25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ರುಡ್ ಸೆಟ್ ಸಂಸ್ಥೆಯಲ್ಲಿ ಟಿ.ವಿ. ಟೆಕ್ನಿಷಿಯನ್ ತರಬೇತಿಯ ಸಮಾರೋಪ ಸಮಾರಂಭ

ಉಜಿರೆ : ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದರ್ಶಿತ್ವದ ಈ ರುಡ್ ಸೆಟ್ ಸಂಸ್ಥೆಯ ಮೂಲಕ ನಿರುದ್ಯೋಗ ನಿವರಾಣೆಗೆ ಮಹತ್ವ ಮೈಲುಗಲ್ಲು ಆಗಿದೆ. ಇಂದಿನ ಆಧುನಿಕ ಯುಗದಲ್ಲಿ ಡಿಜಿಟಲ್ ಮಾಧ್ಯಮಕ್ಕೆ ಹೆಚ್ಚಿನ ಮಹತ್ವ ಇದೆ ಈ ಹಿನ್ನಲೆಯಲ್ಲಿ ವೃತ್ತಿಗೆ ಸಂಬಂಧಿಸಿದ ತರಬೇತಿಯನ್ನು ಪಡೆಯುವುದು ಮಾತ್ರವಲ್ಲ ಆ ವೃತ್ತಿಯಲ್ಲಿ ಶ್ರದ್ಧೆ –ಬದ್ಧತೆ ಇರಬೇಕು ಆವಾಗ ಅದು ನಮ್ಮ ಕೈ ಹಿಡಿಯುತ್ತದೆ. ಜೀವನ ಅನ್ನುವುದು ಸುಲಭವಲ್ಲ ಪ್ರತಿ ಕ್ಷಣವು ದುಡಿಯಬೇಕಾಗುತ್ತದೆ. ತೀರ ಕಷ್ಟದ ಸಮಯದಲ್ಲಿ ಸಕರಾತ್ಮಕವಾದ ಯೋಚನೆ ಮಾಡಿದರೆ ಯಾವುದೇ ಕಷ್ಟವನ್ನು ಎದುರಿಸಿ ಬೆಳೆಯಬಹುದು. ಸಣ್ಣ ಸಣ್ಣ ಯೋಜನೆಗಳನ್ನು ಹಾಕಿಕೊಂಡು ಅದನ್ನು ಸಾಧಿಸಿ, ಇದರ ಮೂಲಕ ಹೆಚ್ಚಿನ ಸಾಧನೆ ಮಾಡಬಹುದು. ಸಾಧನೆಗೆ ಮುಖ್ಯವಾಗಿ ಮನಸ್ಸು-ಗುರಿ-ಪ್ರಯತ್ನ ಮುಖ್ಯ. ಶ್ರದ್ಧೆ-ಆತ್ಮವಿಶ್ವಾಸ-ಸಕರಾತ್ಮಕ ಮಾನೋಭಾವದ ಜೊತೆಗೆ ದುರಭ್ಯಾಸಗಳಿಂದ ದೂರ ಇದ್ದು ಸಂಸ್ಥೆಯಲ್ಲಿ ಹೇಳಿ ಕೊಟ್ಟ ಎಲ್ಲಾ ವಿಚಾರಗಳನ್ನು ಅಳವಡಿಸಿಕೊಂಡು ಯಶಸ್ವಿ ಉದ್ಯಮಿಗಳಾಗಿ ಬೆಳೆಯಿರಿ ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿಯುತ ಪದವಿ ಪೂರ್ವ ಕಾಲೇಜಿನ ಪ್ರಾಶುಂಪಾಲರಾದ ಸುನೀಲ್ ಪಂಡಿತ್ ಅಭಿಪ್ರಾಯಪಟ್ಟರು.

ಅವರು ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದ ಟಿ.ವಿ. ಟೆಕ್ನಿಷಿಯನ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಮೌಲ್ಯ ಮತ್ತು ಕೌಶಲ್ಯವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ವಿಜಯ ಕುಮಾರ್ ವಹಿಸಿ, ಮಾತನಾಡಿ ಡಿಜಿಟಲ್ ಕ್ಷೇತ್ರದಲ್ಲಿ ಇರುವ ವಿವಿಧ ಅವಕಾಶಗಳನ್ನು ಬಳಸಿಕೊಳ್ಳಿ ಸ್ವ ಉದ್ಯೋಗಕ್ಕೆ ಬೇಕಾದ ಸಾಲ ಸೌಲಭ್ಯಗಳಿಗೆ ಯೋಜನಾ ವರದಿಯನ್ನು ತಯಾರಿಸಿಕೊಂಡು ಬ್ಯಾಂಕ್ ಗಳನ್ನು ಸಂಪರ್ಕ ಮಾಡಿ ಎಂದು ತಿಳಿಸಿದರು.

ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಕೆ.ಕರುಣಾಕರ ಜೈನ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ವಂದಿಸಿದರು. ರಂಜಿತ್, ವಿನೋದ ಕುಮಾರ್ ತರಬೇತಿಯ ಅನುಭವ ಹಂಚಿಕೊಂಡರು.

Related posts

ಪಿಯುಸಿ ಫಲಿತಾಂಶ: ಲಾಯಿಲ ಪ್ರಸನ್ನ ಪ.ಪೂ. ಕಾಲೇಜಿನ ಅಲ್ಶಾನಾ ಗೆ 535 ಅಂಕ

Suddi Udaya

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸತೀಶ್ ಕೆ ಬಂಗೇರ ಕಾಶಿಪಟ್ಣ, ಉಪಾಧ್ಯಕ್ಷರಾಗಿ ಶ್ರೀಪತಿ ಉಪಾಧ್ಯಯ ಆಯ್ಕೆ

Suddi Udaya

ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವ ನಾರಾವಿಯ ಮಹಿಳೆ ಮೃತ್ಯು

Suddi Udaya

ಬೆಳಾಲು: ಕೊಲ್ಪಾಡಿ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ

Suddi Udaya

ಲಾಯಿಲ: ಶ್ರೀ ಗುರು ರಾಘವೇಂದ್ರ ಸ್ವಾಮಿ ಸೇವಾ ಪ್ರತಿಷ್ಠಾನದಿಂದ ಶ್ರೀ ಶನೇಶ್ವರ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

‘ರಾಜ್ಯ ಜ್ಯೂನಿಯರ್‌ ಅಥ್ಲೆಟಿಕ್ಸ್‌ ಗೆ’ ಸೇಕ್ರೆಡ್‌ ಹಾರ್ಟ್‌ ಕಾಲೇಜಿನ ವಿದ್ಯಾರ್ಥಿ ಪುನೀತ್‌ ಕುಮಾರ್‌ ಆಯ್ಕೆ

Suddi Udaya
error: Content is protected !!