23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸಾವ್ಯ ಶುಭೋದಯ ಹಿಂದೂ ಸೇವಾ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ

ಸಾವ್ಯ ಶುಭೋದಯ ಹಿಂದೂ ಸೇವಾ ಟ್ರಸ್ಟ್ ಇದರ ವತಿಯಿಂದ ದಿ| ನಾಗೇಶ್ ಆಚಾರ್ಯ ಅವರ ಸವಿ ನೆನಪಿಗಾಗಿ ಸಾವ್ಯ ದಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಆಧಾರ್ ತಿದ್ದುಪಡಿ ಯೊಂದಿಗೆ ಹಲವು ಬಗೆಯ ಇನ್ಶೂರೆನ್ಸ್ ಗಳ ಮಾಡುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಸಾವ್ಯದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ಮಾದರಿಯಾಗುವ ಕಾರ್ಯಕ್ರಮಗಳು ಮುಂದೆ ಸಾವ್ಯ ಗ್ರಾಮದಲ್ಲಿ ಕನಿಷ್ಠ 100 ದಿನ ಪ್ರತಿ ಮನೆಯಲ್ಲಿ ಮನೆಯಲ್ಲಿಯೇ ಮಾಡಿದ ತರಕಾರಿ ಬಳಸುವ ರೀತಿ ಆಗುವಂತೆ ಕೇಳಿಕೊಂಡರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷ ನಿತಿನ್ ಅಂಡಿಂಜೆ ವಹಿಸಿ ಮಾತನಾಡಿ ಮುಂದೆಯು ಇಂತಹ ಕಾರ್ಯಕ್ರಮ ಟ್ರಸ್ಟ್ ವತಿಯಿಂದ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಹರೀಶ್ ಹೆಗ್ಡೆ, ಸರೋಜ, ಸುಜಾತ, ಟ್ರಸ್ಟ್ ಅಧ್ಯಕ್ಷರಾದ ರಕ್ಷಿತ್ ಆರ್, ಕಾರ್ಯಕಾರಣಿ ಅಧ್ಯಕ್ಷರಾದ ಹರೀಶ್ ಮರೆಜಾರ್ ಭಾಗವಹಿಸಿದ್ದರು. ಟ್ರಸ್ಟ್ ನ ಮಹಿಳಾ ಘಟಕದ ಹೊಸ ತಂಡ ಉದ್ಘಾಟನೆ ಗೊಂಡಿತು.

Related posts

ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನ ವತಿಯಿಂದ 20 ನೇ ವರ್ಷದ ಪುಸ್ತಕ ವಿತರಣೆ : ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ – ನಿವೃತ್ತ ಯೋಧರಿಗೆ ಗೌರವಾರ್ಪಣೆ

Suddi Udaya

ಧರ್ಮಸ್ಥಳ ಬಿಜೆಪಿ ಶಕ್ತಿ ಕೇಂದ್ರದ ಅಭ್ಯಾಸವರ್ಗ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ” ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ” ಕಾರ್ಯಕ್ರಮ

Suddi Udaya

ಬೆಳ್ತಂಗಡಿ ತಾ.ಪಂ.ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ರವರ 132 ನೇ ಜನ್ಮದಿನಾಚರಣೆ

Suddi Udaya

ಹುಣ್ಸೆಕಟ್ಟೆ ಸ.ಕಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಕರಿಯಪ್ಪ ಎ.ಕೆ ರವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

Suddi Udaya

ವೇಣೂರು: ಓಮ್ನಿ ಕಾರು ವಿದ್ಯುತ್ ಕ೦ಬಕ್ಕೆ ಡಿಕ್ಕಿ: ಪ್ರಾಣಾಪಾಯದಿಂದ ಪಾರು

Suddi Udaya
error: Content is protected !!