38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಬೆಳ್ತಂಗಡಿ ಶಾಖೆಯ ಉದ್ಘಾಟನೆ

ಬೆಳ್ತಂಗಡಿ: ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಮಂಗಳೂರು ಇದರ ಬೆಳ್ತಂಗಡಿ ಶಾಖೆಯ ಉದ್ಘಾಟನಾ ಸಮಾರಂಭ ಅ.1ರಂದು ಬೆಳ್ತಂಗಡಿ ಚಚ್೯ ಬಳಿಯ ನೊರೋನಾ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.

ಬೆಳ್ತ೦ಗಡಿ ಶಾಖಾ ಕಚೇರಿಯನ್ನು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ಬಾರ್ಕೂರು ಆಡಳಿತ ಮೊಕ್ತೇಸರರು ಅಧ್ಯಕ್ಷ ಲಕ್ಷ್ಮಣ್ ಕರಾವಳಿ ದೀಪಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕಚ್ಚೂರು ಕ್ರೆಡಿಟ್ ಕೋ-ಅಪರೇಟೀವ್ ಸೊಸೈಟಿ ಕಳೆದ 30 ವಷ೯ಗಳಿಂದ ಅತ್ಯುನ್ನತ ಪ್ರಗತಿಯಲ್ಲಿ ಸಾಗುತ್ತಿದ್ದು, ಸೊಸೈಟಿಯ ಶಾಖೆ ವಿಸ್ತರಣೆಗೆ ಯೋಜನೆ ಹಾಕಿಕೊಳ್ಳಬೇಕು, ಪ್ರತಿ ಎರಡು ವರ್ಷಕ್ಕೊಮ್ಮೆ ಒಂದು ಶಾಖೆಯಂತೆ, ಹತ್ತರಿಂದ ಹದಿನೈದು ಶಾಖೆಗಳು ಶೀಘ್ರ ಆಗಬೇಕಾಗಿದೆ. ಇಂದು ಆರಂಭ ಗೊಂಡ ಬೆಳ್ತಂಗಡಿ ಶಾಖೆ ಕೋಟಿಗೂ ಹೆಚ್ಚು ವ್ಯವಹಾರ ನಡೆಸಿ ಪ್ರಗತಿ ಪಥದಲ್ಲಿ ಸಾಗಲಿ ಎಂದು ಹಾರೈಸಿದರು.


