ಓಡೀಲು : ಶ್ರೀ ಮಹಾಲಿಂಗೇಶ್ವರ ಗೆಳೆಯರ ಬಳಗ, ಓಡೀಲು ಇದರ ಆಶ್ರಯದಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗರ್ಡಾಡಿ ವಲಯ ಇದರ ಸಹಕಾರದೊಂದಿಗೆ ಓಡಿಲ್ದ ಕಂಡೊಡು ಕೆಸರ್‌ದ ಗೊಬ್ಬು 2025 ಅ.05 ರಂದು ಓಡೀಲು ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಡೆಯಲಿದೆ.
ಅಂಗನವಾಡಿ ಮಕ್ಕಳಿಗೆ 100 ಮೀಟರ್ ಓಟ, ಬಾಲ್ ಪಾಸಿಂಗ್, 1ರಿಂದ 3ನೇ ತರಗತಿ ಮಕ್ಕಳಿಗೆ ಲಿಂಬೆ ಚಮಚ ಓಟ 100 ಮೀಟರ್ ಓಟ, 4ರಿಂದ 7ನೇ ತರಗತಿ ಬಾಲಕ ಬಾಲಕಿಯರಿಗೆ 100 ಮೀಟರ್ ಓಟ, ಹಾಳೆ ಓಟ (2 ಜನ) ಕಂಬಳ ಓಟ, 8ರಿಂದ 10ನೇ ತರಗತಿ ಬಾಲಕ ಬಾಲಕಿಯರಿಗೆ 100 ಮೀಟರ್ ಓಟ, ಹಾಳೆ ಓಟ (2 ಜನ) ಬಾಲಕರಿಗೆ ಕಂಬಳ ಓಟ (3 ಜನ) ಕಂಬ ಸುತ್ತುವ ಓಟ, ಮಹಿಳೆಯರಿಗೆ ತ್ರೋಬಾಲ್, ಹಗ್ಗ ಜಗ್ಗಾಟ, ಬೊಗಸೆ ನೀರು,. ಮಹಿಳೆಯರಿಗೆ ಮುಕ್ತ ಮಡಿಕೆ ಒಡೆಯುವುದು, ನಿಧಿ ಶೋಧ, ಪುರುಷರಿಗೆ ವಾಲಿಬಾಲ್ , ಹಗ್ಗ ಜಗ್ಗಾಟ, ಪುರುಷರಿಗೆ ಮುಕ್ತ ಮಡಿಕೆ ಒಡೆಯುವುದು ನಿಧಿ ಶೋಧ ನಡೆಯಲಿದೆ.
ಪಡಂಗಡಿ, ಕುವೆಟ್ಟು ಓಡಿಲ್ನಾಳ, ಸೋಣಂದೂರು ಗ್ರಾಮಕ್ಕೊಳಪಟ್ಟವರಿಗೆ ಮಾತ್ರ .











