ಉಜಿರೆ: ಎಸ್ ಡಿ ಯಂ ಪದವಿ ಮಹಾ ವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ವತಿಯಿಂದ ಎಐ ಆಧಾರಿತ ಕಲಿಕೆಯ ಕುರಿತು ಒಂದು ದಿನದ ಕಾರ್ಯಾಗಾರ ಎಸ್ ಡಿ ಯಂ ಸ್ನಾತಕೋತ್ತರ ಕೇಂದ್ರದಲ್ಲಿ ಅ.4 ರಂದು ಜರುಗಿತು.

ಬೆಂಗಳೂರಿನ ಸಂತ ಜೋಸೆಫ್ ವಿಶ್ವವಿದ್ಯಾಲಯದ ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ರವಿನಂದನ್ ವಿಶೇಷ ಪರಿಣಿತ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ಹಲವಾರು AI(ಕೃತಕ ಬುಧ್ಧಿಮತ್ತೆ) ಆಧಾರಿತ ಸಾಧನಗಳ ಕುರಿತಾದ ಪ್ರಾಯೋಗಿಕ ಮಾಹಿತಿಯನ್ನು ಒದಗಿಸಿದರು.ಕಾರ್ಯಾಗಾರದಲ್ಲಿ ಮಖ್ಯಸ್ಥರಾದ ಅಭಿಜಿತ್ ಬಡಿಗೇರ ಹಾಗೂ ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.











