28 C
ಪುತ್ತೂರು, ಬೆಳ್ತಂಗಡಿ
September 29, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಲ್ಮಂಜ ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘದ ವಿರುದ್ಧ ಆಧಾರ ರಹಿತ ಅಪಪ್ರಚಾರ ಆರೋಪ ಮುಖ್ಯ ಕಾರ್ಯನಿರ್ವಾಹಕರಿಂದ ಧರ್ಮಸ್ಥಳ ಠಾಣೆಗೆ ದೂರು

ಕಲ್ಮಂಜ: ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಇದರ ಮುಖ್ಯಕಾರ್ಯನಿರ್ವಾಹಕರ ಬಗ್ಗೆ ಆಧಾರ ರಹಿತ ಅಪಪ್ರಚಾರ ಹಾಗೂ ನಕಲಿ ಸಹಿಯ ಮನವಿ ಪತ್ರವನ್ನು ಸಾಮಾಜಿಕ ಜಾಲ ತಾಣದಲ್ಲಿ ಪ್ರಸರಿಸಿ, ಅಪಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿ ಸಂಘದ ಕಾರ್ಯದರ್ಶಿ ಸಚಿನ್ ಕುಮಾರ್ ಹೆಚ್. ಧರ್ಮಸ್ಥಳ ಪೊಲೀಸ್ ಠಾಣೆ, ಸಹಕಾರ ಇಲಾಖೆ ಮತ್ತು ದ. ಕ ಹಾಲು ಒಕ್ಕೂಟಕ್ಕೆ ದೂರು ನೀಡಿದ್ದಾರೆ.

ರಾಜ್ ಕಿಶನ್ ಪಿಂಟೊ, ಅಕ್ಷಯ ನಗರ, ನಿಡಿಗಲ್ ಇವರು ಸಂಘದ ಸದಸ್ಯರಲ್ಲದಿದ್ದರೂ ತಾನು ಸಂಘದ ಪ್ರಮುಖ ಸದಸ್ಯನೆಂದು ಹೇಳಿಕೊಂಡು, ದರ್ಶನ್ ಕೆ.ಪಿ, ಬೀಜದಪಾಡಿ, ಕಲ್ಮಂಜರವರೊಂದಿಗೆ ಸೇರಿಕೊಂಡು ಸಂಘದ ಹೆಸರು ಬಳಸಿಕೊಂಡು ಸಂಘ ಹಾಗೂ ಸಂಘದ ಸದಸ್ಯರ ವಿರುದ್ಧ ಆಧಾರರಹಿತ ಆರೋಪಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಪ್ರಸಾರ ಮಾಡುತ್ತಿದ್ದಾರೆ. ಅಲ್ಲದೆ, ಕೆಲವು ನಕಲಿ ಸಹಿಗಳನ್ನು ಒಳಗೊಂಡ ಮನವಿಯನ್ನು ಸಿದ್ಧಪಡಿಸಿ ಪ್ರಸಾರ ಮಾಡಿ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಇದೇ ರೀತಿಯಲ್ಲಿ ಇವರ ಜೊತೆ ದಿನೇಶ್, ಪಂಚಶ್ರೀ ನಿಲಯ, ಕಲ್ಮಂಜ ರವರು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸಂಘದ ಕುರಿತು ಆಧಾರರಹಿತ ಮಾಹಿತಿಯ ಪೋಸ್ಟ್‌ಗಳನ್ನು ಪ್ರಸಾರ ಮಾಡಿ ಮಾನ ಹಾನಿ ಮಾಡುತ್ತಿದ್ದಾರೆ. ಇದರಿಂದಾಗಿ ಸಂಘದ ಗೌರವಕ್ಕೆ ಧಕ್ಕೆ ಉಂಟಾಗಿದ್ದು, ಸದಸ್ಯರು ಹಾಗೂ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿದ್ದು ಸುಳ್ಳು ಮತ್ತು ಆಧಾರ ರಹಿತ ಪೋಸ್ಟ್ ಮಾಡಿರುವ ಇವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಜೊತೆಗೆ ಸಂಘದ ಕಚೇರಿಗೆ ಸಿ ಸಿ ಕ್ಯಾಮರಾ ಅಳವಡಿಸುವಂತೆ ಸಹಕಾರ ಇಲಾಖೆ, ದ. ಕ. ಹಾಲು ಒಕ್ಕೂಟ ಸೇರಿದಂತೆ ಸಂಘದ ವಿಶೇಷಾಧಿಕಾರಿಯವರಿಗೆ ಮನವಿ ಮಾಡಿಕೊಂಡಿದ್ದಾರೆ.

Related posts

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೈಪಾಡಿಯ ಶಾಲೆಯ ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸ್ ಸಮಾರೋಪ ಕಾರ್ಯಕ್ರಮ

Suddi Udaya

ಶಾಂತಿವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಕಣಿಯೂರು ಗ್ರಾ.ಪಂ. ಸಾಮಾಜಿಕ ಪರಿಶೋಧನೆ ಮತ್ತು ವಿಶೇಷ ಗ್ರಾಮಸಭೆ

Suddi Udaya

ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ಸ್ಥಾನ ಅನರ್ಹತೆಗೊಳಿಸಿರುವುದಕ್ಕೆ ಖಂಡನೆ: ಬೆಳ್ತಂಗಡಿ ಮೂರು ಮಾರ್ಗದ ಬಳಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಮೌನ ಪ್ರತಿಭಟನೆ

Suddi Udaya

ಶಿರ್ಲಾಲು ಮೂಲ್ಯರ ಯಾನೆ ಕುಲಾಲರ ಸಂಘದ ವತಿಯಿಂದ ಉತ್ತಮ ಶಾಸಕ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆ

Suddi Udaya

ಧರ್ಮಸ್ಥಳ : ನೇರ್ತನೆಯಲ್ಲಿ ದನದ ಕರುವಿನ ಮೇಲೆ ಚಿರತೆ ದಾಳಿ

Suddi Udaya
error: Content is protected !!