
ಶಿಬಾಜೆ :ಇಲ್ಲಿಯ ಅರಂಪಾದೆ ಎಂಬಲ್ಲಿ ಕಳೆದ ಹಲವು ವರ್ಷಗಳಿಂದ ವಾಸವಿದ್ದ ಒ. ಪಿ. ಜಾರ್ಜ್ ಅವರ ರಬ್ಬರ್ ಕೃಷಿ ತೋಟವನ್ನು ಅರಣ್ಯ ಇಲಾಖೆಯವರು ತೆರವುಗೊಳಿಸಲಾದ ಹಿನ್ನೆಲೆಯಲ್ಲಿ ಇಂದು (ಅ.6) ಶಾಸಕ ಹರೀಶ್ ಪೂಂಜರವರು ಪ್ರದೇಶಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾ. ಪಂ. ನಿಕಟಪೂರ್ವಧ್ಯಕ್ಷ ರತೀಶ್ ಬೆಂಗಳ, ಉಪಾಧ್ಯಕ್ಷ ವಿನಯಚಂದ್ರ, ಶಿಶಿಲ ಗ್ರಾ. ಪಂ. ನಿಕಟಪೂರ್ವಧ್ಯಕ್ಷ ಸಂದೀಪ್, ಇನ್ನಿತರರು ಉಪಸ್ಥಿತರಿದ್ದರು.











