25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಕ್ರಮ ಮದ್ಯ ಮಾರಾಟಕ್ಕೆ ಯತ್ನ: ಧರ್ಮಸ್ಥಳ ಪೊಲೀಸರಿಂದ ದಾಳಿ ಆರೋಪಿಯ ಬಂಧನ

ಬೆಳ್ತಂಗಡಿ : ನಿಡ್ಲೆ ಗ್ರಾಮದ ಕುದ್ರಾಯ ಬಸ್ ನಿಲ್ದಾಣದ ಅಂಗಡಿ ಬಳಿ ಅಕ್ರಮವಾಗಿ ಮಧ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಧರ್ಮಸ್ಥಳ ಪೊಲೀಸರು ದಾಳಿ ಮಾಡಿ ಮದ್ಯ ಸಮೇತ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಧರ್ಮಸ್ಥಳ-ನಿಡ್ಲೆ ಗ್ರಾಮದ ಬೀಟ್‌ ಸಿಬ್ಬಂದಿ ಸೆ.12 ರಂದು ಶೇಖರ ಗೌಡ ರವರು ಪಿಎಸ್ಐ ಗೆ ದೂರವಾಣಿ ಕರೆ ಮಾಡಿ ನಿಡ್ಲೆ ಗ್ರಾಮದ ಕುದ್ರಾಯ ಬಸ್ಸು ತಂಗುದಾಣದ ಅಂಗಡಿ ಬಳಿ ಶಾಂತಪ್ಪ ಎಂಬಾತನು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯವನ್ನು ಶೇಖರಿಸಿಟ್ಟು ವ್ಯಾಪಾರ ಮಾಡಲು ಪ್ರಯತ್ನಿಸುತ್ತಿರುವುದಾಗಿ ಭಾತ್ಮಿದಾರರಿಂದ ಖಚಿತ ಮಾಹಿತಿ ಬಂದಿರುವುದಾಗಿ ತಿಳಿಸಿದಂತೆ ಮಾಹಿತಿಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಧರ್ಮಸ್ಥಳ ಪ್ರಭಾರ ಪಿಎಸ್ಐ ಸಿಕಂಧರ್ ಪಾಷಾ ಸಿಬ್ಬಂದಿಗಳೊಂದಿಗೆ ಇಲಾಖಾ ವಾಹನದಲ್ಲಿ ಠಾಣೆಯಿಂದ ಕುದ್ರಾಯ ಬಳಿ ನಿಂತುಕೊಂಡಿದ್ದ ಇಬ್ಬರನ್ನು ಪಂಚರನ್ನಾಗಿ ಕರೆದುಕೊಂಡು 2 ಗಂಟೆಗೆ ಪಂಚರೊಂದಿಗೆ ಅಲ್ಲಿಯೇ ಹತ್ತಿರದಲ್ಲಿದ್ದ ಅಂಗಡಿಯ ಬಳಿ ಹೋಗಿ ಸಿಬ್ಬಂದಿಯವರ ಜೊತೆಯಲ್ಲಿ ಅಂಗಡಿಯ ಒಳಗೆ ಹಾಗೂ ಅಂಗಡಿಯ ಹೊರಗೆ ಹುಡುಕಾಡಿದ ಸಮಯ ಅಂಗಡಿಯ ಹೊರಗಡೆ ಹಿಂಬದಿಯಲ್ಲಿ ಗೋಣಿ ಚೀಲದ ಕಟ್ಟೊಂದು ಇದ್ದು, ಅದರ ಸಮೀಪ ಒಬ್ಬ ವ್ಯಕ್ತಿ ನಿಂತುಕೊಂಡಿದ್ದ ಸಾಂತಪ್ಪ ಎಂಬಾತನನ್ನು ವಶಕ್ಕೆ ಪಡೆದು ಸ್ಥಳದಲ್ಲಿ ಶೋಧನಾ ಕಾರ್ಯ ನಡೆಸಲು ಮಾನ್ಯ ನ್ಯಾಯಾಲಯದಿಂದ ಸಮುಚಿತ ಆದೇಶ ಪಡೆಯಲು ಕಾಲವಕಾಶ ಇಲ್ಲದ ಕಾರಣ ಕರ್ನಾಟಕ ಅಬಕಾರಿ ಕಾಯಿದೆ ಅಧಿನಿಯಮ 1965 ರ 54 ಪ್ರಕರಣಾಧೀನ ಬರೆದ ಶೋಧನಾ ಸರ್ಚ್‌ ವಾರಂಟ್‌ ಗೆ ಪಂಚರ ಸಹಿ ಪಡೆದ ಬಳಿಕ ಆರೋಪಿಯನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ ಅಕ್ರಮ ಮದ್ಯ ಮಾರಾಟ ಮಾಡುವುದನ್ನು ಬಾಯಿಬಿಟ್ಟಿದ್ದಾನೆ. ಬಳಿಕ ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ಮದ್ಯದ ಸ್ಯಾಚೆಟ್‌ ಗಳು ಇರುವುದಾಗಿ ತಿಳಿಸಿದ್ದು, ಪಂಚರ ಸಮಕ್ಷಮದಲ್ಲಿ ಆರೋಪಿತನ ಅಂಗ ಜಪ್ತಿ ಮಾಡಿ ಬಳಿಕ ಪ್ಲಾಸ್ಟಿಕ್ ಗೋಣಿ ಕೈ ಚೀಲವನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ 90 ML MYSORE LANCER Whisky ಎಂಬ ಹೆಸರಿರುವ ಒಟ್ಟು 36 ಸ್ಯಾಚೆಟ್‌ಗಳಲ್ಲಿ ಒಟ್ಟು 3.240 ಲೀಟರ್‌ ಮದ್ಯವಿದ್ದು ಇದರ ಅಂದಾಜು ಮೌಲ್ಯ ರೂ 1800/- ಆಗಬಹುದು. ಆರೋಪಿಯು ಯಾವುದೇ ಪರವಾನಿಗೆ ಅಥವಾ ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಮದ್ಯ ತುಂಬಿದ ಸ್ಯಾಚೆಟ್‌ಗಳನ್ನು ಆತನ ವಶದಲ್ಲಿಟ್ಟು ಸಾರ್ವಜನಿಕರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದುದರಿಂದ ಆರೋಪಿ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಾಯರ್ತಡ್ಕ ಪಂಚಮಿ ಪಾದೆ ಮನೆಯ ಶಾಂತಪ್ಪ (51) ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related posts

