23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಂಗಳೂರಿನಲ್ಲಿ 3 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ

ಮಂಗಳೂರು : ಬೆಂಗಳೂರು APD ಸಂಸ್ಥೆಯ ಸಹಕಾರದೊಂದಿಗೆ ಪ್ರಸ್ತುತ ವರ್ಷದಲ್ಲಿ 100 ಗಾಲಿಕುರ್ಚಿಯನ್ನು ನೀಡುವ ಯೋಜನೆಯನ್ನು ಹೊಂದಿದ್ದು. ಸೆಪ್ಟೆಂಬರ್ ತಿಂಗಳಿನಲ್ಲಿ ಸೇವಾಧಾಮವು 8ನೇ ವರ್ಷಕ್ಕೆ ಪಾದಾರ್ಪಣೆಯಾದ ಸಂದರ್ಭದಲ್ಲಿ 30 ಗಾಲಿಕುರ್ಚಿಯನ್ನು ನೀಡುವುದಾಗಿ ನಿರ್ಧರಿಸಿದ್ದು ಅದರಲ್ಲಿ 3 ಗಾಲಿಕುರ್ಚಿಯನ್ನು ಸೇವಾಭಾರತಿಯ ಅಂಗಸಂಸ್ಥೆಯಾದ ಸೇವಾಧಾಮದಿಂದ ಗುರುತಿಸಲ್ಪಟ್ಟ ಬೆನ್ನುಹುರಿ ಅಪಘಾತಕ್ಕೊಳಗಾದ ಮಂಗಳೂರಿನ ಶ್ರೀ ವಿಶ್ವನಾಥ ರೈ, ವಾಮಂಜೂರಿನ ಜನಾರ್ಧನ ಮತ್ತು ಜಾರ್ದೋಲಿಯ ಪ್ರಕಾಶ್ ರವರಿಗೆ ಗಾಲಿಕುರ್ಚಿ ವಿತರಣಾ ಕಾರ್ಯಕ್ರಮವನ್ನು ಅ. 16 ರಂದು ಮಂಗಳೂರಿನಲ್ಲಿ ನಡೆಸಲಾಯಿತು.

ಮುಖ್ಯ ಅತಿಥಿಗಳಾದ ಮಂಗಳೂರಿನ ಶ್ರೀಶ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಉದಯ ಶಾಸ್ತ್ರಿ ಹಾಗೂ ಸೇವಾಭಾರತಿ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಚನ್ನಯ್ಯಸ್ವಾಮಿಯವರು ಗಾಲಿಕುರ್ಚಿಗಳನ್ನು ಹಸ್ತಾಂತರಿಸಿ, ಫಲಾನುಭವಿಗಳಿಗೆ ವಿಶ್ವಾಸ ಬದುಕಿಗಾಗಿ ಧೈರ್ಯ ತುಂಬಿದರು.

ಸೇವಾಭಾರತಿಯ ಹಿರಿಯ ಪ್ರಬಂಧಕರಾದ ಚರಣ್ ಕುಮಾರ್ ಎಂ ಕಾರ್ಯಕ್ರಮವನ್ನು ನಿರೂಪಿಸಿ, ಸೇವಾಭಾರತಿ ಟ್ರಸ್ಟಿ ಪೃಥ್ವಿಶ ಧನ್ಯವಾದವಿತ್ತರು.

Related posts

ಸುಲ್ಕೇರಿ ಲಯನ್ಸ್ ಕ್ಲಬ್‌ನ ನೂತನ ಪದಗ್ರಹಣ ಸಮಾರಂಭ

Suddi Udaya

ಬೆಳಾಲು : ಕಾರು ಮತ್ತು ದ್ವಿಚಕ್ರ ವಾಹನ ಅಪಘಾತ, ಚಿಕಿತ್ಸೆ ಫಲಕಾರಿಯಾಗದೆ ದ್ವಿಚಕ್ರ ವಾಹನ ಸವಾರ ಸಾವು

Suddi Udaya

ಎಸ್.ಎಮ್.ಎ. ಉಜಿರೆ ರೀಜನಲ್ ವತಿಯಿಂದ ಪ್ರತಿಭಾ ಪುರಸ್ಕಾರ

Suddi Udaya

ಕೊಕ್ಕಡ: ಪೊಟ್ಲಡ್ಕ ಎಂಬಲ್ಲಿ ಅರಣ್ಯ ಇಲಾಖೆಯ ಜೀಪ್ ಪಲ್ಟಿ

Suddi Udaya

ಧರ್ಮಸ್ಥಳ ಗ್ರಾಮ ಹಿತರಕ್ಷಣಾ ವೇದಿಕೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲಾಗುತ್ತಿರುವ ಸುಳ್ಳು ಆರೋಪ ಮತ್ತು ಷಡ್ಯಂತ್ರದ ವಿರುದ್ಧ ಧರ್ಮಸ್ಥಳ ಗ್ರಾಮಸ್ಥರ ಸಮಾವೇಶ

Suddi Udaya

ಉಜಿರೆ ಬ್ರಹ್ಮಕಲಶೋತ್ಸವದ “ಸುಪ್ರಸಾದ” ಭೋಜನ ಶಾಲೆಯಲ್ಲಿ” “ಮುಷ್ಠಿ ಅಕ್ಕಿ” ವಿಶೇಷ ಸೇವೆ

Suddi Udaya
error: Content is protected !!