25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಡ ಸ.ಹಿ.ಪ್ರಾ. ಶಾಲೆಯ ಶತಮಾನೋತ್ಸವ ವರ್ಷಾಚಾರಣೆಯ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ

ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ಶತಮಾನೋತ್ಸವ ವರ್ಷಾಚಾರಣೆಯ ಪ್ರಯುಕ್ತ ಬೆನಕ ಹೆಲ್ತ್ ಸೆಂಟರ್ ಉಜಿರೆ ಇವರ ವಿಶೇಷ ಸಹಕಾರದೊಂದಿಗೆ ಕೆ. ವಿ. ಜಿ. ದಂತ ಮಹಾವಿದ್ಯಾಲಯ ಸುಳ್ಯ, ಭಾರತೀಯ ದಂತ ವೈದ್ಯರ ಸಂಘ ಪುತ್ತೂರು, ಪ್ರಸನ್ನ ಕಾಲೇಜು ಮತ್ತು ಆಸ್ಪತ್ರೆ ಲಾಯಿಲ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು ರೋಟರಿ ಕ್ಲಬ್ ಬೆಳ್ತಂಗಡಿ, ನಂದಗೋಕುಲ ಗೋಶಾಲೆ ಕಲೆಂಜ, ಲಯನ್ಸ್ ಕ್ಲಬ್ ಬೆಳ್ತಂಗಡಿ, ಆಯುಷ್ ಫೆಡರೇಷನ್ ಆಫ್ ಇಂಡಿಯಾ ಬೆಳ್ತಂಗಡಿ ಇವರ ಸಹಭಾಗಿತ್ವದಲ್ಲಿ ಬೃಹತ್ ಉಚಿತ ಅರೋಗ್ಯ ತಪಾಸಣಾ ಶಿಬಿರ ನಡೆಯಿತು.

ಬೆನಕ ಹೆಲ್ತ್ ಸೆಂಟರ್ ಆಡಳಿತ ನಿರ್ದೇಶಕ ಡಾ. ಗೋಪಾಲಕೃಷ್ಣ ಭಟ್ ಉದ್ಘಾಟನೆ ನೆರವೇರಿಸಿದರು. ಮಂಗಳೂರು ವಿದ್ಯುಚಕ್ತಿ ನಿಗಮದ ಅಧ್ಯಕ್ಷ ಹರೀಶ್ ಕುಮಾರ್ ಸಭಾಧ್ಯಕ್ಷತೆ ವಹಿಸಿದರು. ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಮುರಳಿ ಬಲಿಪ, ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಡಾ. ಎಂ. ಎಂ. ದಯಾಕರ್, IDA ಪುತ್ತೂರು ಅಧ್ಯಕ್ಷೆ ಡಾ. ಆಶಾ ಪಿದಮಲೆ, ಆರೋಗ್ಯ ಕ್ಲಿನಿಕ್ ನಾವೂರು ವೈದ್ಯರಾದ ಡಾ. ಪ್ರದೀಪ್ ಎ., ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಜಯ ಶೆಟ್ಟಿ, ಪಡ್ಪು ಮಿಲ್ಕ್ ಸೊಸೈಟಿ ಅಧ್ಯಕ್ಷ ಪ್ರವೀಣ್ ವಿ. ಜಿ., ರಝ ಫ್ರೆಂಡ್ಸ್ ಅಸೋಸಿಯೇಷನ್ ಅಧ್ಯಕ್ಷ ಇರ್ಫಾನ್ ಸಾಹೇಬ್, ಡಾ. ಪ್ರಶಾಂತ್, ಇಂದಬೆಟ್ಟು ಪಿ ಹೆಚ್ ಸಿ ಶುಶ್ರುಷಕ ಅಧಿಕಾರಿ ಸುಭಾಷಿನಿ, ಎಸ್ ಡಿ ಎಂ ಸಿ ಅಧ್ಯಕ್ಷ ಜನಾರ್ಧನ ನಾಯ್ಕ, ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷ ಧರನೇಂದ್ರ ಕುಮಾರ್, ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಮುನಿರಾಜ ಅಜ್ರಿ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ಶ್ರದ್ದಾ ಸ್ವಾಗತಿಸಿದರು. ಕಾರ್ಯಧ್ಯಕ್ಷ ಶಶಿಕಿರಣ್ ಜೈನ್, ಕೋಶಾಧಿಕಾರಿ ಹಬೀಬ್ ಸಾಹೇಬ್ ಸಹಕರಿಸಿದರು. ಶಿಕ್ಷಕಿ ಸುಜಾತ ನಿರ್ವಹಿಸಿದರು. ಜಯಂತ್ ಗೌಡ ವಂದಿಸಿದರು. ಶಿಬಿರದಲ್ಲಿ ಶಸ್ತ್ರ ಚಿಕಿತ್ಸ ತಜ್ಞ ಡಾ. ವಿಜೇತ್ ರೈ, ತುರ್ತು ಚಿಕಿತ್ಸಾ ತಜ್ಞ ಡಾ. ಆದಿತ್ಯ ರಾವ್, ಸ್ತ್ರೀ ರೋಗ ತಜ್ಞೆ ಡಾ. ಅಂಕಿತ ಜಿ. ಭಟ್, ಎಲುಬು ತಜ್ಞ ಡಾ| ರೋಹಿತ್ ಭಟ್, ಮಕ್ಕಳ ತಜ್ಞ ಡಾ. ಸೂರಜ್ ಶೆಟ್ಟಿ,ಆಯುರ್ವೇದ ತಜ್ಞೆ ಡಾ. ಕವಿತಾ ಪ್ರದೀಪ್, ಪಂಚಕರ್ಮ ಚಿಕಿತ್ಸಾ ತಜ್ಞೆ ಡಾ. ವಿದ್ಯಾ ಪಡ್ವೆಟ್ನಾಯ ಹಾಗೂ ಹಲವು ವೈದ್ಯರು ಪಾಲ್ಗೊಂಡಿದ್ದರು. ಶಿಬಿರದಲ್ಲಿ ಹೃದಯ ತಪಾಸಣೆ ಸಹಿತ ಹಲ್ಲಿನ, ಕಣ್ಣಿನ ಹಾಗೂ ಇನ್ನಿತರು ಚಿಕಿತ್ಸೆಗಳು ಲಭ್ಯವಿದ್ದವು. 378 ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು.

