September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಶ್ರೀ ಧ.ಮಂ. ಪದವಿ ಪೂರ್ವ ಕಾಲೇಜಿನಲ್ಲಿ ರೋವರ್ಸ್ ಮತ್ತು ರೇಂಜರ್ಸ್ ದಳದಿಂದ ‘ಸರ್ವ ಧರ್ಮ ‘ ಪ್ರಾರ್ಥನೆ

ಉಜಿರೆ : ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ದಳದಿಂದ ದೀಪಾವಳಿಯ ಶುಭ ಸಂದರ್ಭದ ನಿಮಿತ್ತ ಸರ್ವ ಧರ್ಮ ಪ್ರಾರ್ಥನೆಯನ್ನು ನಡೆಸಲಾಯಿತು.

ರೋವರ್ಸ್ ಮತ್ತು ರೇಂಜರ್ಸ್ ನ ವಿದ್ಯಾರ್ಥಿಗಳು ಶಿಸ್ತು ಬದ್ಧವಾಗಿ ಸರ್ವ ಧರ್ಮ ಪಾರ್ಥನೆಯನ್ನು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯರಾದ ಪ್ರಮೋದ್ ಕುಮಾರ್ ಬಿ ಮಾತನಾಡಿ ಪ್ರಾರ್ಥನೆ ಎನ್ನುವುದು ಸರ್ವರನ್ನೂ ಒಂದು ಗೂಡಿಸುವ ಒಂದು ಸರಳ ಮಾಧ್ಯಮವಾಗಿದೆ. ಸರ್ವ ಧರ್ಮ ಪ್ರಾರ್ಥನೆ ಎಲ್ಲಾ ಧರ್ಮದವರನ್ನೂ ಸಮನಾಗಿ ಗೌವರವಿಸುವ ಒಂದು ಅದ್ಭುತ ಕಾರ್ಯ. ಅತೀಯಾದ ಪೂಜೆ ಪುನಸ್ಕಾರಗಳಿಗಿಂತ ಮನಃ ಪೂರ್ವಕವಾಗಿ ಮಾಡುವ ಪ್ರಾರ್ಥನೆಯು ಎಷ್ಟೋ ಹೆಚ್ಚು ಪರಿಣಾಮಕಾರಿ ಮತ್ತು ನಮ್ಮ ಮನಸ್ಸನ್ನು ಶುದ್ಧಿಕರಿಸುತ್ತದೆ ಹಾಗೂ ನಾವೆಲ್ಲ ಒಂದೇ ಎಂಬ ಭಾವನೆಯನ್ನು ಪ್ರೆರೇಪಿಸುತ್ತದೆ ಎಂದು ನುಡಿದರು. ಆ ನಿಟ್ಟಿನಲ್ಲಿ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ನಡೆಸಿದ ಸರ್ವ ಧರ್ಮ ಪ್ರಾರ್ಥನೆ ಶ್ಲಾಘನೀಯ ಎಂದರು.

ಸರ್ವಧರ್ಮ ಪ್ರಾರ್ಥನೆಯಲ್ಲಿ ಕಾಲೇಜಿನ ಭೌತ ಶಾಸ್ತ್ರ ವಿಭಾಗ ಮುಖ್ಯಸ್ಥ ತಿರುಮಲ ಪ್ರಸಾದ್ ಸಿ ಹೆಚ್, ಭೌತ ಶಾಸ್ತ್ರ ಉಪನ್ಯಾಸಕಿ ಸವಿತಾ ಬಿ, ಗ್ರಂಥ ಪಾಲಕ ಮನೋಹರ ಶೆಟ್ಟಿ ಉಪಸ್ಥಿತರಿದ್ದರು.
ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ದಳದ ನಾಯಕರಾದ ಲಕ್ಷ್ಮೀಶ್ ಭಟ್ ಮತ್ತು ಅಂಕಿತಾ ಎಂ ಕೆ ಇವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.

Related posts

ಎಕ್ಸೆಲ್ ಕಾಲೇಜಿನಲ್ಲಿ “ಅಕ್ಷರೋತ್ಸವ ” ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

Suddi Udaya

ಪಿಲಾತಬೆಟ್ಟು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಅರಸಿನಮಕ್ಕಿ: ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ವಾತ್ಸಲ್ಯ ಮನೆ ಹಸ್ತಾಂತರ

Suddi Udaya

ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಭೆ:ಶಾಲಾ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಬಗ್ಗೆ ಸಮಗ್ರ ಚರ್ಚೆ :ಹಿರಿಯ ವಿದ್ಯಾರ್ಥಿ ಸಂಘದ ಸಮಿತಿ ರಚನೆ:ಅಧ್ಯಕ್ಷರಾಗಿ ವಾಸುದೇವ ಸೋಮಯಾಜಿ, ಕಾರ್ಯದರ್ಶಿಯಾಗಿ ಪೂರ್ಣಿಮಾ

Suddi Udaya

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಅಮಾನವೀಯ ದಾಳಿಯನ್ನು ಖಂಡಿಸಿ ಧರ್ಮಪ್ರೇಮಿಗಳು ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಮೌನ ಪ್ರತಿಭಟನೆ

Suddi Udaya

ಕುತ್ಯಾರು ಫ್ರೆಂಡ್ಸ್ ಬೆಳ್ತಂಗಡಿ ವತಿಯಿಂದ ಭಾರತೀಯ ಸೇನೆಗೆ ಶಕ್ತಿ ತುಂಬಲು ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ 108 ಸೀಯಾಳಭಿಷೇಕ

Suddi Udaya
error: Content is protected !!