September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ವರ್ತಕರ ಸಂಘದಿಂದ ಉಸ್ತುವಾರಿ ಸಚಿವ ಗುಂಡೂರಾವ್ ರವರಿಗೆ ಮನವಿ

ಬೆಳ್ತಂಗಡಿ : ವರ್ತಕರ ಸಂಘದಿಂದ ಬೆಳ್ತಂಗಡಿ ಪೇಟೆಯಲ್ಲಿ ಸರ್ವಿಸ್ ರಸ್ತೆ ರದ್ದು ಮಾಡಿ ಇದ್ದ ರಸ್ತೆಯನ್ನು ಪುಂಜಾಲಕಟ್ಟೆ – ಬಿ.ಸಿ.ರೋಡ್ ಮಾದರಿಯಲ್ಲಿ ಅಗಲೀಕರಣ ಮಾಡಲು ಪೇಟೆಯ ಎಲ್ಲಾ ವರ್ತಕರು ಸೇರಿ ಸಂತೆಕಟ್ಟೆಯ ಅಯ್ಯಪ್ಪ ಗುಡಿ ಹತ್ತಿರ ನಿಂತು ಉಸ್ತುವಾರಿ ಸಚಿವ ಗುಂಡೂರಾವ್ ಇವರಿಗೆ ಮನವಿಯನ್ನು ಸಲ್ಲಿಸಿದರು.

ಇವರೊಂದಿಗೆ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಉಪಸ್ಥಿತರಿದ್ದರು.

ಸರ್ವಿಸ್ ರಸ್ತೆಯಿಂದ ಪೇಟೆಯ ಎಲ್ಲಾ ವರ್ತಕರಿಗೆ ಕಷ್ಟ ನಷ್ಟವನ್ನು ಅನುಭವಿಸುವ ಹಾಗೂ ಹೆಚ್ಚಿನ ರಸ್ತೆ ಅಪಘಾತಗಳು ಆಗುವ ಸಾಧ್ಯತೆಗಳು ತುಂಬಾ ಹೆಚ್ಚಾಗಲಿವೆ. ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ರೋನಾಲ್ಡ್ ಲೋಬೊ, ಜತೆ ಕಾರ್ಯದರ್ಶಿ ಯಶವಂತ್ ಪಟವರ್ಧನ್, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ವರ್ತಕರಾದ ಜಗದೀಶ್ ಡಿ, ಶರ್ಮಿ ಳಾ ಮೋರಸ್, ಅಶೋಕ್ ಶೆಟ್ಟಿ, ವಿನ್ಸಂಟ್ ಡಿಸೋಜಾ, ವಿಲ್ಸನ್ ಗೊನ್ಸಲ್ವಿಸ್, ಸುಶೀಲ ಹೆಗ್ಡೆ, ವಿಶ್ವನಾಥ್ ಶೆಟ್ಟಿ, ಜೂಡ್ ಲೋಬೊ, ಎಮ್. ಚ್ ಅಬೂಬಕರ್, ಯಶವಂತ್ ಬಾಳಿಗ , ಲೀಡ್ವಿನ್ ಟೆಲ್ಲಿಸ್, ಜೋಸೆಫ್ ಟೆಲ್ಲಿಸ್, ಮಂಜುನಾಥ್ ಪೈ, ಪಿ. ಕೆ. ಅಪ್ಸರ್ , ಗ್ರೇಸಿ ಲೋಬೊ, ಮೊಂತಿನ್ ಕ್ರ್ಯಾಸ್ತಾ, ಪ್ರವೀಣ್ ಹಳ್ಳಿಮನೆ ದಿನೇಶ್ ಹಾಗೂ ಹಲವಾರು ವರ್ತಕರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ: ಜಿಲ್ಲಾಮಟ್ಟದ ಯುವಜನ ಮೇಳ

Suddi Udaya

ಉಜಿರೆ ವಲಯದ ಜ್ಞಾನಶ್ರೀ ಜ್ಞಾನ ವಿಕಾಸ ಕೇಂದ್ರದಲ್ಲಿ ಮಲ್ಲಿಗೆ ಕೃಷಿ ಬಗ್ಗೆ ತರಬೇತಿ ಹಾಗೂ ಮಲ್ಲಿಗೆ ಗಿಡ ವಿತರಣಾ ಕಾರ್ಯಕ್ರಮ

Suddi Udaya

ಬೆಂಗಳೂರಿನಲ್ಲಿ ಗುರುವಾಯನಕೆರೆ ಜ್ಯೋತಿಷಿ ಬಿ.ಕೆ. ಸುಬಾಷ್ ಚಂದ್ರ ಜೈನ್ ರವರ “ಶ್ರೀ ಸ್ವಸ್ತಿಕ ಜ್ಯೋತಿಷ್ಯಾಲಯ” ಶಾಖೆ ಶುಭಾರಂಭ

Suddi Udaya

ಅಪರಿಚಿತ ವ್ಯಕ್ತಿ ಸಾವು : ವಾರೀಸುದಾರರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಶಿಶಿಲ ಹಾ.ಉ.ಸ. ಸಂಘದ ಅಧ್ಯಕ್ಷರಾಗಿ ಸಂತೋಷ್ ಎ.ಎಸ್ ಹಾಗೂ ಉಪಾಧ್ಯಕ್ಷರಾಗಿ ಡಿ ಲಕ್ಷ್ಮೀಶ ಗೌಡ ಆಯ್ಕೆ

Suddi Udaya

ಕಡಿರುದ್ಯಾವರ: ಮಲ್ಲಡ್ಕ ನಿವಾಸಿ ವಾಸು ಗೌಡ ನಿಧನ

Suddi Udaya
error: Content is protected !!