23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಿಜಯ ದಶಮಿಯಂದು ಗೆಜ್ಜೆ ಗಿರಿಯಲ್ಲಿ ಒಂಬತ್ತನೇ ಮಹಾಸಭೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಆಡಳಿತ ಸಮಿತಿಯ ಒಂಬತ್ತನೇ ಮಹಾಸಭೆಯು ವಿಜಯ ದಶಮಿಯಂದು ಕ್ಷೇತ್ರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿ ಮುಂದಿನ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲಾಯಿತು. ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬರ ಹೆರಾಜೆಯವರು ಪ್ರಸ್ತಾವಿಸಿ ಸ್ವಾಗತಿಸಿದರು. ರವಿ ಪೂಜಾರಿ ಚಿಲಿಂಬಿ ಅಧ್ಯಕ್ಷತೆ ವಹಿಸಿ ನ. 23ರಂದು ಗೆಜ್ಜೆ ಗಿರಿಯಲ್ಲಿ ನಡೆಯುವ ವಸತಿ ಗ್ರಹಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ಗೌರವಾಧ್ಯಕ್ಷ ಜಯಂತ ನಡುಬೈಲು, ಉಪಾಧ್ಯಕ್ಷ ಉಲ್ಲಾಸ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್ ರವರು ಗತ ವರ್ಷದ ವರದಿಯನ್ನು ಯಾಚಿಸಿದರು. ಜೊತೆ ಕಾರ್ಯದರ್ಶಿಗಳಾದ ಡಾ. ಸಂತೋಷ್ ಬೈರಂಪಲ್ಲಿ ಜೈ ವಿಕ್ರಮ ಕಲ್ಲಾಪು ಹಾಜರಿದ್ದು ಕೋಶಾಧಿಕಾರಿ ಮೋಹನ ದಾಸ್ ಬಂಗೇರ ವಾಮಂಜೂರು ಲೆಕ್ಕಪತ್ರಗಳನ್ನು ಮಂಡಿಸಿದರು.
ಗಣ್ಯರಾದ ದುಬೈಯ ಸತೀಶ್ ಪೂಜಾರಿ ಬೆಳಪು, ಪ್ರಭಾಕರ್ ಕರ್ನಿರೆ , ದಕ್ಷಿಣ ಆಫ್ರಿಕದ ಸೋಮನಾಥ ಪೂಜಾರಿ, ಉಡುಪಿ ಗೋವಾದ ಚಂದ್ರಹಾಸ ಅಮೀನ್, ಶ್ರೀಮತಿ ಸುಜಿತಾ ವಿ ಬಂಗೇರ, ಸಂಜೀವ ಪೂಜಾರಿ ಬಿರುವ ಸೆಂಟರ್, ಪ್ರಾಮಲ್ ಕುಮಾರ್ ಕಾರ್ಕಳ, ಹರಿಶ್ಚಂದ್ರ ಅಮಿನ್ ಕಟಪಾಡಿ, ಶ್ರೀಕುಮಾರ್ ಮೂಡಬಿದ್ರಿ, ನಾರಾಯಣ ಮಚ್ಚಿನ, ನವೀನ್ ಅಮೀನ್ ಉಡುಪಿ, ನವೀನ್ ಸುವರ್ಣ ಸದೀಪ, ನವನೀತ್ ಹಿಂಗಾಣಿ, ನಾಗೇಶ್ ಪೂಜಾರಿ , ಜಯರಾಮ ಬಂಗೇರ, ಜಯ ರಾಮ ಪೂಜಾರಿ ಬೀಳುವಾಯಿ, ನಾಗೇಶ್ ಪೂಜಾರಿ, ಬೈಕಂಪಾಡಿ, ರಾಘವೇಂದ್ರ, ಹಾಜರಿದ್ದರು.

ಉಪಾಧ್ಯಕ್ಷ ದೀಪಕ್ ಕೋಟ್ಯಾನ್ ಧನ್ಯವಾದ ಸಮರ್ಪಿಸಿದರು.

Related posts

ಇಂದಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಯ ಮುಕ್ತ ಭಾರತ ಅಭಿಯಾನದಡಿಯಲ್ಲಿ ನಿಕ್ಷಯ್ ಶಿಬಿರ

Suddi Udaya

ಧರ್ಮಸ್ಥಳ: ಕಾರನ್ನು ಅಡ್ಡಗಟ್ಟಿ ಚಾಲಕ ಹಾಗೂ ಕಾರಿನಲ್ಲಿದ್ದ ಮಹಿಳೆಯರ ಮೇಲೆ ಹಲ್ಲೆ: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕ- ಶಿಕ್ಷಕರ ಸಭೆ

Suddi Udaya

ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ: ಉರುವಾಲು ಶ್ರೀ ಭಾರತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಕು| ಮಾನ್ವಿ ಪ್ರಥಮ ಸ್ಥಾನ

Suddi Udaya

ಸೌತಡ್ಕ ಮಹಾಗಣಪತಿ ದೇವಸ್ಥಾನ: ವ್ಯವಸ್ಥಾಪನಾ ಸಮಿತಿಯ 9 ಸದಸ್ಯ ಸ್ಥಾನಕ್ಕೆ 28 ಮಂದಿ ಅರ್ಜಿ

Suddi Udaya
error: Content is protected !!