24.8 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಚಾರ್ಮಾಡಿ ಘಾಟ್‌ನಲ್ಲಿ ಸ್ವಚ್ಛತಾ ದಿನ: ಗಾಂಧಿ ಜಯಂತಿಗೆ ಅರಣ್ಯ ಇಲಾಖೆಯ ಅರ್ಥಪೂರ್ಣ ಗೌರವ

ಚಾರ್ಮಾಡಿ: ಮೂಡಿಗೆರೆ ಅರಣ್ಯ ವಲಯದ ಚಾರ್ಮಾಡಿ ಘಾಟ್‌ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ “ಸ್ವಚ್ಛತಾ ದಿನ”ವನ್ನು ಅರಣ್ಯ ಇಲಾಖೆ ಶ್ರದ್ಧಾಭಿಮಾನದಿಂದ ಆಚರಿಸಿತು.

ಈ ಸಂದರ್ಭದಲ್ಲಿ ಘಾಟ್ ರಸ್ತೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಕಸ, ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಸ್ವಚ್ಛಗೊಳಿಸಲಾಯಿತು. ಪರಿಸರ ಸಂರಕ್ಷಣೆಯ ಮಹತ್ವವನ್ನು ಹತ್ತಿರದಿಂದ ಅರಿಯುವ ಉದ್ದೇಶದಿಂದ ಸಿಬ್ಬಂದಿ ತೊಡಗಿಸಿಕೊಂಡ ಈ ಕಾರ್ಯ ಜನಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಆರ್.ಎಫ್.ಒ ಜಿ. ಮಂಜುನಾಥ್ ಅವರು, “ಗಾಂಧಿಜಿಯವರ ಕನಸಿನ ಭಾರತವು ಸ್ವಚ್ಛತೆಯ ಆಧಾರದ ಮೇಲೆ ರೂಪುಗೊಳ್ಳಬೇಕಿತ್ತು. ಪ್ರಕೃತಿಯ ಶುದ್ಧತೆಯನ್ನು ಕಾಪಾಡುವುದು ಅರಣ್ಯ ಇಲಾಖೆಯ ಕರ್ತವ್ಯ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕರ ನೈತಿಕ ಹೊಣೆಗಾರಿಕೆಯಾಗಿದೆ. ಚಾರ್ಮಾಡಿಯಂತಹ ಸೊಬಗುಮಯ ಘಾಟ್ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವುದು ನಮ್ಮೆಲ್ಲರ ಗುರಿಯಾಗಬೇಕು” ಎಂದು ಹೇಳಿದರು.

ಅರಣ್ಯ ಇಲಾಖೆಯ ಅಧಿಕಾರಿಗಳು, ಅರಣ್ಯ ರಕ್ಷಕರು ಹಾಗೂ ಸಹಾಯಕ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸ್ವಚ್ಛತಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.

Related posts

ಕೊಲ್ಪಾಡಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಪುನಾರಚನೆ: ಅಧ್ಯಕ್ಷರಾಗಿ ಲೋಕೇಶ್ ಓಣಾಜೆ ಆಯ್ಕೆ‌

Suddi Udaya

ಜು.17: ಧರ್ಮಸ್ಥಳದಲ್ಲಿ ಪುರಾಣ ಕಾವ್ಯ ವಾಚನ-ಪ್ರವಚನ

Suddi Udaya

ವಾಹನ ಡಿಕ್ಕಿ ಹೊಡೆದು ಅನಾಥವಾಗಿ ರಸ್ತೆಯಲ್ಲಿ ಬಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು

Suddi Udaya

ಮಚ್ಚಿನ : ಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು

Suddi Udaya

ತಾಲೂಕು ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ; ಪರಿಶೀಲನೆ

Suddi Udaya

ವಲಯ ಸಮ್ಮೇಳನದಲ್ಲಿ ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇoಬರಿಗೆ ಸಮಗ್ರ ಪ್ರಶಸ್ತಿ

Suddi Udaya
error: Content is protected !!