23.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ 47ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಉದ್ಘಾಟನೆ

ಬೆಳ್ತಂಗಡಿ: ಸೆ.29ರಿಂದ ಅ.2ರವರೆಗೆ ನಡೆಯಲಿರುವ 47ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಉದ್ಘಾಟನಾ ಕಾರ್ಯಕ್ರಮವು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನ ಪಿನಾಕಿ ಸಮಾಜ ಮಂದಿರದಲ್ಲಿ ಇಂದು ನೆರವೇರಿತು.

ಬೆಳಿಗ್ಗೆ ಗಣಹೋಮ, ಶ್ರೀ ಶಾರದಾ ದೇವಿಯ ಪ್ರತಿಷ್ಟಾ ಕಾರ್ಯಕ್ರಮದ ನಂತರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಉದ್ಯಮಿ ಶಶಿಧರ ಶೆಟ್ಟಿ ಬರೋಡ ‘ನವಶಕ್ತಿ’, ಶ್ರೀ ಗುರು ದೇವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಭಗೀರಥ ಜಿ., ಬೆಳ್ತಂಗಡಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ದೇವದಾಸ ಶೆಟ್ಟಿ ಶ್ರೀಮತಿ ಸುಶೀಲ, ‘ಪ್ರಿಯದರ್ಶಿನಿ’ ಮುಗುಳಿ ರಸ್ತೆ, ಬೆಳ್ತಂಗಡಿ ಭಾಗವಹಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಮಿತಿ ಗೌರವಾಧ್ಯಕ್ಷ ನಾರಾಯಣ ರಾವ್, ಅಧ್ಯಕ್ಷ ಮುರಳಿಧರ, ಕೆಲ್ಲಗುತ್ತು ಉಪಾಧ್ಯಕ್ಷರಾದ , ಜಗದೀಶ ಡಿ., ಶಕ್ತಿ ಮೆಡಿಕಲ್ಸ್ ಬೆಳ್ತಂಗಡಿ, ಸಂಜೀವ ಎನ್. ಸಂಜಯನಗರ, ಸುರೇಂದ್ರ ಕೋಟ್ಯಾನ್ ಬೆಳ್ತಂಗಡಿ, ಕರುಣಾಕರ ಬಂಗೇರ ಕೆರಳೇಕೋಡಿ, ಸತೀಶ ಶೆಟ್ಟಿ ‘ದೊಡ್ಡಮನೆ’ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿ ನಾರಾಯಣ ಶೆಟ್ಟಿ, ಜೈನ್‌ಪೇಟೆ, ಜತೆಕಾರ್ಯದರ್ಶಿಗಳಾದ ತುಕಾರಾಮ್ ಸುದ್ದಿ ಉದಯ ಬೆಳ್ತಂಗಡಿ, ಹರೀಶ್ ಕೆಲ್ಲಗುತ್ತು, ಸಂತೋಷ್ ಕರ್ಕೇರ ಬೆಳ್ತಂಗಡಿ, ಭೋಜರಾಜ್ ಲಾಯಿಲ, ಕೃಷ್ಣಪ್ಪ ಕುಲಾಲ್ ಕಾಶಿಬೆಟ್ಟು, ಕೋಶಾಧಿಕಾರಿ ಬಿ. ಹೆಚ್. ರಾಜು ಸುದೆಮುಗೇರು ಸುಧಾ ಮಣಿ, ಗೌರವ ಸಲಹೆಗಾರರು ಹಾಗೂ ಲಾಯಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್. ಪಟ್ಟಣ ಪಂಚಾಯತಿ ಸದಸ್ಯ ಶರತ್ ಕುಮಾರ್ . ಸದಸ್ಯರಾದ ಸಂಕೇತ್. ಹಾಗೂ ಜಗದೀಶ್ ಹೆಗ್ಡೆ. ಚಂದ್ರ ರಾಜ್. ನೂಜೇಲು ಕಿರಣ್ ಕುಮಾರ್ ಶೆಟ್ಟಿ. ಉಪಸ್ಥಿತರಿದ್ದರು. ಕಲಾ ರತ್ನ ರಾಜೀವ್ ಬಿ. ಎಚ್ ಕಾರ್ಯಕ್ರಮವನ್ನು ನಿರೂಪಿಸಿದರು.

ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಸಂಜೆ ಬೆಳ್ತಂಗಡಿ ಶ್ರೀ ಕೃಷ್ಣ ಮುಖ್ಯಪ್ರಾಣ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಜರುಗಳಿರುವುದು.

