23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿ

ಗುರುವಾಯನಕೆರೆ ಗೆಳೆಯರ ಬಳಗ 35 ನೇ ವರ್ಷದ ಶಾರದೋತ್ಸವ ಆರಂಭ

ಗುರುವಾಯನಕೆರೆ: ಗೆಳೆಯರ ಬಳಗ ಗುರುವಾಯನಕೆರೆ ಇದರ ವತಿಯಿಂದ ಮತ್ತು ಊರ ಪರವೂರ ಭಕ್ತಾದಿಗಳ ಸಹಕಾರದಿಂದ ಗುರುವಾಯನಕೆರೆ ಶಾರದಾ ಮಂಟಪದಲ್ಲಿ 35 ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜೋತ್ಸವ ಸೆ.29 ರಿಂದ ಆರಂಭಗೊಂಡಿದ್ದು ಅ.2ರವರೆಗೆ ನಡೆಯಲಿದೆ.


ಸೆ.29 ರಂದು ಎಕ್ಸೆಲ್ ಪಿಯು ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ದೀಪ ಪ್ರಜ್ವಲಿಸುವ ಮೂಲಕ ಶಾರದೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಶಾರದೆ ಎಂದರೆ ವಿದ್ಯೆ, ಶಾರದೋತ್ಸವ ಕಾರ್ಯಕ್ರಮಗಳಿಗೆ ಪೋಷಕರು ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಕರೆದುಕೊಂಡು ಬರಬೇಕು, ಶಾರದೆಯ ಅನುಗ್ರಹದಿಂದ ಮಕ್ಕಳು ವಿದ್ಯಾಕ್ಷೇತ್ರದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಾರೆ. ನಾನು ಚಿಕ್ಕವನಿದ್ದಾಗ ನನ್ನ ಅಮ್ಮ ಉಜಿರೆಯ ಶಾರದೋತ್ಸವಕ್ಕೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ನಾನು ಶಿಕ್ಷಣ ಕ್ಷೇತ್ರದಲ್ಲಿ ಇಷ್ಟು ಸಾಧನೆ ಮಾಡಬೇಕಾದರೆ ಇದಕ್ಕೆ ಶಾರದೆಯ ಅನುಗ್ರಹವೇ ಸಾಕ್ಷಿ ಎಂದು ಹೇಳಿದರು.

ಎಕ್ಸೆಲ್ ವಿದ್ಯಾ ಸಂಸ್ಥೆ ಬೆಳೆಯುತ್ತಿರುವ ಕೂಸು, ಶಿಕ್ಷಣ ಸಂಸ್ಥೆ ಆರಂಭ ಹಂತದಲ್ಲಿ ಕೆಲವೊಂದು ಅಡೆ-ತಡೆಗಳು ಇರುವುದು ಸಾಮಾನ್ಯ ನಮಗೂ ಇದರ ಅನುಭವ ಆಗಿದೆ. ಮಕ್ಕಳು ಸಣ್ಣ ಪ್ರಾಯದಲ್ಲಿ ತಪ್ಪು ಮಾಡುವುದು ಸಹಜ ದೊಡ್ಡವರಾದ ಬಳಿಕ ಇದು ಸರಿಯಾಗುತ್ತದೆ. ಅದೇ ರೀತಿ ವಿದ್ಯಾ ಸಂಸ್ಥೆಗಳಿಗೂ ಇದು ಅನ್ವಯವಾಗುತ್ತದೆ. ಗುರುವಾಯನಕೆರೆಯಂತಹ ಗ್ರಾಮೀಣ ಪ್ರದೇಶದಲ್ಲಿ ವಿದ್ಯೆ ಸಂಸ್ಥೆ ಆರಂಭಿಸಿ ಮುನ್ನಡೆಸಲು ಎಲ್ಲರ ಸಹಕಾರ ದೊರಕಿದೆ. ಮುಂದೆಯೂ ಊರಿನವರ ಪೂರ್ಣ ಸಹಕಾರ ಬೇಕು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಸಮಿತಿ ಗೌರವಾಧ್ಯಕ್ಷ ಕೃಷ್ಣಾನಂದ ಜಿ.ಕುಲಾಲ್, ಅಧ್ಯಕ್ಷ ತಿಲಕ್ ರಾಜ್ ಕೋಡಿಬೈಲ್, ಉಪಾಧ್ಯಕ್ಷರಾದ ದಾಮೋದರ್.ಕೆ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕುಂಬ್ಲೆ, ಜೊತೆ ಕಾರ್ಯದರ್ಶಿ ಕಾರ್ತಿಕ್ ನಾಯಕ್, ಕೋಶಾಧಿಕಾರಿ ಗೋಪಿನಾಥ್ ನಾಯಕ್, ಕಾರ್ಯಕಾರಿ ಸಮಿತಿ ಸದಸ್ಯರಾದ ಕೃಷ್ಣಪ್ಪ ಟೈಲರ್, ಆನಂದ ಕೋಟ್ಯಾನ್, ಅಶೋಕ್ ಎಸ್, ವಿವೇಕಾನಂದ ಸಾಲ್ಯಾನ್, ಮೋಹನ್ ಕಂಚಿಂಜೆ, ರಾಜೇಶ್ ಕುಲಾಲ್, ಲೋಕೇಶ್ ಕೆ., ವಿಠಲ ಆಚಾರ್ಯ, ಶರಣ್‌ಕುಲಾಲ್, ಸುಂದರ ನಾಯ್ಕ, ವೇಣುಗೋಪಾಲ್ ಕಂಚಿಂಜೆ, ಮೋಹನ್ ಬಿ., ಲೋಕೇಶ್ ಜೆ, ಧನರಾಜ್, ರಕ್ಷಿತ್ ಶೆಣೈ, ಸುಧೀರ್ ಕಂಚಿಂಜೆ, ಕಾರ್ತಿಕ್ ನಾಯ್ಕ್ ಉಪಸ್ಥಿತರಿದ್ದರು. ಆನಂದ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.


