25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮುಂಬೈ ಶಾರದೋತ್ಸವದ ಶೋಭಾಯಾತ್ರೆ: ಕುಣಿತ ಭಜನೆ, ಜಡೆ ಕೋಲಾಟ, ಕಂಸಾಳೆ ಪ್ರದರ್ಶನ ನೀಡಲು ವಿ ಹರೀಶ್ ನೆರಿಯ ಸಾರಥ್ಯದಲ್ಲಿ ಭಕ್ತಿ ಹೆಜ್ಜೆ ಬಳಗ ಬೆಳ್ತಂಗಡಿಯ ಭಜಕರು

ಬೆಳ್ತಂಗಡಿ: ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರಿ ಮಂಡಳಿ ಡೊಂಬಿವಿಲಿ ಮುಂಬೈ ಇದರ 61 ನೇ ವರ್ಷದ ಶಾರದೋತ್ಸವದ ಭವ್ಯ ಶೋಭಯಾತ್ರೆಯು ಅ. 2 ರಂದು ನಡೆಯಲಿದ್ದು.

ಈ ಶೋಭಯಾತ್ರೆಯಲ್ಲಿ ಕುಣಿತ ಭಜನೆ, ಜಡೇಕೋಲಾಟ, ಕಂಸಾಲೆ ನೃತ್ಯ ಪ್ರದರ್ಶನ ನೀಡಲು ಭಕ್ತಿ ಹೆಜ್ಜೆ ಬಳಗಕ್ಕೆ ಪ್ರಾಯೋಜಕತ್ವ ನೀಡಿ ಸಮಿತಿಯವರು ಆಹ್ವಾನ ನೀಡಿದ್ದು ಇದರಂತೆ ಕುಣಿತ ಭಜನಾ ಗುರುಗಳು ಮತ್ತು ಭಕ್ತಿ ಹೆಜ್ಜೆ ಬಳಗ ಬೆಳ್ತಂಗಡಿ ಯ ಸಂಚಾಲಕರಾದ ವಿ ಹರೀಶ್ ನೆರಿಯ ಸಾರಥ್ಯದಲ್ಲಿ ಭಕ್ತಿ ಹೆಜ್ಜೆ ಬಳಗ ಬೆಳ್ತಂಗಡಿ ಯ 62 ಭಜಕ ಸದಸ್ಯರು ಮುಂಬೈ ಗೆ ತೆರಳಲಿದ್ದಾರೆ. ಭಕ್ತಿ ಹೆಜ್ಜೆ ಬಳಗ ಬೆಳ್ತಂಗಡಿಯ ಭಜಕರು ಅ. 2 ರಂದು ಶಾರದೋ ತ್ಸವದ ಶೋಭಯಾತ್ರೆ, ಅ.3 ರಂದು ನಿತ್ಯಾ ನಂದ ಮಂದಿರ ಗಣೇಶ್ ಪುರಿ ಮುಂಬೈ ಹಾಗೂ ಮಹಾಲಕ್ಷ್ಮಿ ದೇವಸ್ಥಾನ ಘನ್ಸೋಲಿ ಮುಂಬೈ ಯಲ್ಲಿ ಕುಣಿತ ಭಜನಾ ಸೇವೆ ನೀಡಿ ಅಕ್ಟೋಬರ್ 4 ರಂದು ಮುಂಬೈ ಯ ಪ್ರಸಿದ್ದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದಾರೆ.

Related posts

ಬೆಳ್ತಂಗಡಿ: ತಾಲೂಕು ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರ ಅನಾವರಣ

Suddi Udaya

ಸುವರ್ಣಮಹೋತ್ಸವ ಸಂಭ್ರಮದಲ್ಲಿ ಸಾಲಿಗ್ರಾಮ ಮಕ್ಕಳ ಮೇಳ: ಧರ್ಮಸ್ಥಳದಲ್ಲಿ ಸುವರ್ಣ ಪರ್ವ ಉದ್ಘಾಟನೆ

Suddi Udaya

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ “ಸಾಧನಾ ಪ್ರಶಸ್ತಿ”

Suddi Udaya

ಕನ್ಯಾಡಿ ಶ್ರೀಗಳಿಂದ ರವೀಂದ್ರ ಪೂಜಾರಿ ಆರ್ಲರಿಗೆ ಗೌರವಾರ್ಪಣೆ

Suddi Udaya

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್ ಹಾಗೂ ವಿವಿಧ ಸಂಘಗಳ ಆಶ್ರಯದಲ್ಲಿ ಉಚಿತ ದಂತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

Suddi Udaya

ಶಿವಮೊಗ್ಗದಲ್ಲಿ ಬಿಎಮ್.ಎಸ್ ಕುಟುಂಬ ಸಂಗಮ: ದ.ಕ. ಜಿಲ್ಲೆಯಿಂದ 200ಕ್ಕೂ ಹೆಚ್ಚು ಕಾರ್ಯಕರ್ತರ ಭಾಗಿ

Suddi Udaya
error: Content is protected !!