ಅಳದಂಗಡಿ ಪೇಟೆಯ ಮುಖ್ಯ ರಸ್ತೆಯಲ್ಲಿ ಮಹಿಳೆಯೊಬ್ಬರು ಅಡ್ಡಬಂದ ಪರಿಣಾಮ ಟೆಂಪೋ ಟ್ರಾವೆಲ್ಲರ್ ವಾಹನ ಪಲ್ಟಿಯಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ.


ಕಾರ್ಕಳದ ಕಡೆಯಿಂದ ಗುರುವಾಯನಕೆರೆ ಕಡೆ ಟೆಂಪೋ ಟ್ರಾವೆಲ್ಲರ್ ಬರುತ್ತಿರುವಾಗ ಅಳದಂಗಡಿ ಮುಖ್ಯ ರಸ್ತೆಯಲ್ಲಿ ಮಹಿಳೆಯೊಬ್ಬರು ಸಡನ್ನಾಗಿ ಅಡ್ಡ ಬಂದಿದ್ದು, ಮಹಿಳೆಯನ್ನು ಬಚಾವ್ ಮಾಡಲೆತ್ನಿಸಿ ಟೆಂಪೋ ಟ್ರಾವೆಲರ್ ಪಲ್ಟಿಯಾಗಿದೆ. ಮಹಿಳೆಗೆ ವಾಹನ ಸೈಡ್ ತಾಗಿದೆ. ಪಲ್ಟಿಯಾದ ವಾಹನದಲ್ಲಿ ಪ್ರಯಾಣಿಕರಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.











