ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ: ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ವಿಭಾಗದಿಂದ ಅಂತರಾಷ್ಟ್ರೀ ಯ ವಿಚಾರ ಸಂಕಿರಣ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ಇನೋವೇಷನ್ಸ್ ಇನ್ ಕೆಮಿಸ್ಟ್ರಿ ಮೆಟೀರಿಯಲ್ಸ್ ಆ್ಯಂಡ್ ಮೆಡಿಸಿನ್ಸ್ ಫಾರ್ ಸಸ್ಟೇನೇಬಲ್ ಸೊಸೈಟಿ ಶೀರ್ಷಿಕೆಯಡಿ ಅಂತರಾಷ್ಟೀಯ ವಿಚಾರ ಸಂಕಿರಣವನ್ನು ಎಸ್.ಡಿ.ಎಂ ಎಜ್ಯುಕೇಶನಲ್ ಸೊಸೈಟಿ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಅವರು ಇಂದ್ರಪ್ರಸ್ಥ ಸಭಾಂಗಣದಲ್ಲಿ ಅ.8 ರಂದು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಭೌತಿಕ ವಸ್ತು-ಉತ್ಪನ್ನ-ಔಷಧೀಯ ನೆಲೆಗಳನ್ನು ಆಧರಿಸಿ ರಸಾಯನಶಾಸ್ತ್ರ ಶೈಕ್ಷಣಿಕ ವಲಯದಲ್ಲಿ ನಡೆಯುವ ಸಂಶೋಧನೆಯ ಹೆಜ್ಜೆಗಳು ಸುಸ್ಥಿರ ಸಮಾಜ ನಿರ್ಮಾಣದೊಂದಿಗಿರಬೇಕು ಎಂಬ ಕೇಂದ್ರ ಆಶಯದೊಂದಿಗೆ ಈ ವಿಚಾರ ಸಂಕಿರಣ ಆಯೋಜಿತವಾಗುತ್ತಿದೆ ಎಂದರು.

ಜರ್ಮನಿಯ ಇನ್ಸಿಟ್ಯೂಟ್ ಆಫ್ ಸಾಲಿಡ್ ಸ್ಟೇಟ್ ಫಿಸಿಕ್ಸ್ ಲೈಬ್ನಿಜ್‌ನ ಸಂಶೋಧಕ ಉಲ್ರಿಶ್ ಕೆ ರೊಝಲರ್ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಅಂತರಾಷ್ಟ್ರೀಯ ವಿಚಾರ ಸಂಕೀರಣದ ಅಧ್ಯಕ್ಷತೆಯನ್ನು ಎಸ್.ಡಿ.ಎಂ ಕಾಲೇಜಿನ‌ ಪ್ರಾಂಶುಪಾಲರಾದ ಡಾ.ವಿಶ್ವನಾಥ ಪಿ ವಹಿಸಿದ್ದರು.

ವೇದಿಕೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಆರ್.ಶಿವರಾಮ ಹೊಳ್ಳ, ತಮಿಳುನಾಡಿನ ಕರೈಕುಡಿಯ ಸೆಚಿಟ್ರಲ್ ಎಲೆಕ್ಟ್ರೋ ಕೆಮಿಕಲ್ ರಿಸರ್ಚ್ ಇನ್ಸಿಟ್ಯೂಟ್‌ನ ನಿರ್ದೇಶಕ ಡಾ.ರಮೇಶ್ ಕೆ, ಗೋವಾದ ಸಿಂಗೇಟಾ ಬಯೋಸೈನ್ಸಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಭಾನು ಮಂಜುನಾಥ್ ನಾರಾಯಣ್ ಉಪಸ್ಥಿತರಿದ್ದರು.

ವೈಷ್ಣವಿ ಮತ್ತು ತಂಡದವರು ಪ್ರಾರ್ಥನೆಗೈದರು,ಡೀನ್ ಡಾ.ಸೌಮ್ಯ ಸ್ವಾಗತಿಸಿದರು. ಡಾ.ನೆಪಿಶತ್ ನಿರೂಪಿಸಿದರು. ಡಾ.ಶಶಿಪ್ರಭಾ ವಂದಿಸಿದರು.

Related posts

ಜಿಲ್ಲಾ ಕಾರಾಗೃಹದಲ್ಲಿ ಯೋಗ ಬೋಧನೆ

Suddi Udaya

ಕೊಲ್ಲೂರಿನಿಂದ-ನಾಡಿನ ಪ್ರಸಿದ್ದ ಶ್ರದ್ದಾಕೇಂದ್ರ ಧರ್ಮಸ್ಥಳಕ್ಕೆ ಧರ್ಮ ಸಂರಕ್ಷಣಾ ಯಾತ್ರೆ: ಉಜಿರೆಯಲ್ಲಿ ಧರ್ಮ ಸಂರಕ್ಷಣಾ ರಥಯಾತ್ರೆಗೆ ಅದ್ದೂರಿ ಚಾಲನೆ,

Suddi Udaya

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ಫೆರ್ನಾಂಡಿಸ್ ನೇಮಕ

Suddi Udaya

ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾಗಿ ಬಿ. ಪದ್ಮನಾಭ ಸಾಲ್ಯಾನ್ ನೇಮಕ

Suddi Udaya

ಗೇರುಕಟ್ಟೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶೇಷ ಚೇತನರ ಬಗ್ಗೆ ಸಂವಾದ ಕಾರ್ಯಕ್ರಮ

Suddi Udaya

ಮರಕ್ಕೆ ನೇಣುಬಿಗಿದು ವೃದ್ಧ ಆತ್ಮಹತ್ಯೆಗೆ ಶರಣು

Suddi Udaya
error: Content is protected !!