September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮೇಲಂತಬೆಟ್ಟು ತ್ರಿವೇಣಿ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

ಮೇಲಂತಬೆಟ್ಟು ತ್ರಿವೇಣಿ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆಯು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಸೀತಾ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಪಂಚಾಯತ್ ಅಧ್ಯಕ್ಷೆ ಸವಿತಾ , ಉಪಾಧ್ಯಕ್ಷ ಲೋಕನಾಥ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಶ್ರೀಧರ ಹೆಗ್ಡೆ, ಕಾರ್ಯದರ್ಶಿ ನಿರ್ಮಲ್ ಕುಮಾರ್, ಪಂಚಾಯತ್ ಸದಸ್ಯರು ಹಾಗೂ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು, ತಾಲೂಕು ಪಂಚಾಯತ್ ಸಂಯೋಜಕರಾದ ಜಯಾನಂದ, ಶ್ರೀ ಕಲಾ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

2024-25 ನೇ ಸಾಲಿನ ವರದಿಯನ್ನು ಮಲ್ಲಿಕಾ ಓದಿ ಮಂಡಿಸಿದರು. ತಾಲೂಕು ಸಂಯೋಜಕ ಜಯಾನಂದ ಪ್ರಾಸ್ತಾವಿಕ ಮಾತನಾಡಿ ಸಂಜೀವಿನಿ ಯೋಜನೆಯ ಬಗ್ಗೆ ಸದಸ್ಯರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಪಂಚಾಯತ್ ಅಧ್ಯಕ್ಷೆ ಸವಿತಾ ಸಂಜೀವಿನಿ ಯೋಜನೆಯಿಂದ ದೊರೆಯುವ ಸಾಲ ಸೌಲಭ್ಯ , ಸವಲತ್ತುಗಳನ್ನು ತ್ರಿವೇಣಿ ಸಂಜೀವಿನಿ ಮಹಿಳಾ ಒಕ್ಕೂಟ ನೀಡುತ್ತಿದೆ ಎಂದು ಸಭೆಯಲ್ಲಿ ತಿಳಿಸಿದರು. ಉಪಾಧ್ಯಕ್ಷ ಲೋಕನಾಥ ಶೆಟ್ಟಿ ಮಾತನಾಡಿ ಸಂಜೀವಿನಿ ಯೋಜನೆಯಿಂದ ಮಹಿಳೆಯರು ಸ್ವಾವಲಂಬಿಯಾಗಿ ಜೀವನವನ್ನು ನಡೆಸುತ್ತಿದ್ದಾರೆ ಇವರಿಗೆ ಸ್ವ-ಉದ್ಯೋಗ ಮಾಡಲು ಒಕ್ಕೂಟವು ಪ್ರೇರಣೆಯನ್ನು ನೀಡುತ್ತಿದೆ ಎಂದು ಇದರ ಒಟ್ಟಿಗೆ ಪಂಚಾಯತ್ ಕೂಡ ಸಂಜೀವಿನಿ ಒಕ್ಕೂಟಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.

ಕೃಷಿ ಸಖಿ ಸಮಲತಾ ಸ್ವಾಗತಿಸಿದರು. ಪಶುಶಖಿ ಗೀತಾ ಕಾರ್ಯಕ್ರಮ ನಿರೂಪಿಸಿ, ಹರಿಣಾಕ್ಷಿ ಧನ್ಯವಾದವಿತ್ತರು.

Related posts

ನ್ಯಾಯತರ್ಪು ಜಾರಿಗೆಬೈಲು ನಿವಾಸಿ ಕೆ.ಎಂ. ಅಬೂಬಕ್ಕರ್ ರವರ ಬ್ಯಾಂಕ್ ಖಾತೆಯಿಂದ ಅಪರಿಚಿತ ಇಬ್ಬರು ವ್ಯಕ್ತಿಗಳಿಂದ ಹಣ ಕಳವು

Suddi Udaya

ಉಜಿರೆ ಎಸ್ ಡಿ ಎಮ್ ಪಾಲಿಟೆಕ್ನಿಕ್ ಕಾಲೇಜಿಗೆ ಸತತ ಮೂರನೇ ಬಾರಿಗೆ ಶೇ. 100 ಫಲಿತಾಂಶ

Suddi Udaya

ಜೆಸಿಐ ಉಜಿರೆ ಸಿಟಿ ಘಟಕದ ವತಿಯಿಂದ ಪ್ರಯಾಸ್ ಡೇ ಕಾರ್ಯಕ್ರಮ

Suddi Udaya

ಕನಾ೯ಟಕ ಸಂಗೀತ ನೃತ್ಯ ಅಕಾಡೆಮಿ ನೂತನ ಅಧ್ಯಕ್ಷರಾಗಿ ಡಾ. ಕೃಪಾ ಫಡಕೆ ನೇಮಕ

Suddi Udaya

ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದ ಘೋರ ಭಯೋತ್ಪಾದಕ ದಾಳಿ ಖಂಡನೀಯ: ಅಭಿನಂದನ್ ಹರೀಶ್ ಕುಮಾರ್

Suddi Udaya

ಲಾಯಿಲ: ಬೈಕ್ ಸ್ಕಿಡ್ ಆಗಿ ಬಿದ್ದು ಪ್ಯಾರಾಮೆಡಿಕಲ್ ವಿದ್ಯಾರ್ಥಿ ಸ್ಥಳದಲ್ಲೇ ಸಾವು

Suddi Udaya
error: Content is protected !!