September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್.ಡಿ. ಎಂ ಮಹಿಳಾ ಐ.ಟಿ.ಐ ಯಲ್ಲಿ ಆಯುಧ ಪೂಜಾ ಕಾರ್ಯಕ್ರಮ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೆ. 30 ರಂದು ಆಯುಧ ಪೂಜೆಯನ್ನು ವಿಧಿವತ್ತಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ಹಾಗೂ ಶ್ರೀಮತಿ ಮೈತ್ರಿ ಇವರು ಆಗಮಿಸಿ ಪೂಜಾ ವಿಧಿಗಳಿಗೆ ನೇತೃತ್ವ ವಹಿಸಿ ವಿದ್ಯಾರ್ಥಿನಿಯರನ್ನು ಆಶೀರ್ವದಿಸಿದರು.

ದಸರಾ ಹಬ್ಬದ ಒಂಬನೇ ದಿನದಲ್ಲಿ ಆಚರಿಸುವ ಹಬ್ಬ ಆಯುಧ ಪೂಜೆ. ಶ್ರಮಕ್ಕೆ ಗೌರವ, ಶ್ರಮದ ಪಾವಿತ್ರ್ಯತೆ, ಸಂಪ್ರದಾಯದ ಮೌಲ್ಯ, ಒಗ್ಗಟ್ಟು, ಆಧ್ಯಾತ್ಮಿಕತೆ ಈ ಎಲ್ಲಾ ವಿಚಾರಗಳನ್ನ ಮನದಲ್ಲಿಟ್ಟುಕೊಂಡು, ವಿದ್ಯಾರ್ಥಿಗಳು ತಮ್ಮ ಲ್ಯಾಬ್‌ಗಳನ್ನು ಸ್ವಚ್ಛಗೊಳಿಸಿ ಅಲಂಕರಿಸಿ, ಉಪಕರಣಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಪ್ರದಾಯಕ್ಕೆ ಗೌರವ ಸಲ್ಲಿಸಿದರು.

ಪ್ರತೀ ವರುಷ ಆಯುಧ ಪೂಜೆ ಮಾಡುವುದರಿಂದ ನಾವು ಉಪಯೋಗಿಸುವ ಆಯುಧ, ಮೆಷಿನರಿಗಳಿಂದ ಯಾವುದೇ ತೊಂದರೆಗಳು ಆಗಬಾರದು ಹಾಗೂ ಕಲಿತ ವಿದ್ಯೆ ಸಂಪೂರ್ಣವಾಗಿ ಉಪಯೋಗ ಆಗಬೇಕು ಎಂದು ಆಯುಧ ಪೂಜೆ ಹಾಗೂ ಶಾರದಾ ಪೂಜೆಯನ್ನು ಭಕ್ತಿಯಿಂದ ಆಚರಿಸಲಾಗುವುದು.

ಪ್ರಾಂಶುಪಾಲರಾದ ವಿ. ಪ್ರಕಾಶ್ ಕಾಮತ್, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.

Related posts

ಮೊಗ್ರು: ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ಮತ್ತು ಶ್ರೀ ರಾಮ ಶಿಶು ಮಂದಿರ ಅಲೆಕ್ಕಿ- ಮುಗೇರಡ್ಕ ಆಶ್ರಯದಲ್ಲಿ ಶ್ರೀ ಕೃಷ್ಣಜನ್ಮಾಷ್ಠಮಿ ಪ್ರಯುಕ್ತ ಶ್ರೀ ಬಾಲಕೃಷ್ಣ ತೊಟ್ಟಿಲ ಸಂಭ್ರಮ

Suddi Udaya

ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಸಮಾಜದ ಮುಖಂಡ ಸತ್ಯಜಿತ್ ತೇಜೋವಧೆ ಮಾಡುತ್ತಿರುವುದನ್ನು ಖಂಡಿಸುತ್ತೇವೆ : ಎಂ.ಕೆ ಪ್ರಸಾದ್

Suddi Udaya

ಮೇ 29: ವಿದ್ಯುತ್ ನಿಲುಗಡೆ

Suddi Udaya

ಪಟ್ರಮೆ ಗ್ರಾ.ಪಂ. ಹಾಗೂ ಸಂಜೀವಿನಿ ಒಕ್ಕೂಟದ ವತಿಯಿಂದ ಸ್ವಚ್ಛತಾ ಆಂದೋಲನ

Suddi Udaya

ಅಲ್ಪಾವಧಿಯಲ್ಲಿ ದೊರೆತ ಅವಕಾಶ ಸದ್ಭಳಕೆ ಮಾಡಿ ಶಿಕ್ಷಣ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದವರು ಬಿ.ಸಿ ನಾಗೇಶ್ :ಶಾಸಕ ಹರೀಶ್ ಪೂಂಜ

Suddi Udaya

ಲಾಯಿಲ: ಕರ್ನೋಡಿ ಸ.ಉ.ಹಿ.ಪ್ರಾ. ಶಾಲೆಯ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!