ಕನ್ಯಾಡಿ ಶ್ರೀ ರಾಮಕ್ಷೇತ್ರಕ್ಕೆ ಧರ್ಮಸ್ಥಳ ಗ್ರಾಮದ ಭಕ್ತರಿಂದ ಹೊರೆಕಾಣಿಕೆ ಪ್ರಯುಕ್ತ ಅಕ್ಕಿ ಸಮರ್ಪಣೆ

Suddi Udaya

ಕಳಿಯ ಗ್ರಾ.ಪಂ. ಮಟ್ಟದ ವೈಷ್ಣವಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya
error: Content is protected !!