ಸಭಾಧ್ಯಕ್ಷತೆಯನ್ನು ಕಚ್ಚೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಚಂದ್ರಶೇಖರ್ ಕೆ. ವಹಿಸಿ, ಭದ್ರತಾ ಕೊಠಡಿಯನ್ನು
ಉದ್ಘಾಟಿಸಿದರು. ಕಂಪ್ಯೂಟರೀಕರಣ ಉದ್ಘಾಟನೆಯನ್ನು ಭಂಡಾರಿ ಮಹಾಮಂಡಲ ಬಾರ್ಕೂರು ಅಧ್ಯಕ್ಷ ಶಶಿಧರ ಭಂಡಾರಿ ಕಾರ್ಕಳ ನೇರವೇರಿಸಿದರು. ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಪ್ರಜ್ವಲ್ಪ್ರ ಪ್ರಥಮ ಠೇವಣಿ ಬಿಡುಗಡೆಗೊಳಿಸಿದರು, ಬೆಳ್ತಂಗಡಿ ಭಂಡಾರಿ ಸಮಾಜ ಸಂಘ ಅಧ್ಯಕ್ಷ ಉಮೇಶ್ ಭಂಡಾರಿ, ಜಾಕಿಮ್ ನೊರೋನಾ ಮಾಲಕರು, ನೊರೋನಾ ಕಾಂಪ್ಲೆಕ್ಸ್‌, ಬೆಳ್ತಂಗಡಿ, ಬೆಳ್ತಂಗಡಿ ಭಂಡಾರಿ ಸಮಾಜ ಸಂಘದ ಮಾಜಿ ಅಧ್ಯಕ್ಷರಾದ ಎ. ಪೂವಪ್ಪ ಭಂಡಾರಿ ಪಣೆಜಾಲು, ಕೇಶವ ಭಂಡಾರಿ, ಭಂಡಾರಿ ಯುವ ವೇದಿಕೆ ಬೆಳ್ತಂಗಡಿ ಅಧ್ಯಕ್ಷ ವಿಶ್ವನಾಥ ಭಂಡಾರಿ, ಸವಿತಾ ಸಮಾಜ ಬೆಳ್ತಂಗಡಿ ಉಪಾಧ್ಯಕ್ಷ ಜಿ. ಎಸ್. ಪೂವಪ್ಪ ಭಂಡಾರಿ ಮದ್ದಡ್ಕ , ಜೇಸಿ ಅಶೋಕ್ ಗುಂಡಿಯ ವಲಯ ನಿರ್ದೇಶಕರು, ವ್ಯವಹಾರ ವಿಭಾಗ, ವಲಯ 15, ಜೆಸಿ ಇಂಡಿಯಾ, ನಾರಾವಿ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಾಮ ಭಂಡಾರಿ ಹೆಚ್., ಪ್ರಧಾನ ವ್ಯವಸ್ಥಾಪಕ ಪದ್ಮನಾಭ ಎಂ., ನಿರ್ದೇಶಕರುಗಳಾದ ರಘುವೀರ ಭಂಡಾರಿ, ಶಶಿಧರ ಭಂಡಾರಿ ಕಾರ್ಕಳ, ಬಿ.ಎಸ್. ಭಂಡಾರಿ, ಶೇಖರ್ ಹೆಚ್, ಕುಮಾರ್ ಭಂಡಾರಿ, ಅಶೋಕ್ ಜಿ, ದಿವಾಕರ ಶಂಬೂರ್, ರಮೇಶ್ ಭಂಡಾರಿ ಸಿ.ಎಂ, ಹರೀಶ್ ಭಂಡಾರಿ, ರಮಾನಾಥ ಭಂಡಾರಿ, ರವೀಂದ್ರನಾಥ್ ಉಳ್ಳಾಲ್, ಶ್ರೀಮತಿ ಶಾಂತ ಬಿ.ಎಸ್., ರಾಜಾ ಬಂಟ್ವಾಳ, ಶ್ರೀಮತಿ ಶಶಿಕಲಾ ಉಪಸ್ಥಿತರಿದ್ದರು. ಸತೀಶ್ ಭಂಡಾರಿ ನಾಳ ಪ್ರಾರ್ಥಿಸಿ, ನಿರ್ದೇಶಕ ರಾಜಾ ಬಂಟ್ವಾಳ ಸ್ವಾಗತಿಸಿದರು. ಸಿ.ಇ.ಒ ಪದ್ಮನಾಭ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು.ಗಂಗಾಧರ ಭಂಡಾರಿ ಕಾಯತ೯ಡ್ಕ ಕಾರ್ಯಕ್ರಮ ನಿರೂಪಿಸಿದರು.

Related posts

ಶಿಶಿಲ: ಗಿರಿಜನ ಬಂಧುಗಳಿಗೆ ಕಿರಣ್ ಚಂದ್ರ ಪುಷ್ಪಗಿರಿಯಿಂದ ಬೆಡ್ ಶೀಟ್ ವಿತರಣೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ: ವಿವಿಧ ಸಮಿತಿಗಳ ರಚನೆ -ಸಂಚಾಲಕ ಹಾಗೂ ಉಪಸಂಚಾಲಕರ ಆಯ್ಕೆ

Suddi Udaya

ಬೆಳ್ತಂಗಡಿ: ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಬೆಳ್ತಂಗಡಿ ಪ.ಪಂ. ಖಾಯಂ ಪೌರಕಾರ್ಮಿಕರಿಗೆ ಸನ್ಮಾನ

Suddi Udaya

ಡಿ.13-14: ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಕೊಯ್ಯೂರು ಶಾಲೆ: ಮೋಹನ್ ಕುಮಾರ್ ನೇತೃತ್ವದಲ್ಲಿ ಬದುಕು ಕಟ್ಟೋಣ ಬನ್ನಿ ತಂಡದಿಂದ ಕೊಡುಗೆಗಳ ಹಸ್ತಾಂತರ

Suddi Udaya

ಸುಲ್ಕೇರಿಮೊಗ್ರು ಹಿ.ಪ್ರಾ. ಶಾಲೆಯ ನೀರಿನ ನಳ್ಳಿಗಳನ್ನು ತುಂಡರಿಸಿದ ಕಿಡಿಗೇಡಿಗಳು

Suddi Udaya

ಬೆಳ್ತಂಗಡಿ: ಎಲ್.ಐ.ಸಿ ಅಭಿವೃದ್ಧಿ ಅಧಿಕಾರಿ ಟಿ.ಡಿ ರಾಘವೇಂದ್ರರವರ ಮಾತೃಶ್ರೀ ನಾಗರತ್ನಮ್ಮ ನಿಧನ

Suddi Udaya
error: Content is protected !!