September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆ ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷರಾಗಿ ವಾಮನ ತಾಮ್ಹ ನ್ ಕರ್ ಆಯ್ಕೆ

ಅರಸಿನಮಕ್ಕಿ : ಸುಮಾರು 57 ವರ್ಷಗಳನ್ನು ಪೂರೈಸಿ ಸಾವಿರಾರು ಮಕ್ಕಳು ವಿದ್ಯಾರ್ಜನೆ ಮಾಡಿರುವ ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಹಳೆ ವಿದ್ಯಾರ್ಥಿ ಸಂಘವನ್ನು ಅ. 4ರಂದು ರಚಿಸಲಾಯಿತು.

ನೂತನ ಅಧ್ಯಕ್ಷರಾಗಿ ಉದ್ಯಮಿ ವಾಮನ ತಾಮ್ಹನ್ ಕರ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಉದ್ಯಮಿ ಪ್ರಕಾಶ್ ಪಿಲಿಕ್ಕಬೆ, ಶಿವಾನಂದ ಮಯ್ಯ, ಸಂದೀಪ್ ಅಮ್ಮುಡಂಗೆ, ಹರೀಶ್ ಯು., ರಾಜು ಕೆ. ಸಾಲಿಯಾನ್ ಮತ್ತು ವೃಷಾಂಕ್ ಖಾಡಿಲ್ಕರ್ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯದರ್ಶಿಗಳಾಗಿ ಮುಖ್ಯಶಿಕ್ಷಕಿ ಮಂಜುಳಾ, ಜೊತೆ ಕಾರ್ಯದರ್ಶಿಗಳಾಗಿ ಚೇತನಾ ಕುಮಾರಿ, ಶರತ್ ತುಳುಪುಳೆ ಹಾಗೂ ಸದಸ್ಯರುಗಳಾಗಿ ಶ್ರೀರಂಗ ದಾಮಲೆ, ಸುಧೀರ್ ಕುಮಾರ್ ಎಂ. ಎಸ್., ಕೇಶವ ರಾವ್ ನೆಕ್ಕಿಲು, ಜಯರಾಮ ನೆಲ್ಲಿತ್ತಾಯ ಶಿಶಿಲ, ಶಶಾಂಕ್, ಗಣೇಶ್ ಕೆ. ಹೊಸ್ತೋಟ, ಮುರಳೀಧರ ಶೆಟ್ಟಿಗಾರ್, ಭವ್ಯ, ತೇಜಸ್ವಿನಿ, ರೇಷ್ಮಾ, ಯಮುನಾರವರನ್ನು ಆಯ್ಕೆ ಮಾಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್ ಕುಲಾಲ್ ವಹಿಸಿದ್ದರು. ಮುಖ್ಯ ಶಿಕ್ಷಕಿ ಮಂಜುಳಾ ಎಂ. ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವಿಜ್ಞಾನ ಶಿಕ್ಷಕಿ ಶ್ರೀಚೇತನ ಕಾರ್ಯಕ್ರಮ ನಿರೂಪಿಸಿದರು.

Related posts

ಕನ್ಯಾಡಿ ಶ್ರೀ ರಾಮಕ್ಷೇತ್ರಕ್ಕೆ ಧರ್ಮಸ್ಥಳ ಗ್ರಾಮದ ಭಕ್ತರಿಂದ ಹೊರೆಕಾಣಿಕೆ ಪ್ರಯುಕ್ತ ಅಕ್ಕಿ ಸಮರ್ಪಣೆ

Suddi Udaya

ಧರ್ಮಸ್ಥಳ ಶ್ರೀ ಮಂ.ಅ.ಪ್ರೌ. ಶಾಲೆಯಲ್ಲಿ ನೈತಿಕ ಶಿಕ್ಷಣ ಮತ್ತು ಕಾನೂನು ಅರಿವು ಕಾರ್ಯಕ್ರಮ

Suddi Udaya

ತೆಂಕಕಾರಂದೂರು ಗ್ರಾಮದಲ್ಲಿ ರಾಜರೋಷವಾಗಿ ತಿರುಗಾಡುತ್ತಿರುವ ಚಿರತೆ: ಜನತೆ ಕಂಗಾಲು

Suddi Udaya

ನಾಳೆ (ಜ.14): ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ನಾರಾವಿ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ ಪ.ಜಾತಿಯ ಕಾಲೋನಿಗಳಲ್ಲಿ ಸಾಮರಸ್ಯದ ಸಂಕ್ರಾಂತಿ

Suddi Udaya

ಮರೋಡಿ: ವಿದ್ಯುತ್ ಪರಿವರ್ತಕದಿಂದ ಬೆಂಕಿ ಅವಘಡ

Suddi Udaya

ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಹಸoಚಾಲಕರಾಗಿ ಪ್ರಸನ್ನ ದರ್ಬೆ ಆಯ್ಕೆ

Suddi Udaya
error: Content is protected !!