ಅಯೋಧ್ಯೆ ಸಂಭ್ರಮಾಚರಣೆ ಸಂದರ್ಭ ಬಡಗಕಾರಂದೂರು ಗ್ರಾಮದ ಬಿಕ್ಕಿರ ನಿವಾಸಿಗಳಿಂದ ತಮ್ಮ ವಾಸಸ್ಥಳದ ಪರಿಸರವನ್ನು ರಾಮನಗರ ಎಂಬ ನಾಮಕರಣ

Suddi Udaya

ಕೊಯ್ಯೂರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಾರ್ಷಿಕ ಮಹಾಸಭೆ

Suddi Udaya

ಕಾಶಿಪಟ್ಣ ನಿವಾಸಿ ರವೀಂದ್ರ ಆಚಾರ್ಯ ನಾಪತ್ತೆ

Suddi Udaya

ಬೆಳ್ತಂಗಡಿ ತಾಲೂಕು ಕುಣಿತ ಭಜನಾ ತರಬೇತಿಗಾರರ ಸಂಘದ ಅಧ್ಯಕ್ಷರಾಗಿ ಸಂದೇಶ್, ಕಾರ್ಯದರ್ಶಿಯಾಗಿ ವಿ ಹರೀಶ್, ಸಂಘಟನಾ ಕಾರ್ಯದರ್ಶಿಯಾಗಿ ನಾಗೇಶ್ ಆಯ್ಕೆ

Suddi Udaya

ಹೊಸ ವಿದ್ಯುತ್ ಸಂಪರ್ಕಗಳಿಗೆ ಇನ್ನು ಬರಲಿದೆ..ಸ್ಮಾರ್ಟ್ ಮೀಟರ್: ಮೊಬೈಲ್ ಮೂಲಕ ಪ್ರೀ ಪೇಯ್ಡ್ ಪೋಸ್ಟ್ ಪೇಯ್ಡ್ ಸೌಲಭ್ಯ

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಪೂರ್ವ ತಯಾರಿ ಸಭೆ

Suddi Udaya
error: Content is protected !!