23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಂಡಾಜೆ ಕ್ರೈಸ್ಟ್ ಅಕಾಡೆಮಿಯಲ್ಲಿ ಆರೋಗ್ಯ ತಪಾಸಣೆ ಮತ್ತು ಪ್ರಥಮ ಚಿಕಿತ್ಸಾ ತರಬೇತಿ ಶಿಬಿರ

ಬೆಳ್ತಂಗಡಿ: ಮುಂಡಾಜೆಯ ಕ್ರೈಸ್ಟ್ ಅಕಾಡೆಮಿಯಲ್ಲಿ ಆರೋಗ್ಯ ತಪಾಸಣೆ ಮತ್ತು ಪ್ರಥಮ ಚಿಕಿತ್ಸಾ ತರಬೇತಿ ಶಿಬಿರ ಅ.5 ರಂದು ಜರಗಿತು.


ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪ್ರಭು ಶಿಬಿರ ಉದ್ಘಾಟಿಸಿದರು.
ಕ್ರೈಸ್ಟ್ ಅಕಾಡೆಮಿಯ ಪ್ರಿನ್ಸಿಪಾಲ್ ಫಾ. ಜಾರ್ಜ್ ಸಿ.ಎಂ.ಐ., ಮುಂಡಾಜೆ ರೋಟರಿ ಸಮುದಾಯ ದಳದ ಅಧ್ಯಕ್ಷ ಪಿ.ಸಿ. ಸೆಬಾಸ್ಟಿಯನ್, ಕಾರ್ಯದರ್ಶಿ ರಾಕೇಶ್, ಬೆನಕ ಆಸ್ಪತ್ರೆಯ ಜನರಲ್ ಮ್ಯಾನೇಜರ್ ದೇವಸ್ಯ, ಪಿಆರ್ ಒ ಎಸ್.ಜಿ.ಭಟ್, ರೋಟರಿ ಕ್ಲಬ್ ಬೆಳ್ತಂಗಡಿ ಮಾಜಿ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಮೇ.ಜ. ಎಂ.ವಿ.ಭಟ್, ವೆಂಕಟೇಶ್ವರ ಭಟ್ ಕಜೆ ಮತ್ತಿತರರು ಉಪಸ್ಥಿತರಿದ್ದರು.

ಉಚಿತ ಮಧುಮೇಹ ತಪಾಸಣೆ, ರಕ್ತದೊತ್ತಡ, ಇಸಿಜಿ, ಸ್ತ್ರೀ ರೋಗ ಮತ್ತು ಪ್ರಸೂತಿ ಪರೀಕ್ಷೆ, ಮಕ್ಕಳ ಆರೋಗ್ಯ ತಪಾಸಣೆ ಸೇರಿದಂತೆ ಸಾಮಾನ್ಯ ಆರೋಗ್ಯ ತಪಾಸಣೆ ನಡೆಯಿತು. ಸುಮಾರು 110 ಮಂದಿ ಶಿಬಿರದಲ್ಲಿ ಪಾಲ್ಗೊಂಡರು.
ರೋಟರಿ ಸಮುದಾಯದ ಮುಂಡಾಜೆ ನೇತೃತ್ವದಲ್ಲಿ ಕ್ರೈಸ್ಟ್ ಅಕಾಡೆಮಿ ಮುಂಡಾಜೆ ಸಹಭಾಗಿತ್ವದಲ್ಲಿ ಉಜಿರೆ ಬೆನಕ ಚಾರಿಟೇಬಲ್ ಟ್ರಸ್ಟ್ ಹಾಗೂ ಬೆನಕ ಹೆಲ್ತ್ ಸೆಂಟರ್ ವತಿಯಿಂದ ಕಾರ್ಯಕ್ರಮ ನಡೆಯಿತು.

Related posts

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ : ಸಾಧಕರಿಗೆ ಸನ್ಮಾನ

Suddi Udaya

ಕೊಯ್ಯೂರು ಬೆಲ್ಡೆ ಗುಂಡ ಶ್ರೀ ಪಂಚಧೂಮವತಿ ವರ್ಷಾವಧಿ ಜಾತ್ರೋತ್ಸವ

Suddi Udaya

ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನಿಂದ ಚೈತನ್ಯ ವಿಮಾ ಚೆಕ್ ವಿತರಣೆ

Suddi Udaya

ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರೈತರಿಗೆ ಕಾಳುಮೆಣಸಿನ ಸುಧಾರಿತ ತಾಂತ್ರಿಕತೆಗಳ ತರಬೇತಿ ಕಾರ್ಯಕ್ರಮ

Suddi Udaya

ಮಡಂತ್ಯಾರು ವಿಶ್ವ ಹಿಂದೂ ಪರಿಷತ್ ವತಿಯಿಂದ ಶ್ರೀರಾಮೋತ್ಸವ

Suddi Udaya

ಮೊಗ್ರು: ಮಳೆಯಿಂದ ಹಾನಿಯಾದ ಮುಖ್ಯರಸ್ತೆಯ ದುರಸ್ತಿ ಕಾರ್ಯ

Suddi Udaya
error: Content is protected !!