ಮೇಲಂತಬೆಟ್ಟು: ಇಲ್ಲಿಯ ನಡುವಡ್ಕ ನಿವಾಸಿ ಹೊನ್ನಮ್ಮ(78 ವರ್ಷ) ರವರು ಅಲ್ಪಕಾಲದ ಅಸೌಖ್ಯದಿಂದ ಅ. 14 ರಂದು ನಿಧನರಾಗಿದ್ದಾರೆ.
ಮೃತರು ಓರ್ವ ಪುತ್ರರಾದ ನಾಗಬ್ರಹ್ಮ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಹಾಗೂ ಮೇಲಂತಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷ ಭೋಜ ಪೂಜಾರಿ, ಸೊಸೆ ಚಂದ್ರವತಿ, ಮೊಮ್ಮಕ್ಕಳಾದ ದೀಪಿಕಾ, ಗೀತಾ, ಪ್ರೀತಮ್, ಸಹೋದರಿ ದೇವಕಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.