ಸೆ.30ರಂದು ಬೆಳಗ್ಗೆ ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಭಕ್ತಿಗೀತೆ ಸ್ಪರ್ಧೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಭಗವಾನ್ ಶಿರ್ಡಿ ಶ್ರೀ ಸಾಯಿ ಸತ್ಯಸಾಯಿ ಸೇವಾಕ್ಷೇತ್ರ ಶ್ರೀ ಸಾಯಿನಗರ ಬೆಳ್ತಂಗಡಿ ಇವರಿಂದ
ಭಜನಾ ಕಾರ್ಯಕ್ರಮ, ರಾತ್ರಿ ಕಲಾ ಸಂಗಮ, ಕಲಾ ಸಂಭ್ರಮ ಸ್ಫೂರ್ತಿ ಕಲಾ ಸಂಗಮ, ಬೆಳ್ತಂಗಡಿ ಕಲಾರತ್ನ ಬಿ.ಹೆಚ್. ರಾಜು ಸಾರಥ್ಯದಲ್ಲಿ ಭಕ್ತಿ ರಸಮಂಜರಿ, ಜಾದೂ ಸಮ್ಮಿಲನ, ಮಹಾಪೂಜೆ, ಪ್ರಸಾದ ವಿತರಣೆ ಜಗಲಿರುವುದು.

ಅ.1ರಂದು ಬೆಳಗ್ಗೆ ಶ್ರೀ ಮಹಮ್ಮಾಯಿ ಭಜನಾ ಮಂಡಳಿ ಉಜಿರೆ ಇವರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ, ಸಂಜೆ ಹುಣ್ಸೆಕಟ್ಟೆ ಶ್ರೀ ರಾಮ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಜರುಗಲಿರುವುದು.

ಅ.2ರಂದು ಬೆಳಗ್ಗೆ ಬೆಳ್ತಂಗಡಿ ಶ್ರೀ ಸತ್ಯಸಾಯಿ ಸೇವಾ ಸಮಿತಿಯಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ ಸಂಧ್ಯಾಪೂಜೆ, ಶ್ರೀ ದೇವಿಯ ವಿಗ್ರಹ ವಿಸರ್ಜನಾ ಪೂಜೆ ನಡೆಯುವುದು. ಶೋಭಾಯಾತ್ರೆ ಸಂದರ್ಭದಲ್ಲಿ ಚೆಂಡೆ, ಸ್ಯಾಕ್ರೋಫೋನ್ ವಾದ್ಯಗಳೊಂದಿಗೆ ಹಾಗೂ ಭಜನಾ ತಂಡದಗಳೊಂದಿಗೆ ಬೆಳ್ತಂಗಡಿ ಲಾಯಿಲ ಶ್ರೀ ಗುರುರಾಘವೇಂದ್ರ ಮಠದ ಬಳಿ ಸೋಮಾವತಿ ನದಿಯಲ್ಲಿ ಶ್ರೀ ಶಾರದಾ ಮಾತೆಯ ವಿಗ್ರಹದ ವಿಸರ್ಜನೆಯಾಗಲಿದೆ.

Related posts

ಪೆರ್ಲ ಬೈಪಾಡಿ ಸ. ಹಿ. ಪ್ರಾ. ಶಾಲಾ ಮುಖ್ಯೋಪಾಧ್ಯಾಯಿನಿ ಜಯಶ್ರೀ ಕೆ.ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಮೇ 17: ಉಜಿರೆಯಲ್ಲಿ 5ನೇ ವರ್ಷದ ಸಂಭ್ರಮದ ಕೇರಳ ಸಾಂಪ್ರದಾಯಿಕ ವಿಷುಕಣಿ ಆಚರಣೆ: ಶಾಸಕ ಹರೀಶ್ ಪೂಂಜ

Suddi Udaya

ಬೆಳ್ತಂಗಡಿ ಮಾದರಿ ಶಾಲೆಯಲ್ಲಿ 78ನೇ ವರ್ಷದ ಸ್ವಾತಂತ್ರೋತ್ಸವ ಆಚರಣೆ

Suddi Udaya

ಬಳಂಜ: ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಹರೀಶ್ ವೈ ಆಯ್ಕೆ

Suddi Udaya

ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಹೆಚ್ಚಿಸಿ ಕೊಳ್ಳಬೇಕು: ಡಾ ಪ್ರಸನ್ನ ಕುಮಾರ್ ಐತಾಳ್

Suddi Udaya

ಬೆನಕ ಆಸ್ಪತ್ರೆಯಲ್ಲಿ ನೂತನ ಆವಿಷ್ಕಾರದ ಕ್ಷ-ಕಿರಣ ಯಂತ್ರ ಉದ್ಘಾಟನೆ

Suddi Udaya
error: Content is protected !!