ಬೆಳ್ತಂಗಡಿ : ನೆರಿಯ ಗ್ರಾಮದ ಕಡ್ಡಿಬಾಗಿಲು ನಿವಾಸಿ ಹರೀಶ್.ವಿ ಎಂಬವರ ಮನೆಯಲ್ಲಿ ಬೆಂಕಿ ಅನಾಹುತ ಉಂಟಾಗಿ ಮನೆ ಸಂಪೂರ್ಣ ಸುಟ್ಟು ಹೋದ ಘಟನೆ ಅ.6 ರಂದು ರಾತ್ರಿ ನಡೆದಿದೆ.

ಘಟನೆಯ ವೇಳೆ ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಸಾವು ನೋವು ಉಂಟಾಗಿಲ್ಲ. ಹರೀಶ್ ಅವರು ಭಜನೆ ಗುರುಗಳಾಗಿದ್ದು ಅವರು ತಮ್ಮ ತಂಡದೊಂದಿಗೆ ಬೇರೆಡೆ ತೆರಳಿದ್ದರು. ಪತ್ನಿ ಹಾಗೂ ಒಬ್ಬಳು ಮಗಳು ತವರು ಮನೆಗೆ ಹೋಗಿದ್ದರು. ಇನ್ನಿಬ್ಬರು ಮಕ್ಕಳು ಮನೆಯಲ್ಲಿ ಇದ್ದರು. ಅವರು ಸಂಜೆಯ ವೇಳೆ ಪಕ್ಕದ ಮನೆಗೆ ಹೋಗಿದ್ದರು. ಬಳಿಕ ರಾತ್ರಿ ಬೆಂಕಿ ಅನಾಹುತ ಉಂಟಾಗಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಮನೆಗೆ ಬೆಂಕಿ ಹೇಗೆ ತಗುಲಿದೆ ಎಂಬುದು ಇನ್ನಷ್ಟೆ ತಿಳಿದು ಬರಬೇಕಾಗಿದೆ. ಬೆಂಕಿಯ ಕೆನ್ನಲಿಗೆ ಮನೆಯಲ್ಲಿದ್ದ ವಸ್ತುಗಳೆಲ್ಲ ಸಂಪೂರ್ಣ ಆಹುತಿಯಾಗಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.











