37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಳೆದುಕೊಂಡಿದ್ದ ಚಿನ್ನವನ್ನು ಮರಳಿ ದಂಪತಿಗಳಿಗೆ ಹಸ್ತಾಂತರಿಸಿದ ಲಾಡ್ಜ್ ಮಾಲೀಕ

ಬೆಳ್ತಂಗಡಿ : ಲಾಡ್ಜ್ ನಲ್ಲಿ ರೂಂ ಮಾಡಿದ್ದ ದಂಪತಿಗಳು ಕಳೆದುಕೊಂಡಿದ್ದ ಚಿನ್ನವನ್ನು ಲಾಡ್ಜ್ ಸಿಬ್ಬಂದಿ ಹುಡುಕಿ ಮತ್ತೆ ವಾರಿಸುದಾರರಿಗೆ ಮರಳಿಸಿ ಮಾನವೀಯತೆ ಮೆರೆದಿದ್ದಾರೆ.

ಧರ್ಮಸ್ಥಳ ಗ್ರಾಮದ ನೇತ್ರಾವತಿಯಲ್ಲಿರುವ ಅಖಿಲ್ ಶೆಟ್ಟಿ ಮಾಲೀಕತ್ವದ ಪಾರಿಜಾತ ಹೆಸರಿನ ಲಾಡ್ಜ್ ಗೆ ಸೆ.29 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯಕ್ಕೆ ಹೋಗಲು ಆಂಧ್ರಪ್ರದೇಶ ಮೂಲದ ಶಿವಕುಮಾರ್ ಮತ್ತು ಆತನ ಪತ್ನಿ ರೂಂ ಮಾಡಿದ್ದರು. ಆದ್ರೆ ಸೆ.30 ರಂದು ರೂಂ ಚೆಕ್ ಓಟ್ ಮಾಡುವಾಗ ಪತ್ನಿಯ 20 ಗ್ರಾಂ ತೂಕದ ಚಿನ್ನವನ್ನು ರೂಂ ನಲ್ಲಿ ಕಳೆದುಕೊಂಡಿದ್ದಾರೆ. ಯಾವ ಕಡೆ ಹುಡುಕಾಟ ನಡೆಸಿದ್ರೂ ಚಿನ್ನ ಪತ್ತೆಯಾಗಿರಲಿಲ್ಲ ಕೊನೆಗೆ ಚಿನ್ನವನ್ನು ಹುಡುಕಿ ವಾಪಸ್ ಕೊಡುವ ಜವಾಬ್ದಾರಿ ನಮ್ಮದು ಎಂದು ಲಾಡ್ಜ್ ಮಾಲೀಕ ಅಖಿಲ್ ಶೆಟ್ಟಿ ದಂಪತಿಗಳಿಗೆ ಭರವಸೆ ನೀಡಿ ಕಳುಹಿಸಿದ್ದರು.

ದಂಪತಿಗಳು ತಂಗಿದ್ದ ರೂಂ ಸಿಬ್ಬಂದಿಗಳು ಎಲ್ಲಾ ಕಡೆ ಹುಡುಕಾಟ ಮಾಡಿದ್ದರೂ ಪತ್ತೆಯಾಗದಿದ್ದಾಗ ಕೊನೆಗೆ ಯಾರಿಗೂ ರೂಂ ನೀಡದೆ ಲಾಕ್ ಮಾಡಿ ಇಟ್ಟಿದ್ದರು. ದಂಪತಿಗಳು ಉಪಯೋಗಿಸಿದ್ದ ಬೆಡ್ ಶೀಟ್ ಮತ್ತು ದಿಂಬು ಕವರ್ ಗಳನ್ನು ವಾಶ್ ಮಾಡಲು ಕಳುಹಿಸಿದ್ದರು. ಅ.1 ರಂದು ವಾಶ್ ಮಾಡಲು ಕಳುಹಿಸಿದ್ದ ದಿಂಬು ಕವರ್ ಒಳಗೆ ಚಿನ್ನ ಇರುವುದನ್ನು ಸಿಬ್ಬಂದಿಗಳು ಪತ್ತೆ ಮಾಡಿದ್ದಾರೆ. ತಕ್ಷಣ ಕರೆಮಾಡಿ ದಂಪತಿಗಳನ್ನು ಲಾಡ್ಜ್ ಗೆ ಕರೆಸಿ ವಿಚಾರ ಹೇಳಿದಾಗ ರಾತ್ರಿ ಮಲಗುವಾಗ ಚಿನ್ನವನ್ನು ದಿಂಬು ಪಕ್ಕ ಇಟ್ಟಿದ್ದು ಅದು ದಿಂಬು ಕವರ್ ಒಳಗಡೆ ಸೇರಿದೆ ಎಂದಿದ್ದಾರೆ.

