28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಎಸ್‌.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರಮಟ್ಟದ ಎಫ್.ಡಿ.ಪಿ ಕಾರ್ಯಾಗಾರದ ಮಾಹಿತಿ ಕೈಪಿಡಿ ಬಿಡುಗಡೆ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ತಾಂತ್ರಿಕ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC), ವಿಜ್ಞಾನ ಹಾಗೂ ಗ್ರಂಥಾಲಯ ವಿಭಾಗ ಮತ್ತು ಮಹಾವಿದ್ಯಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ಕೋಶಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನಲ್ಲಿ ಆಯೋಜನೆಗೊಳ್ಳಲಿರುವ ಐದು ದಿನಗಳ ರಾಷ್ಟ್ರೀಯ ಮಟ್ಟದ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ (Faculty Development Programme – FDP) ದ ಆಮಂತ್ರಣ ಪತ್ರಿಕೆ ಹಾಗೂ ಕಾರ್ಯಾಗಾರದ ಉದ್ದೇಶ ಮತ್ತು ವಿವರಣೆಯನ್ನು ಹೊಂದಿರುವ ಮಾಹಿತಿ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ ಎಸ್ ಹಾಗೂ ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ ಸಮ್ಮುಖದಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕ ಪ್ರೊ. ಎಸ್.ಎನ್ ಕಾಕತ್ಕಾರ್ , ಕಾಲೇಜಿನ ಪ್ರಾಚಾರ್ಯರಾದ ಡಾ. ಸಂದೀಪ್ ಆರ್., ಕಾಲೇಜಿನ ಪ್ರಬಂಧಕರಾದ ರಾಜವರ್ಮ , ಕಾರ್ಯಾಗಾರದ ಸಂಯೋಜಕರಾದ ಡಾ. ರಜತ ಪಿ. ಶೆಟ್ಟಿ ಹಾಗು ಡಾ. ನವೀನ್ ಕುಮಾರ್ ಕಾರ್ಯಾಗಾರ ಆಯೋಜನಾ ಸಮಿತಿಯ ಕಾರ್ಯದರ್ಶಿಗಳಾದ ಡಾ. ವಿದ್ಯಾ ಕೆ, ಡಾ. ನಿತ್ಯಾನಂದ ಬಿ. ಡಾ. ಗಿರೀಶ್ ಕುಮಾರ್ ಸೇರಿದಂತೆ ಡಾ. ರವೀಶ್ ಪಡುಮಲೆ, ಡಾ. ತ್ಯಾಗರಾಜ್ ಮತ್ತು ಇತರೆ ಪ್ರಮುಖರು ಉಪಸ್ಥಿತರಿದ್ದರು.

ರಾಷ್ಟ್ರ ಮಟ್ಟದ ಅಧ್ಯಾಪಕರ ಅಭಿವೃದ್ಧಿ ಕಾರ್ಯಗಾರವು ಇದೇ ಬರುವ ಆಗಸ್ಟ್ 18 ರಿಂದ 22ರವರೆಗೆ ಐದು ದಿನಗಳ ವರೆಗೆ ಕಾಲೇಜಿನಲ್ಲಿ ನಡೆಯಲಿದೆ. ಮುಂದಿನ ತಲೆಮಾರಿನ ಶೈಕ್ಷಣಿಕ ಕ್ಷೇತ್ರದ ಕೃತಕ ಬುದ್ಧಿಮತ್ತೆ (AI) ಆಧಾರಿತ ಬೋಧನೆ, ಸಂಶೋಧನೆ ಮತ್ತು ಆವಿಷ್ಕಾರ ವಿಷಯದಡಿ ಕಾರ್ಯಾಗಾರವು ಸಾಗಿಬರಲಿದೆ. ಕಾರ್ಯಗಾರದಲ್ಲಿ ರಾಷ್ಟ್ರೀಯ ಮಟ್ಟದ ವಿವಿಧ ವಿಷಯಗಳ ತಜ್ಞರು ಪಾಲ್ಗೊಳ್ಳಲಿದ್ದಾರೆ.

ಈ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮವು ಕೃತಕ ಬುದ್ಧಿಮತ್ತೆ (AI) ಆಧಾರಿತ ಬೋಧನೆ, ಸಂಶೋಧನೆ ಹಾಗೂ ಆವಿಷ್ಕಾರಗಳ ಇತ್ತೀಚಿನ ಬೆಳವಣಿಗೆಗಳನ್ನು ಪರಿಚಯಿಸುವುದರ ಜೊತೆಗೆ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ AI ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಅಧ್ಯಾಪಕರಿಗೆ ಒದಗಿಸುವ ಉದ್ದೇಶವನ್ನು ಹೊಂದಿದೆ

Related posts

ತಾಲೂಕಿನಲ್ಲಿ ಗುಡುಗು ಸಹಿತ ಗಾಳಿ ಮಳೆ ಅಲ್ಲಲ್ಲಿ ಮರ ಬಿದ್ದು, ವಿದ್ಯುತ್, ಮನೆಗಳಿಗೆ ಹಾನಿ-ರಸ್ತೆ ಸಂಚಾರ ಅಸ್ತವ್ಯಸ್ತ

Suddi Udaya

ಉಜ್ವಲ ಯೋಜನೆಯ ಮಹಿಳೆಯರ ಮೇಲೂ, “ಬೆಲೆ ಏರಿಕೆಯ ಬರೆ ಎಳೆದ” ಕೇಂದ್ರ ಸರ್ಕಾರ: ರಕ್ಷಿತ್ ಶಿವರಾಂ

Suddi Udaya

ಉಜಿರೆ ಎಸ್.ಡಿ.ಎಂ. ಮಹಿಳಾ ಐ.ಟಿ.ಐ.ಯಲ್ಲಿ ಭಿತ್ತಿಪತ್ರಿಕೆ ಅನಾವರಣ

Suddi Udaya

ಮುಂಡಾಜೆ ಹೈಸ್ಕೂಲಿನಲ್ಲಿ ನಿವೃತ್ತ ಅಧ್ಯಾಪಕರಿಗೆ ಗುರುವಂದನೆ

Suddi Udaya

ಬಾಲಕಿಯ ಮೇಲೆ ಅತ್ಯಾಚಾರ : ವೇಣೂರಿನ ರಿಕ್ಷಾ ಚಾಲಕ ಜಮಾಲುದ್ದೀನ್ ಬಂಧನ

Suddi Udaya

ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ- ಶೇ 20 ಡಿವಿಡೆಂಡ್ ಹಾಗೂ ತಾಲೂಕಿನ ಎಲ್ಲಾ ಸರಕಾರಿ ಆಸ್ಪತ್ರೆಗಳ ಡಿ ವರ್ಗದ ಹೊರ ಗುತ್ತಿಗೆ ನೌಕರರಿಗೆ ಉಚಿತ ಸಮವಸ್ತ್ರ ನೀಡುವ ಘೋಷಣೆ

Suddi Udaya
error: Content is protected !!