37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜದಲ್ಲಿ ಎಸ್ ಎನ್ ಮೂಡಬಿದ್ರೆ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ

ಮೂಡಬಿದ್ರೆ : ಎಸ್.ಎನ್.ಮೂಡಬಿದ್ರೆ ಪಾಲಿಟೆಕ್ನಿಕ್ ಎನ್.ಎಸ್.ಎಸ್ ನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ ಅ.1 ರಂದು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬಳಂಜದಲ್ಲಿ ನಡೆಯಿತು.

ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲರಾದ ಜೆ.ಜೆ ಪಿಂಟೋ ರವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ವಾರ್ಷಿಕ ಶಿಬಿರವನ್ನು ಸಂತೋಷ್ ಕುಮಾರ್ ಕಾಪಿನಡ್ಕ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲರಾದ ನೊರೋನ್ಹ ತರೀನಾ ರೀಟ, ಶೋಭಾ ಕುಲಾಲ್ ಅಧ್ಯಕ್ಷರು ಗ್ರಾಮ ಪಂಚಾಯತ್, ರಂಗಸ್ವಾಮಿ ಸಿ ಆರ್ ಮುಖ್ಯೋಪಾಧ್ಯಾಯರು, ರತ್ನಾಕರ ಪೂಜಾರಿ ಅಧ್ಯಕ್ಷರು ಎಸ್ ಡಿ ಎಂ ಸಿ ಬಳಂಜ, ಚಂದ್ರಶೇಖರ ಪಿಕೆ ಅಧ್ಯಕ್ಷರು ಅಮೃತ ಮಹೋತ್ಸವ ಸಮಿತಿ, ಯಶೋಧರ ಶೆಟ್ಟಿ ಉಪಾಧ್ಯಕ್ಷರು ಗ್ರಾಮ ಪಂಚಾಯತ್, ಹರೀಶ್ ವೈ ಚಂದ್ರಮ ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ, ಸುಲೋಚನಾ ಮುಖ್ಯೋಪಾಧ್ಯಾಯರು ಸರ್ಕಾರಿ ಪ್ರೌಢಶಾಲೆ ಉಪಸ್ಥಿತರಿದ್ದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಸುದರ್ಶನ್ ಪ್ರಾರ್ಥಿಸಿ, ಆಕರ್ಷ ಶಿಬಿರಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮ ಅಧಿಕಾರಿ ರಾಮಪ್ರಸಾದ್ ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮ ಅಧಿಕಾರಿ ಗೋಪಾಲಕೃಷ್ಣ ಕೆ ಎಸ್ ವಂದನಾರ್ಪಣೆಗೈದರು. ಘಟಕ ನಾಯಕಿ ಚಿತ್ರಶ್ರೀ ಕಾರ್ಯಕ್ರಮ ನಿರೂಪಿಸಿದರು.

ನಂತರ ವಿದ್ಯಾರ್ಥಿಗಳ ತಂಡ ಬಳಂಜ ಪರಿಸರದ ಸುಮಾರು 75ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ ಗ್ರಾಮ ಸಮೀಕ್ಷೆ ನಡೆಸಿ ಊರಿನ ಜನರೊಂದಿಗೆ ಬಾಂಧವ್ಯ ಬೆಸೆದರು. ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಮೊದಲ ದಿನದ ಧ್ವಜಾರೋಹಣವನ್ನು ನಡೆಸಿ ಶ್ರಮದಾನಕ್ಕೆ ಚಾಲನೆಯನ್ನು ನೀಡಿದರು.
ಶಿಬಿರದ ಎಲ್ಲಾ ದಿನಗಳು ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮ, ಬೆಳಗಿನ ಜಾವ ಧ್ವಜಾರೋಹಣ, ಶಾಲಾ ಪರಿಸರ ಸ್ವಚ್ಛತೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಶೇಷವೆಂಬಂತೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಂದ ಯಕ್ಷಗಾನ ಬಯಲಾಟ ನಡೆಯಲಿದೆ ಎಂಬುದಾಗಿ ಕಾರ್ಯಕ್ರಮ ಅಧಿಕಾರಿಗಳು ತಿಳಿಸಿದರು.

Related posts

ನಾಳೆ ಬೆಳ್ತಂಗಡಿಗೆ ಜಿಲ್ಲಾಧಿಕಾರಿ ಭೇಟಿ

Suddi Udaya

ಹತ್ಯಡ್ಕ: ದರ್ಭೆತಡ್ಕ ನಿವಾಸಿ ಶ್ರೀಮತಿ ಪದ್ಮಾಕ್ಷಿ ಗೋಗಟೆ ನಿಧನ

Suddi Udaya

ಉಜಿರೆ:ಅನಾಥ ಶವವನ್ನು ಪೊಲೀಸರಿಗೆ ಒಪ್ಪಿಸಿದ ಸ್ವಯಂಸೇವಕರು

Suddi Udaya

ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ ಬೆಳ್ತಂಗಡಿ ತಾ.ಪಂ. ನಲ್ಲಿ ಬಾಲ ಕಾರ್ಮಿಕ ನಿರ್ಮೂಲನೆ ಕುರಿತು ಪ್ರಮಾಣ ವಚನ

Suddi Udaya

ಕನ್ಯಾಡಿ : ಹಿಂದೂ ಧಾರ್ಮಿಕ ಸೇವಾ ಸಮಿತಿಯಿಂದ ಚಿಕಿತ್ಸಾ ನೆರವು

Suddi Udaya

ಮಾ.31: ಲಾಯಿಲ ಪಿಲಿಪಂಜರ ಕ್ಷೇತ್ರದಲ್ಲಿ ದೈವಗಳ ಪ್ರತಿಷ್ಠಾ ಮಹೋತ್ಸವ ಹಾಗೂ ದೈವಗಳ ನೇಮೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!