September 6, 2026
ಅಭಿನಂದನೆತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ದಸರಾ ಕವಿಗೋಷ್ಠಿ-2025ರಲ್ಲಿ ವಸಂತಿ ಟಿ. ನಿಡ್ಲೆ

ಬೆಳ್ತಂಗಡಿ : ದಸರಾ ಕವಿಗೋಷ್ಠಿ – 2025’ ನವರಸ ರಂಜನೆಯ ಬಹುಭಾಷಾ ಕವಿಮೇಳವನ್ನು ಅಕ್ಟೋಬರ್ 2 ವಿಜಯ ದಶಮಿ ಯಂದು ಮಂಗಳಾದೇವಿ ದೇವಸ್ಥಾನದಲ್ಲಿ ಏರ್ಪಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಸ್.ಪ್ರದೀಪ ಕುಮಾರ್ ಕಲ್ಕೂರ ಕವಿಗೋಷ್ಠಿಯನ್ನು ಉದ್ಘಾಟಿಸುವರು.

ಕವಿ – ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ 10 ಮಂದಿ ಪ್ರಮುಖ ಕವಿಗಳು ಭಾಗವಹಿಸಲಿದ್ದು, 10 ಜನ ಕವಿಗಳಲ್ಲಿ ಬೆಳ್ತಂಗಡಿ ತಾಲೂಕಿನಿಂದ ವಸಂತಿ ಟಿ ನಿಡ್ಲೆ ಓರ್ವರಾಗಿರುತ್ತಾರೆ. ಬಹುಮುಖ ಪ್ರತಿಭಾ ಸಂಪನ್ನೆಯಾಗಿರುವ ಇವರು ವೃತ್ತಿಯಲ್ಲಿ ಶಿಕ್ಷಕಿ. ಪ್ರವೃತ್ತಿ ಯಲ್ಲಿ ಕವಯತ್ರಿ, ಲೇಖಕಿ, ಯಕ್ಷಗಾನ ಕಲಾವಿದೆ.ಹಲವಾರು ಸಾಹಿತ್ಯ ಸಮ್ಮೇಳನ ಗಳಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಭಾಗವಹಿಸಿರುವ ಇವರು 2024ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿ, ಒಟ್ಟು 1 ರಾಷ್ಟ್ರ ಪ್ರಶಸ್ತಿ, 8 ರಾಜ್ಯ ಪ್ರಶಸ್ತಿ, 1 ಜಿಲ್ಲಾ ಪ್ರಶಸ್ತಿ 2 ತಾಲೂಕು ಮಟ್ಟದ ಪ್ರಶಸ್ತಿ. ಹೀಗೆ 12 ಪ್ರಶಸ್ತಿ ಗಳನ್ನು ಮುಡಿಗೇರಿ ಸಿಕೊಂಡ ಅಪ್ರತಿಮ ಸಾಧಕಿ ಎಂಬ ಹೆಗ್ಗಳಿಕೆಗೆ ಪಾತ್ರ ರಾಗಿದ್ದಾರೆ.

Related posts

ಬಳಂಜ: ಶಾರದೋತ್ಸವ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿ, ಬಿಸಿಲು-ಮಳೆ ಲೆಕ್ಕಿಸದೆ ಆಟವಾಡಿದ ಯುವಕರು

Suddi Udaya

ಸಿಎಸ್ಇಇಟಿ ಪರೀಕ್ಷೆ: ಉಜಿರೆ ಎಸ್‌ಡಿಎಂ ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿಗಳ ಸಾಧನೆ

Suddi Udaya

ಬಳಂಜ ಶಾಲಾ ಅಮೃತ ಮಹೋತ್ಸವದ ಬಗ್ಗೆ ಹಿತ ಚಿಂತಕರ ಸಭೆ: ಅಮೃತ ಮಹೋತ್ಸವದ ಅಧ್ಯಕ್ಷರಾಗಿ ಚಂದ್ರಶೇಖರ್ ಪಿ‌.ಕೆ ಆಯ್ಕೆ

Suddi Udaya

ಚಾರ್ಮಾಡಿ ಘಾಟ್ ನಲ್ಲಿ ಒಂದೇ ದಿನ ಮೂರು ವಾಹನಗಳು ಪಲ್ಟಿ

Suddi Udaya

ನವೋದಯ ಶಾಲಾ ಬಳಿ ದ್ವಿಚಕ್ರ ವಾಹನ ಹಾಗೂ ಬಸ್ ನಡುವೆ ಅಪಘಾತ: ಇಬ್ಬರಿಗೆ ಗಾಯ

Suddi Udaya

ಜ್ಯೋತಿ ಆಸ್ಪತ್ರೆಗೆ ಆಳ್ವಾಸ್ ಕಾಲೇಜು ಅಡ್ಮಿಸ್ರಶನ್ ವಿಭಾಗದ ವಿದ್ಯಾರ್ಥಿಗಳು ಭೇಟಿ

Suddi Udaya
error: Content is protected !!