ನಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕ್ಷಯ ಖಾಯಿಲೆ ಹೊಂದಿರುವವರಿಗೆ ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ವಿ.ಜಿ, ಜಯ ಶೆಟ್ಟಿ, ಎನ್.ಬಿ ಹರೀಶ್ಚಂದ್ರ, ಶ್ರೀಮತಿ ಲಲಿತಾ ಓಬಯ್ಯ ಗೌಡ, ಶ್ರೀಮತಿ ಶಶಿಕಲಾ ಜೈನ್ ಇವರ ವತಿಯಿಂದ ದಿನಸಿ ಸಾಮಾಗ್ರಿಗಳ ಕಿಟ್‌ಗಳನ್ನು ಅ.15 ರಂದು ಗ್ರಾಮ ಪಂಚಾಯತ್ ಕಛೇರಿಯಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಂಜುಳಾ, ಕಾರ್ಯದರ್ಶಿಗಳಾದ ಕಿರಣ್ ಎಂ, ಆಶಾ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.