Related posts

ಬಂಗ್ವಾಡಿ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ವಾರ್ಷಿಕ ಮಹಾರಥೋತ್ಸವ

Suddi Udaya

ಮಾಲಾಡಿ: ಪುರಿಯ-ಕುರಿಯೋಡಿರಸ್ತೆ ಕಾಮಗಾರಿ ಸ್ಥಳಾಂತರಕ್ಕೆ ವಿರೋಧ: ಶೀಘ್ರ ಕಾಮಗಾರಿಗೆ ನಾಗರಿಕರ ಒತ್ತಾಯ

Suddi Udaya

ಗೀತೆ ಜತೆ ಸಾಹಿತ್ಯ ಸಾಂಗತ್ಯ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಬೆಳ್ತಂಗಡಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಉಪನ್ಯಾಸ ಮಾಲಿಕೆಯ ನಾಲ್ಕನೆಯ ಅಧ್ಯಾಯ

Suddi Udaya

ಕನಾ೯ಟಕ ಸಂಗೀತ ನೃತ್ಯ ಅಕಾಡೆಮಿ ನೂತನ ಅಧ್ಯಕ್ಷರಾಗಿ ಡಾ. ಕೃಪಾ ಫಡಕೆ ನೇಮಕ

Suddi Udaya

ಹತ್ಯಡ್ಕ ಅರಿಕೆಗುಡ್ಡೆ ವನದುರ್ಗ ದೇವಿ ಕ್ಷೇತ್ರಕ್ಕೆ ಸೋಲಾರ್ ಅಳವಡಿಸಲು ಕೆನರಾ ಬ್ಯಾಂಕಿನಿಂದ ರೂ 2 ಲಕ್ಷ ಮಂಜೂರು

Suddi Udaya

ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ ಸಂಭ್ರಮದಲ್ಲಿರುವ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲಿಯಾನ್ ರವರಿಂದ ಗೌರವಾರ್ಪಣೆ

Suddi Udaya
error: Content is protected !!