September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

22 ವರ್ಷ ಭಾರತಮಾತೆಯ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಲಾಯಿಲದ ಅಶೋಕ್ ಕುಮಾರ್ ರವರಿಗೆ ಬೆಳ್ತಂಗಡಿಯಲ್ಲಿ ಭವ್ಯ ಸ್ವಾಗತ

ಬೆಳ್ತಂಗಡಿ: ‘ಭಾರತಮಾತೆಯ ಸೇವೆಗೆ ತನ್ನನೇ ತಾನು ಸಮರ್ಪಿಸಿ 22 ವರ್ಷದ ನಿಷ್ಠೆ, ನಿಸ್ವಾರ್ಥದ ಸೇವೆಯನ್ನು ನೀಡಿ ನಿವೃತ್ತಿಗೊಂಡು ಹುಟ್ಟೂರಿಗೆ ಆಗಮಿಸಿದ ಲಾಯಿಲ ಗ್ರಾಮದ ವಿವೇಕಾನ೦ದ ನಗರದ ನಿವಾಸಿ ಹೆಮ್ಮೆಯ ಯೋಧರಾದ ಅಶೋಕ್ ಕುಮಾರ್ ರವರನ್ನು ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಮೋಹನ್ ಕಲ್ಮಂಜ, ಮಾಜಿ ಸೈನಿಕ ತಂಗಚ್ಚನ್, ಯುವ ವೇದಿಕೆ, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ ಮತ್ತು ಪದಾಧಿಕಾರಿಗಳು, ಲಾಯಿಲ ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ ಲಾಯಿಲ, ಹರಿಕೃಷ್ಣ, ಅರವಿಂದ, ಮಹೇಶ್, ತಾಲೂಕು ಫೋಟೋಗ್ರಾಫರ್ ಅಸೋಸಿಯೇಷನ ಪದಾಧಿಕಾರಿಗಳು, ಅಶೋಕ್ ಕುಮಾರ್ ರವರ ತಂದೆ ಕೃಷ್ಣಪ್ಪ ಗೌಡ, ತಾಯಿ ವಾರಿಜ, ಪತ್ನಿ ಶಶಿಕಲಾ, ಮಕ್ಕಳಾದ ಸಾಕ್ಷಿ, ಸಾತ್ವಿಕ್ ಬಂಧುಮಿತ್ರರು ಉಪಸ್ಥಿತರಿದ್ದರು.

ಇವರು 23-09-2003ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡು ಬೆ೦ಗಳೂರು, ಜಮ್ಮು, ಪಟ್ನಾಕೋಟ್, ಕೊಲ್ಕತ್ತ, ಅಸ್ಸಾಂ, ರಾಜಸ್ತಾನ ಮತ್ತು ಪುಣೆಯಲ್ಲಿ ಒಟ್ಟು 22 ವರ್ಷಗಳ ಕಾಲ ಭಾರತಾಂಬೆಯ ಸೇವೆಯನ್ನು ಸಲ್ಲಿಸಿ ಇದೀಗ ಸೇವಾ ನಿವೃತ್ತಿಯನ್ನು ಹೊಂದಿರುತ್ತಾರೆ.

Related posts

ಬೆಳ್ತಂಗಡಿ ಎಸ್.ಡಿ.ಪಿ.ಐ. ಅಭ್ಯರ್ಥಿ ಅಕ್ಬರ್ ನಾಮಪತ್ರ ಸಲ್ಲಿಕೆ

Suddi Udaya

ಮಹಾಬಲ ನಾಯ್ಕ ಮರಿಕೆ ನಿಧನ

Suddi Udaya

ಕುತ್ಲೂರು ಶ್ರೀ ಗುರುನಾರಾಯಣ ಸೇವಾ ಸಂಘದಲ್ಲಿ ಬೃಹತ್ ಆಧಾರ್ ನೋಂದಣಿ/ತಿದ್ದುಪಡಿ, ಅಪಘಾತ ಹಾಗೂ ಆರೋಗ್ಯ ವಿಮೆ ಮೇಳ

Suddi Udaya

ಗೇರುಕಟ್ಟೆ: ಪರಪ್ಪು ಮಸೀದಿ ಸಮಿತಿಯ ಜೊತೆಕಾರ್ಯದರ್ಶಿ ನಝೀರ್ ಸುಣ್ಣಲಡ್ಡ ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಮಾಲಾಡಿ  ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಧರ್ಮಸ್ಥಳ: ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಗೆ ಅಯೋಧ್ಯೆ ಶ್ರೀ ರಾಮ ಮಂತ್ರಾಕ್ಷತೆ ವಿತರಣೆ

Suddi Udaya
error: Content is protected !!