September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಓಡಿಲ್ನಾಳ ಶ್ರೀ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 3ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ, ಧಾರ್ಮಿಕ ಸಭೆ

ಓಡಿಲ್ನಾಳ: ಶ್ರೀ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀರಾಮನಗರ ಮೈರಲ್ಕೆ ಓಡಿಲ್ನಾಳ ಇಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ‌ಯ ವತಿಯಿಂದ 3ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಕಾರ್ಯಕ್ರಮ ಸೆ 28 ಮತ್ತು 29‌ ರoದು ಜರಗಿತು.

ಸೆ. 28 ರoದು ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾದ ಪ್ರಸನ್ನ ಭಟ್ ಇವರ ನೇತೃತ್ವದಲ್ಲಿ ವಿಶೇಷ ವೈದಿಕ ಕಾರ್ಯಕ್ರಮ ಗಣಪತಿ ಹೋಮ ಶ್ರೀ ಕಿರಾತ ಮೂರ್ತಿ ಮಹಾಲಿಂಗೇಶ್ವರ ದೇವರಿಗೆ ರುದ್ರಾಭಿಷೇಕ ದುರ್ಗಾ ದೀಪ ನಮಸ್ಕಾರ ಪೂಜೆ ಭಜನಾ ಕಾರ್ಯಕ್ರಮ ಜರಗಿತು.

ಸೆ. 29 ರoದು ಶಾರದಾ ದೇವಿಯ ವಿಗ್ರಹ ಪ್ರತಿಷ್ಠಾಪನೆ ಬೆಳಗ್ಗಿನ ಮಹಾಪೂಜೆ ಪ್ರಸಾದ ವಿತರಣೆ ಮಧ್ಯಾಹ್ನ ಧಾರ್ಮಿಕ ಸಭೆ ಜರಗಿತು ಧಾರ್ಮಿಕ ಸಭೆಯ ಸಭಾಧ್ಯಕ್ಷತೆಯನ್ನು ಶಾರರ್ದೋತ್ಸವ ಸಮಿತಿಯ ಅಧ್ಯಕ್ಷರಾದ ನಿತೇಶ್ ಕೆ ಓಡಿಲ್ನಾಳ ವಹಿಸಿದ್ದರು‌‌ .

ಧಾರ್ಮಿಕ ಉಪನ್ಯಾಸಕರಾಗಿ ಆಗಮಿಸಿದ ಸಾಮಾಜಿಕ ಚಿಂತಕರು ರಮಿತ ಶೈಲೇಂದ್ರ ಕಾರ್ಕಳ ಮಾತನಾಡಿ ಶಾರದಾ ದೇವಿಯ ಆರಾಧನೆ ದೇವಸ್ಥಾನಗಳಲ್ಲಿ ಅಲ್ಲದೆ ನವರಾತ್ರಿಯ ದಿನಗಳ ಮಹತ್ವದ ಬಗ್ಗೆ ಮನೆ ಮನೆಗಳಲ್ಲಿ ಯುವ ಪೀಳಿಗೆಗಳಿಗೆ ಧಾರ್ಮಿಕತೆಯನ್ನು ಮೂಡಿಸುವಲ್ಲಿ ನಮ್ಮೆಲ್ಲರ ಕರ್ತವ್ಯವಾಗಿದೆ ಎoದರು ಮುಖ್ಯ ಅತಿಥಿಯಾಗಿ ಬರೋಡದ ಉದ್ಯಮಿಗಳಾದ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ.‌ ಮುoಬೈ ಉದ್ಯಮಿಗಳಾದ ಸುರೇಶ್ ಶೆಟ್ಟಿ ಶಬರಿ ಮುಂಗೇಲು.

ನಿವೃತ್ತ ಅಧ್ಯಾಪಕರಾದ ಬೇಬಿ ಸುರೇಶ್ ಬಾಬು ಗುರು ರಾಘವೇಂದ್ರ ಕೃಪ ಪಣೆಜಾಲು ಆಗಮಿಸಿದ್ದರು. ವೇದಿಕೆಯಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲ ಶೆಟ್ಟಿ ಕೋರಿಯಾರು, ಶಾರದೋತ್ಸವ ಸಮಿತಿ ಗೌರಾಧ್ಯಕ್ಷ ರಾಮಣ್ಣ ಕೋಲಾಜೆ, ಪ್ರಧಾನ ಕಾರ್ಯದರ್ಶಿ, ಸುದೀಪ್ ಶೆಟ್ಟಿ ಮೂಡೈಲು. ಮಹಿಳಾ ಸಮಿತಿಯ ಅಧ್ಯಕ್ಷ ಭಾರತಿ ಅಡ್ಡ ಕೊಡಂಗೆ, ಭಜನಾ ಸಮಿತಿಯ ಅಧ್ಯಕ್ಷ ಚಿನ್ನಯ್ಯ ಮೂಲ್ಯ ಪರಾರಿ ಉಪಸ್ಥಿತರಿದ್ದರು . ಸುದೀಪ್ ಶೆಟ್ಟಿ ಸ್ವಾಗತಿಸಿ, ನಿತಿನ್ ಬರಾಯ ಕಾರ್ಯಕ್ರಮ ನಿರೂಪಿಸಿದರು. ಭಾರತಿ ಎಸ್ ಶೆಟ್ಟಿ ಧನ್ಯವಾದವಿತ್ತರು. ಮಧ್ಯಾಹ್ನದ ಮಹಾಪೂಜೆ ಪ್ರಸಾದ ವಿತರಣೆ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಿತು. ಸಾಯಂಕಾಲ ಶಾರದಾ ದೇವಿಯ ವಿಸರ್ಜನಾ ಮೆರವಣಿಗೆ ನಡೆಯಲಿದೆ.

Related posts

ಕಳೆದ ಎರಡೂವರೆ ದಶಕಗಳಿಂದ ಅಮೂಲ್ಯ ಸೇವೆ ಸಲ್ಲಿಸಿದ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್. ಎಚ್. ಮಂಜುನಾಥ್ ರವರಿಗೆ ಬೀಳ್ಕೊಡುಗೆ

Suddi Udaya

ಕನ್ಯಾಡಿ II ಸ. ಉ. ಹಿ.ಪ್ರಾ. ಶಾಲೆಯಲ್ಲಿ ನೂತನ ಎಲ್‌ಕೆಜಿ ತರಗತಿ ಶುಭಾರಂಭ

Suddi Udaya

ಬೆಳ್ತಂಗಡಿ ಖಿಲರ್ ಜುಮ್ಮಾ ಮಸೀದಿಯಲ್ಲಿ ಮಿಲಾದ್ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ

Suddi Udaya

ಧರ್ಮಸ್ಥಳ ಶ್ರೀ ಮಂ.ಅ.ಪ್ರೌ. ಶಾಲೆಯಲ್ಲಿ ನೈತಿಕ ಶಿಕ್ಷಣ ಮತ್ತು ಕಾನೂನು ಅರಿವು ಕಾರ್ಯಕ್ರಮ

Suddi Udaya

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಉಜಿರೆಯಲ್ಲಿ ‘ಗುರುಪೂರ್ಣಿಮೆ ಮಹೋತ್ಸವ’

Suddi Udaya

ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನ ಹರಿದ್ವಾರ ಶಾಖಾ ಮಠಕ್ಕೆ ಮಾಜಿ ಸಂಸದ ನಳಿನ್ ಕುಮಾರ್ ಭೇಟಿ

Suddi Udaya
error: Content is protected !!