ಬಳಿಕ ಮಕ್ಕಳಿಗೆ ಶಾರದೆಯ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಆಟೋಟ ಸ್ಪರ್ಧೆ ನಡೆಯಿತು. ಮಧ್ಯಾಹ್ನ ಶ್ರೀ ವೇದವ್ಯಾಸ ಬಾಲಗೋಕುಲ ಮಕ್ಕಳ ಭಜನಾ ತಂಡ ಹಾಗೂ ಶ್ರೀ ವೇದವ್ಯಾಸ ಮಾತೃಮಂಡಳಿ ಇವರಿಂದ ಭಜನಾ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.

Related posts

ಕೆಎಸ್‌ಆರ್‌ಟಿಸಿ ಧರ್ಮಸ್ಥಳ -ಮಂಗಳೂರು ನಡುವೆ ನಾಲ್ಕು ‘ಸೂಪರ್‌ಫಾಸ್ಟ್’ – ಬಸ್ಸು ಸಂಚಾರ ಪ್ರಾರಂಭ

Suddi Udaya

ಬೆಳ್ತಂಗಡಿಯಲ್ಲಿ ರಾಜಸ್ಥಾನ ಆರ್ಟ್‌ ಹಾಗೂ ಕ್ರಾಫ್ಟ್ ಬೃಹತ್ ಪ್ರದರ್ಶನ, ಮಾರಾಟ ಮೇಳ

Suddi Udaya

ಬೆಳ್ತಂಗಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ

Suddi Udaya

ಮತ್ತೆ ಬಂದಿದೆ ಮುಳಿಯ ಜ್ಯುವೆಲ್ಸ್ ಚಿನ್ನೋತ್ಸವ, ನ.10ರಿಂದ 30ರ ವರೆಗೆ: ಪುತ್ತೂರು ಮತ್ತು ಬೆಳ್ತಂಗಡಿಯ ಮುಳಿಯ ಜ್ಯುವೆಲ್ಸ್‌ನಲ್ಲಿ ಮಳಿಗೆಗಳಲ್ಲಿ ಚಿನ್ನದ ಹಬ್ಬ

Suddi Udaya

ಶಿರ್ಲಾಲು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಎಸ್ .ಎಸ್.ಎಲ್.ಸಿ ಯಲ್ಲಿ ರಾಜ್ಯಕ್ಕೆ 10ನೇ ಸ್ಥಾನ ಪಡೆದ ತ್ರಿಷಾ ರಿಗೆ ಸನ್ಮಾನ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya
error: Content is protected !!