37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊಯ್ಯೂರು : ಮಲೆಕುಡಿಯರ ಸಂಘ ದ.ಕ. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನೂತನ ಭಜನಾ ಮಂದಿರ ನಿರ್ಮಾಣದ ಸಮಿತಿ ರಚನೆ

ಬೆಳ್ತಂಗಡಿ : ನಮ್ಮ ಹಿರಿಯರು ಆರಾಧಿಸಿಕೊಂಡು ಬಂದಿರುವ ಶಿವಪಾರ್ವತಿಯ ಭಜನಾ ಮಂದಿರವನ್ನು ಎಲ್ಲರೂ ಸೇರಿ ಉತ್ತಮ ರೀತಿಯಲ್ಲಿ ನಿರ್ಮಿಸೋಣ. ಭಜನಾ ಮಂದಿರ ನಿರ್ಮಾಣದ ಜೊತೆಗೆ ಸಮುದಾಯ ಭವನವೂ ಅಭಿವೃದ್ಧಿ ಹೊಂದುವಂತಾಗಲಿ ಎಂದು ಮಲೆಕುಡಿಯರ ಸಂಘ ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಹರೀಶ್ ಎಳನೀರು ಹೇಳಿದರು.

ಅವರು ಅ.12 ರಂದು ಬೆಳ್ತಂಗಡಿ ತಾ. ಕೊಯ್ಯೂರು ಶಿವಗಿರಿಯಲ್ಲಿರುವ ಮಲೆಕುಡಿಯರ ಸಮುದಾಯ ಭವನದಲ್ಲಿ ದ.ಕ. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನೂತನ ಭಜನಾ ಮಂದಿರ ನಿರ್ಮಾಣದ ಸಮಿತಿಯನ್ನು ರಚನೆ ಮಾಡಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು.


ಮಲೆಕುಡಿಯ ಸಮುದಾಯಕ್ಕೆ ಮಲೈಕುಡಿ, ಕುಡಿಯ ಮುಂತಾದ ಜಾತಿ ಪ್ರಮಾಣಪತ್ರಗಳ ಬದಲಾಗಿ ಮಲೆಕುಡಿಯ ಎಂಬ ಏಕರೂಪ ಜಾತಿಪ್ರಮಾಣ ಪತ್ರ ನೀಡುವ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಹಾಗೆಯೇ ಪೌಷ್ಠಿಕ ಆಹಾರ, ವಿದ್ಯುತ್ ಸಮಸ್ಯೆಗಳ ಪರಿಹಾರದ ಬಗ್ಗೆ ಪ್ರಸ್ತಾಪ ಮಾಡಿದರು.
ಶಿವಪಾರ್ವತಿ ಭಜನಾ ಮಂದಿರ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷರಾಗಿ ಜಿ.ಕೆ. ನಾರಾಯಣ ಧರ್ಮಸ್ಥಳ, ಅಧ್ಯಕ್ಷರಾಗಿ ಪರಮೇಶ್ವರ ಉಜಿರೆ, ಉಪಾಧ್ಯಕ್ಷರಾಗಿ ಶ್ರೀನಿವಾಸ ಉಜಿರೆ ಪ್ರಧಾನ ಕಾರ್ಯದರ್ಶಿಯಾಗಿ ದೇವಪ್ಪ ಎಂ.ಕೆ. ಕನ್ಯಾಡಿ, ಜೊತೆ ಕಾರ್ಯದರ್ಶಿಯಾಗಿ ರಾಮಣ್ಣ ಪಂಡಿಂಜೆ, ಖಜಾಂಚಿಯಾಗಿ ಕೃಷ್ಣಪ್ಪ ಕಾಶಿಬೆಟ್ಟು, ಸಂಘಟನಾ ಕಾರ್ಯದರ್ಶಿಗಳಾಗಿ ನೋಣಯ್ಯ ಮಂಗಳೂರು, ಶಿವರಾಮ ಉಜಿರೆ ಗೌರವ ಸಲಹೆಗಾರರಾಗಿ ಸಂಜೀವ ಕುಲ್ಲಾಜೆ ಕೊಯ್ಯೂರು, ವಸಂತಿ ನೆಲ್ಲಿಕಾರು, ವಾರಿಜ ಉಜಿರೆ, ಬಾಲಕೃಷ್ಣ ಕೆ. ಪೊಳಲಿ, ಜಯರಾಮ ಆಲಂಗಾರು, ಮಹಾಬಲ ಮಲೆಕುಡಿಯ ಸವಣಾಲು, ಹಾಗೂ ಸದಸ್ಯರುಗಳಾಗಿ ಜಯಪ್ರಕಾಶ್ ಎನ್, ಪುತ್ತೂರು, ರಾಮ ಕಿಲಾರಿಪಾಡಿ ಪುತ್ತೂರು, ಜಯಾನಂದ ಪಿಲಿಕಲ ಇವರನ್ನು ಆಯ್ಕೆ ಮಾಡಲಾಯಿತು. ಹಾಗೆಯೇ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಈ ಸಮಿತಿಯೊಂದಿಗೆ ಕೈ ಜೋಡಿಸಲಿದ್ದಾರೆ. ಭಜನಾ ಮಂದಿರ ನಿರ್ಮಾಣ ಸಮಿತಿಯ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲಾಗುವುದು ಎಂದು ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಯಿತು.


