23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅ.19: ಪೊದುಂಬಿಲ ಕೆಸರ್‌ದ ಕಂಡಡ್ ಪರ್ಬದ ಗೊಬ್ಬು

ಧರ್ಮಸ್ಥಳ: ಪೊದುಂಬಿಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಗ್ರಾಮ ದೈವಗಳ ಉತ್ಸವ ಸಮಿತಿ ಎರ್ಮುಂಜಬೈಲು ನಾರ್ಯ ಧರ್ಮಸ್ಥಳ ಗ್ರಾಮ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಮತ್ತು ಶ್ರೀ ಷಣ್ಮುಖ ಭಜನಾ ಮಂಡಳಿ ಹಾಗೂ ಊರವರ ಸಹಕಾರದೊಂದಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಕೆಸರ್ ದ ಕಂಡಡ್ ಪರ್ಬದ ಗೊಬ್ಬು-2025 ಅ.19ರಂದು ಪೊದುಂಬಿಲ ದೇವಸ್ಥಾನದ ಬಳಿ ನಡೆಯಲಿದೆ.

ಬೆಳಗ್ಗೆ 8.30ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದ್ದು, ಪೊದುಂಬಿಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಪ್ರಸಾದ್ ಪಾಂಗಣ್ಣಾಯ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೆಸರ್ ಕಂಡಡ್ ಪರ್ಬದ ಗೊಬ್ಬು ಆಚರಣಾ ಸಮಿತಿ ಅಧ್ಯಕ್ಷ ಕುಮಾರ್ ನೂಜಿಮಾರ್ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ವಿವಿಧ ಗಣ್ಯರು ಆಗಮಿಸಲಿದ್ದಾರೆ. ಸಂಜೆ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಜರುಗಲಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಂಚಾಲಕ ಸುಧಾಕರ ಗೌಡ ಧರ್ಮಸ್ಥಳ, ಅಧ್ಯಕ್ಷ ಕುಮಾರ್ ನೂಜಿಮಾರ್, ಕಾರ್ಯದರ್ಶಿ ನಿಶಾನ್ ಬಂಗೇರ ನಾರ್ಯ, ಉಪಾಧ್ಯಕ್ಷ ಮೋಹನ್ ಗೌಡ ಅರಿಕೋಡಿ, ಕ್ರೀಡಾ ಸಮಿತಿ ಸಂಚಾಲಕ ಜಯಂತ್ ಗೌಡ ಅರಿಕೋಡಿ, ಆಹಾರ ಸಮಿತಿ ಸಂಚಾಲಕ ಸೂರ್ಯಾನಂದ ರಾವ್ ಪೊದುಂಬಿಲ, ಪದಾಧಿಕಾರಿಗಳು, ಸದಸ್ಯರು ಶ್ರಮಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ 1ರಿಂದ 5 ತರಗತಿಯ ಬಾಲಕ-ಬಾಲಕಿಯರಿಗೆ, 6ರಿಂದ 10ನೇ ತರಗತಿಯ ಬಾಲಕ- ಬಾಲಕಿಯರಿಗೆ, ಮಹಿಳೆಯರಿಗೆ, ಪುರುಷರಿಗೆ, ದಂಪತಿಗಳಿಗೆ, ಹಿರಿಯ ವಿಭಾಗದವರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಹಿಪ್ ಬಾಯ್ಸ್ ನೃತ್ಯ ತಂಡ ಉಜಿರೆ ಇವರಿಂದ ನೃತ್ಯ ಕಾರ್ಯಕ್ರಮ ಜರುಗಲಿದೆ.

Related posts

ಡಿ.ಕೆ.ಆರ್. ಡಿ.ಎಸ್ ಬೆಳ್ತಂಗಡಿ ನೇತೃತ್ವದಲ್ಲಿ ಕ್ಯಾನ್ಸರ್ ಜನಜಾಗೃತಿ ಕಾರ್ಯಕ್ರಮ ಹಾಗೂ ಧನ ಸಹಾಯ ಸಂಗ್ರಹಣಾ ಅಭಿಯಾನ

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya

ಬುರುಡೆ ಪ್ರಕರಣ: ಸುಜಾತ ಭಟ್ ಗೆ ವಿಚಾರಣೆಗೆ ನೋಟಿಸ್ ಜಾರಿ

Suddi Udaya

ಬೆಳ್ತಂಗಡಿ ಬಂಟರ ಸಂಘದ ವಲಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬಾರ್ಯ ಗ್ರಾ.ಪಂ. ಘನ ತ್ಯಾಜ್ಯ ಘಟಕದ ಉದ್ಘಾಟನೆ ಮತ್ತು ಗ್ರಂಥಪಾಲಕರ ದಿನಾಚರಣೆ

Suddi Udaya

ಕನ್ಯಾಡಿ ರಾಮ ಕ್ಷೇತ್ರದಲ್ಲಿ ನವರಾತ್ರಿಯ ವಿಶೇಷ ಪೂಜೆ

Suddi Udaya
error: Content is protected !!