23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಡಾಜೆ: ಭಾರಿ ಮಳೆಗೆ ಕುಸಿದ ಮೋರಿ: ಗುಂಡ ದೈವಸ್ಥಾನದ ಸಂಪರ್ಕ ಕಡಿತ

ಮುಂಡಾಜೆ : ಇಲ್ಲಿಯ ಗುಂಡ ಶ್ರೀ ಮೂರ್ತಿಲ್ಲಾಯ ದೈವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮೋರಿ ಕುಸಿದು ಬಿದ್ದು ಸಂಪರ್ಕ ಕಡಿತಗೊಂಡ ಘಟನೆ ಅ.14ರಂದು ನಡೆದಿದೆ.


ಈ ಹಿಂದೆ ಭಾಗಶಃ ಕುಸಿತ ಕಂಡಿದ್ದ ಮೋರಿ ಮಂಗಳವಾರ ಸಂಜೆ ಸುರಿದ ಭಾರಿ ಮಳೆಗೆ ಸಂಪೂರ್ಣ ಕುಸಿದು ಬಿದ್ದಿದೆ.ಇದರಿಂದ ದೈವಸ್ಥಾನ ಸಹಿತ ಇಲ್ಲಿನ ನಾಲ್ಕಾರು ಮನೆಗಳಿಗೆ ಸಂಪರ್ಕ ಇಲ್ಲದಂತಾಗಿದೆ. ಸ್ಥಳೀಯರು ಪಕ್ಕದ ತೋಟಗಳಲ್ಲಿ ಸುತ್ತುಬಳಸಿನ ದಾರಿಯಲ್ಲಿ ನಡೆದುಕೊಂಡು ಹೋಗುವಂತಾಗಿದೆ.


ಈ ಹಿಂದೆ ಮಳೆಗಾಲದಲ್ಲಿ ಈ ಮೋರಿ ಕುಸಿತ ಕಾಣತೊಡಗಿತ್ತು. ಈ ಸಮಯ ಇದರ ದುರಸ್ತಿಗೆ ಮುಂಡಾಜೆ ಗ್ರಾಮ ಪಂಚಾಯಿತಿ ಮುಂದಾಗಿತ್ತು.ಆದರೆ ಈ ಜಾಗ ಖಾಸಗಿ ವ್ಯಕ್ತಿಯೊಬ್ಬರದ್ದಾಗಿರುವ ಕಾರಣ ಆಕ್ಷೇಪ ವ್ಯಕ್ತವಾಗಿತ್ತು ಎಂದು ಹೇಳಲಾಗಿದೆ. ಆದರೆ ಇದೀಗ ಮೋರಿ ಸಂಪೂರ್ಣ ಕುಸಿದು ಬಿದ್ದಿದ್ದು ಸದ್ಯ ತಾತ್ಕಾಲಿಕ ಸಂಪರ್ಕವೂ ಇಲ್ಲದಂತಾಗಿದೆ. ಇಲ್ಲಿ ಮೋರಿ ನಿರ್ಮಾಣಕ್ಕೆ ಖಾಸಗಿಯವರ ಆಕ್ಷೇಪ ಇರುವ ಕಾರಣ ಸಂಪರ್ಕಕ್ಕೆ ಮುಂದಿನ ಯೋಜನೆ ಏನು ಎಂಬುದು ಕಾದು ನೋಡಬೇಕಾಗಿದೆ.

ಸ್ಥಳಕ್ಕೆ ಪಂಚಾಯಿತಿ ಆಡಳಿತ ಮಂಡಳಿ ತೆರಳಿ ಪರಿಶೀಲನೆ ನಡೆಸಿದ್ದು ತಾತ್ಕಾಲಿಕ ಸಂಪರ್ಕ ಕಲ್ಪಿಸಿ ಕೊಡುವ ಭರವಸೆ ನೀಡಿದೆ.

Related posts

ಬಳಂಜ: ಶ್ರೀಮಾತ ನಾಲ್ಕೂರು ಸಂಘಟನೆಯಿಂದ ವಾಲಿಬಾಲ್ ಪಂದ್ಯಾವಳಿ, ಸಾಧಕರಿಗೆ ಸನ್ಮಾನ

Suddi Udaya

ಎಸ್.ಡಿ.ಎಂ ಕಾಲೇಜಿನಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಸಮಾರೋಪ ಸಮಾರಂಭ

Suddi Udaya

ಶಿಬಾಜೆಯಲ್ಲಿ ದಲಿತ ಯುವಕನ ಹತ್ಯೆ ಆರೋಪ ಪ್ರಕರಣ: ಆರೋಪಿಗಳನ್ನು ಬಂಧಿಸುವಂತೆ ದಲಿತ ಸಂಘಟನೆಯಿಂದ ಒತ್ತಾಯ

Suddi Udaya

ಓಡಿಲ್ನಾಳ : ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

Suddi Udaya

ವೇಣೂರು: ಸರ್ಕಾರಿ ಪ್ರೌಢಶಾಲಾ ಪ್ರಾರಂಭೋತ್ಸವದ ಸಂಭ್ರಮ

Suddi Udaya

ಗುರುವಾಯನಕೆರೆಯಲ್ಲಿ ಬೃಹತ್‌ ರಕ್ತದಾನ ಶಿಬಿರ

Suddi Udaya
error: Content is protected !!