ಸಮುದಾಯದ ಅಭಿವೃದ್ಧಿಗಳ ಬಗ್ಗೆ ಶ್ರೀನಿವಾಸ ಉಜಿರೆ, ದೇವಪ್ಪ ಎಂ.ಕೆ. ಕನ್ಯಾಡಿ, ಜಯಪ್ರಕಾಶ್ ಪುತ್ತೂರು, ಜಯರಾಮ ಆಲಂಗಾರು ಸಭೆಯನ್ನು ಉದ್ದೇಶಿಸಿ ಅಭಿಪ್ರಾಯಗಳನ್ನು ಮಂಡಿಸಿದರು.
ವೇದಿಕೆಯಲ್ಲಿ ಮಲೆಕುಡಿಯ ಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷೆ ವಸಂತಿ ನೆಲ್ಲಿಕಾರು, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಕೆ. ಪೊಳಲಿ, ಪರಮೇಶ್ವರ ಉಜಿರೆ, ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷ ಸಂಜೀವ ಕುಲ್ಲಾಜೆ ಉಪಸ್ಥಿತರಿದ್ದರು.
ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯೇಂದ್ರ ಎಂ. ನಿಡ್ಲೆ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಯುವರಾಜ್ ವೇಣೂರು ಸ್ವಾಗತಿಸಿ, ಕೋಶಾಧಿಕಾರಿ ಕೃಷ್ಣ ಪೂರ್ಜೆ ವರದಿ ವಾಚಿಸಿದರು.

Related posts

ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಟ: ಉಜಿರೆಯ ಮೋಹನ್ ರಿಗೆ ಪ್ರಶಸ್ತಿ

Suddi Udaya

ಉದ್ಭವ ಶ್ರೀ ಆದಿಲಿಂಗೇಶ್ವರ ದೇವಸ್ಥಾನ ಮೂಡೈಪಲ್ಕೆ ದೈವ ನಿಂದನೆ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟವರ ಮೇಲೆ ಪ್ರಕರಣ ದಾಖಲಿಸಿ- ರುಕ್ಮಯ್ಯ ಎಂ.

Suddi Udaya

ಬೆದ್ರಬೆಟ್ಟು: ಜಲ್ಸತುಲ್ ಜಮೀಲ್ ಮಿಲಾದ್ 2024 ಪ್ರತಿಭಾ ಕಾರ್ಯಕ್ರಮ

Suddi Udaya

ಸಹಕಾರ ಸಪ್ತಾಹ ಕಾರ್ಯಕ್ರಮ: ಆರಂಬೋಡಿಯ ಪ್ರತಾಪ್ ಶೆಟ್ಟಿಯವರಿಗೆ ಹೈನುಗಾರಿಕೆ ಕ್ಷೇತ್ರದಲ್ಲಿ “ಕ್ಷೀರಾರತ್ನ” ಪ್ರಶಸ್ತಿ

Suddi Udaya

ಉಜಿರೆ: ಶ್ರೀ ಕ್ಷೇ.ಧ.ಗ್ರಾ. ಯೋಜನೆಯ 376ನೇ ವಾತ್ಸಲ್ಯ ಮನೆ ಹಸ್ತಾಂತರ

Suddi Udaya

ಎಸ್‌.ಡಿ‌.ಎಂ. ನ್ಯಾಚುರೋಪಥಿ ಮತ್ತು ಯೋಗ ಸೈನ್ಸ್‌ ಕಾಲೇಜಿನಲ್ಲಿ ವಿಶ್ವ ಏಡ್ಸ್‌ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ

Suddi Udaya
error: Content is protected !!