25.7 C
ಪುತ್ತೂರು, ಬೆಳ್ತಂಗಡಿ
March 7, 2026
ತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿ

ತೋಟತ್ತಾಡಿ : 9ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜೋತ್ಸವ

ತೋಟತ್ತಾಡಿ : ಧರ್ಮರಕ್ಷಾ ವೇದಿಕೆ, ತೋಟತ್ತಾಡಿ ಇದರ ಆಶ್ರಯದಲ್ಲಿ 9ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜೋತ್ಸವ ಸೆ 29 ರಂದು ಶ್ರೀ ನಾರಾಯಣ ಗುರು ಧರ್ಮಪರಿಪಾಲನಾ ಯೋಗಂ SNDP ಶಾಖೆ, ಬೆಂದ್ರಾಳ ತೋಟತ್ತಾಡಿಯಲ್ಲಿ, ನಡೆಯಿತು.

ಬೆಳಿಗ್ಗೆ ವೇದಮೂರ್ತಿ ಶ್ರೀ ವಾದಿರಾಜ ಶಬರಾಯ ಉಜಿರೆ ಇವರ ಪೌರೋಹಿತ್ಯದಲ್ಲಿ,”ಗಣಹೋಮ ಹಾಗೂ ಶ್ರೀ ಶಾರದಾ ದೇವಿಯ ಮೂರ್ತಿ ಪ್ರತಿಷ್ಠೆ”.ನಂತರ ಆಹ್ವಾನಿತ ವಿವಿಧ ಭಜನಾ ತಂಡಗಳಿಂದ ಭಜನೆ, ನಂತರ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಕ್ಸೆಲ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ| ಪ್ರಜ್ವಲ್ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡುತ್ತಾ ಧಾರ್ಮಿಕ ಆಚರಣೆಗಳು ಸನಾತನ ಸಂಸ್ಕೃತಿಯ ಪ್ರತೀಕ, ಮತ್ತು ನಾವು ದಿನನಿತ್ಯದ ಬದುಕಿನಲ್ಲಿ ಉತ್ತಮ ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಂಡು,ನಾಗರಿಕ ಶಿಷ್ಟಾಚಾರಗಳನ್ನು ಪಾಲಿಸಬೇಕು ಎಂದರು‌.

ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಖಂಡರು ಹಾಗೂ ಉದ್ಯಮಿಗಳಾದ ಕಿರಣ್ ಚಂದ್ರ ಪುಷ್ಪಗಿರಿ ಮಾತನಾಡಿ ಶಾರದಾ ಪೂಜೋತ್ಸವವು ಶ್ರೀ ಶಾರದಾ ದೇವಿಯು ವಿದ್ಯೆ,ಸಮೃದ್ಧಿಯ ಸಂಕೇತ, ನವರಾತ್ರಿ ಆಚರಣೆಯು ಯುವ ಸಮಾಜವನ್ನು ಸಂಘಟಿತರನ್ನಾಗಿ ಮಾಡುತ್ತದೆ ಎಂದರು.

ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ವಂದನಾ ಎಂ ಇರ್ವತ್ರಾಯ, ನವರಾತ್ರಿ ಆಚರಣೆಯ ಮಹತ್ವ ವಿವರಿಸಿದರು, ಕಾರ್ಯಕ್ರಮದಲ್ಲಿ ಚಾರ್ಮಾಡಿ ಗ್ರಾಂ ಪಂ ಅಧ್ಯಕ್ಷೆ ಶ್ರೀಮತಿ ಶಾರದಾ ಎ, ನಾರಾಯಣ ಗುರು ಎಸ್.ಎನ್.ಡಿ.ಪಿ ಸಂಘದ ಅಧ್ಯಕ್ಷ ಶ್ರೀ ಸುರೇಶ್ ಎಂ ಎನ್, ಧರ್ಮರಕ್ಷಾ ವೇದಿಕೆ, ತೋಟತ್ತಾಡಿ ಇದರ ಅಧ್ಯಕ್ಷರಾದ ಶ್ರೀ ಪ್ರಸಾದ್ ಮಡಿಯೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.


ಮದ್ಯಾಹ್ನ”ಮಹಾಪೂಜೆ ನಂತರ ಸಾರ್ವಜನಿಕ ಅನ್ನಸಂತರ್ಪಣೆ”ಮಧ್ಯಾಹ್ನ 2 ರಿಂದ ವಿವಿಧ ಆಹ್ವಾನಿತ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ ಮಹಾಪೂಜೆ ನಂತರ ಶ್ರೀ ಶಾರದಾ ದೇವಿ ಮೂರ್ತಿಯ ವೈಭವಯುತ ಶೋಭಾಯಾತ್ರೆ ನಡೆಯಿತು.

Related posts

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಚಾರ್ಮಾಡಿ ಘಾಟ್ ನಲ್ಲಿ ಕೆಟ್ಟು ನಿಂತ ಎರಡು ಕೆ ಎಸ್ ಆರ್ ಟಿ ಸಿ ಬಸ್ಸುಗಳು: ಗಂಟೆಗಟ್ಟಲೇ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಹೋರಾಟಗಳಿಗೆ ಭಾರತೀಯ ಮಜ್ದೂರು ಸಂಘದ ಜಿಲ್ಲಾದ್ಯಕ್ಷ ಅನಿಲ್ ಕುಮಾರ್ ಯು ಬೆಂಬಲ

Suddi Udaya

ನಡ: ಮಂಜೊಟ್ಟಿ ನಿವಾಸಿ ರಿಕ್ಷಾ ಚಾಲಕ ಸುಂದರ ಗೌಡ ನಿಧನ

Suddi Udaya

ಶಿರ್ಲಾಲು ಯುವವಾಹಿನಿ ಸಂಚಲನ ಸಮಿತಿ ವತಿಯಿಂದ ಆರೋಗ್ಯ ನಿಧಿ ವಿತರಣೆ

Suddi Udaya

ಮುಂಡಾಜೆ ಪ.ಪೂ. ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya
error: Content is protected !!