ಕೊನೆಗೂ ಸುಮಾರು 2 ಲಕ್ಷ ಮೌಲ್ಯದ 20 ಗ್ರಾಂ ಚಿನ್ನವನ್ನು ಕಳೆದುಕೊಂಡಿದ್ದ ಆಂದ್ರಪ್ರದೇಶದ ದಂಪತಿಗಳಿಗೆ ಚಿನ್ನವನ್ನು ಮರಳಿ ಹಸ್ತಾಂತರಿಸಿ ಪಾರಿಜಾತ ಇನ್ ಲಾಡ್ಜ್ ಮಾಲೀಕ ಅಖಿಲ್ ಶೆಟ್ಟಿ ಮತ್ತು ವೀಕ್ಷಿತ್ ಶೆಟ್ಟಿ ಮಾನವೀಯತೆ ಮೆರೆದಿದ್ದಾರೆ.

Related posts

ಜೆಸಿ ಸಪ್ತಾಹಕ್ಕೆ 3 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಜೆಸಿಐ ಮಡಂತ್ಯಾರಿನಿಂದ ವರ್ಣರಂಜಿತ ಜೇಸಿ ಸಪ್ತಾಹ ‘ವಿಜಯ’-2024: ವಿವಿಧ ಕ್ಷೇತ್ರದ 15 ಸಾಧಕರಿಗೆ ಜೇಸಿ ಪುರಸ್ಕಾರ, ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ವೈಭವ, ಯಕ್ಷಗಾನ

Suddi Udaya

ಕಳೆಂಜ: ನಡುಜಾರು ಸ.ಕಿ. ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ನೆರಿಯ ಪೆಟ್ರೋನೆಟ್ ವತಿಯಿಂದ ಸ್ಕೂಲ್ ಬ್ಯಾಗ್ ಹಾಗೂ ಲೇಖನ ಸಾಮಾಗ್ರಿ ವಿತರಣೆ

Suddi Udaya

ಬೆಳ್ತಂಗಡಿಯ ಪ್ರಭಾತ್ ಸ್ಟೋರ್ಸ್ ನ ಮಾಲಕ ಪ್ರಶಾಂತ್ ಭಟ್ ನಿಧನ

Suddi Udaya

ನೆರಿಯ ಸೆಂಟ್ ತೋಮಸ್ ಪ್ರೌಢಶಾಲೆ ಶೇ 100 ರ ಸಾಧನೆಗೆ ಸನ್ಮಾನ

Suddi Udaya

ಮಡಂತ್ಯಾರು: ಬುಲೆಟ್ ಟ್ಯಾಂಕರ್ ಮತ್ತು ಓಮ್ನಿ ಕಾರ್ ಮುಖಾಮುಖಿ ಡಿಕ್ಕಿ

Suddi Udaya

ಹಲವಾರು ಮೃತದೇಹ ಹೂತು ಹಾಕಿದ ದೂರು ಪ್ರಕರಣ ಧರ್ಮಸ್ಥಳ ಶೌಚಾಲಯದ ಸುತ್ತಮುತ್ತ ಸ್ಥಳ ಮಹಜರು

Suddi Udaya
error: Content is protected !!