ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ 666ನೇ ವಾತ್ಸಲ್ಯ ಮನೆ ಹಸ್ತಾಂತರ ಹಾಗೂ ಮಾಸಾಶನ ಜನಮಂಗಳ ಕಾರ್ಯಕ್ರಮ: ಪರೋಪಕಾರ ಮತ್ತು ಭಕ್ತಿಯ ಭಗವಂತನ ಆರಾಧನೆಯಿಂದ ಜೀವನ ಪಾವನ: ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು

ಧರ್ಮಸ್ಥಳ: ಶ್ರೀ ಕ್ಷೇ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ 666ನೇ ವಾತ್ಸಲ್ಯ ಮನೆ ಹಸ್ತಾಂತರ ಹಾಗೂ ಮಾಸಾಶನ ಜನಮಂಗಳ ಕಾರ್ಯಕ್ರಮವು ಅಮೃತವರ್ಷಿಣಿ ಸಭಾಭವನದಲ್ಲಿ ಅ.12 ರಂದು ನಡೆಯಿತು.

ಶೃಂಗೇರಿ ಶ್ರೀ ಶಾರದಾ ಪೀಠಂ ದಕ್ಷಿಣಾಮ್ನಾಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ದಿವ್ಯ ಸಾನಿಧ್ಯ ವಹಿಸಿ ಪರೋಪಕಾರ ಮತ್ತು ಭಕ್ತಿಯ ಭಗವಂತನ ಆರಾಧನೆಯಿಂದ ಜೀವನ ಪಾವನ ಆಗುತ್ತದೆ ಎಂದು ಸ್ವಾಮೀಜಿ ಆಶೀರ್ವಚನ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿ 666 ವಾತ್ಸಲ್ಯ ಮನೆಗಳನ್ನು ಹಸ್ತಾಂತರಿಸಿದ್ದು, ಮುಂದೆ ಒಂದು ಸಾವಿರ ಮನೆಗಳನ್ನು ನೀಡುವ ಯೋಜನೆಯಿದೆ ಎಂದರು.ಎಸ್.ಕೆ.ಡಿ.ಆರ್.ಡಿ‌.ಪಿ ಚಾರ್ಟರ್ಡ್ ಅಕೌಂಟೆಂಟ್ ಹಾಗೂ ಟ್ರಸ್ಟಿಗಳಾದ ಶಾಮ್ ಭಟ್ ಕೆ,ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್, ಮಾತೃಶ್ರೀ ಹೇಮಾವತಿ ವೀ ಹೆಗ್ಗಡೆಯವರು,ಎಸ್.ಕೆ.ಡಿ.ಆರ್.ಡಿ‌.ಪಿ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್ ಕುಮಾರ್ ಎಸ್.ಎಸ್ ಉಪಸ್ಥಿತರಿದ್ದರು.

ನಿನಾದ ಕ್ಲಾಸಿಕಲ್ ತಂಡದಿಂದ ಪ್ರಾರ್ಥನೆ ನೇರವೇರಿತು.ಎಸ್.ಡಿ.ಎಂ ಉಪನ್ಯಾಸಕ ಶ್ರೀಧರ್ ಭಟ್ ಸ್ವಾಗತಿಸಿದರು.ಯೋಜನೆಯ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್ ವಂದಿಸಿದರು. ಪೂಜಾ ಪ್ರಶಾಂತ್ ಶೆಟ್ಟಿ ನಿರೂಪಿಸಿದರು.

Related posts

ಎಲ್.ಸಿ. ಆರ್. ಇಂಡಿಯನ್ ವಿದ್ಯಾ ಸಂಸ್ಥೆಯಲ್ಲಿ ವಿಶ್ವ ತಂಬಾಕು ರಹಿತ ದಿನದ ಆಚರಣೆ

Suddi Udaya

ಧರ್ಮಸ್ಥಳ ಶಾಂತಿವನದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

Suddi Udaya

ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧದ ಅಪಪ್ರಚಾರ ಖಂಡಿಸಿ ಸೂಕ್ತ ಕ್ರಮಕ್ಕೆ ಬೆಳ್ತಂಗಡಿ ತಾಲೂಕು ನಾಗರಿಕ ಹಿತರಕ್ಷಣಾ ವೇದಿಕೆಯಿಂದ ತಹಶೀಲ್ದಾರ್, ವಿಶೇಷ ತನಿಖಾದಳಕ್ಕೆ, ಬೆಳ್ತಂಗಡಿ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಕೆ

Suddi Udaya

ಜೂ.19: ದರ್ಭೆತಡ್ಕ ಸುದೆಗಂಡಿಯಲ್ಲಿ ಕಿರು ಸೇತುವೆಯ ದುರಸ್ತಿ ಕಾರ್ಯ ನಡೆಸಲು ಗ್ರಾಮಸ್ಥರ ಸಭೆ

Suddi Udaya

ಮುಂಡಾಜೆ: ಭಾರತೀಯ ಸೇನೆಯಲ್ಲಿ ಉದ್ಯೋಗ ಅವಕಾಶಗಳು ಹಾಗೂ ಆಯ್ಕೆ ಪ್ರಕ್ರಿಯೆ

Suddi Udaya

ದ.ಕ. ಜಿಲ್ಲೆಯಲ್ಲಿ ಅಡಿಕೆ ಕೋಕೋ ಮತ್ತು ಕಾಳುಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಸೌಲಭ್ಯ ಕಲ್ಪಿಸಲು ಇದುವರೆಗೂ ಯಾವುದೇ ಕ್ರಮವಹಿಸದೆ ಇರುವುದರ ಕುರಿತು ಮುಖ್ಯಮಂತ್ರಿಗಳ ಹಾಗೂ ತೋಟಗಾರಿಕ ಸಚಿವರ ಗಮನ ಸೆಳೆದ ವಿ.ಪ ಸದಸ್ಯ ಪ್ರತಾಪ್ ಸಿಂಹ ನಾಯಕ್

Suddi Udaya
error: Content is protected !!