37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ದಂಪತಿ ಪಾಕ ಸ್ಪರ್ಧೆ ಮತ್ತು ದೀಪಾವಳಿ ಆಚರಣೆ

ಬೆಳ್ತಂಗಡಿ: ರೋಟರೀ ಕ್ಲಬ್ ಇತಿಹಾಸದಲ್ಲೇ ಪ್ರಥಮ ಬಾರಿಗೆ ಬೆಳ್ತಂಗಡಿ ರೋಟರಿ ಕ್ಲಬ್ ಮತ್ತು ಅದರ ನಾಲ್ಕು ಅಂಗ ಸಂಸ್ಥೆಗಳಾದ ಆರ್ ಸಿ ಸಿ ಮುಂಡಾಜೆ, ಆರ್ ಸಿ ಸಿ ನೆರಿಯ, ಆರ್ ಸಿ ಸಿ ಚಾರ್ಮಾಡಿ- ಕಕ್ಕಿಂಜೆ ಮತ್ತು ಆರ್ ಸಿ ಸಿ ಕಲ್ಮಂಜ ಸಹಯೋಗದಲ್ಲಿ ಸಾರ್ವಜನಿಕರಿಗೆ ದಂಪತಿ ಪಾಕ ಸ್ಪರ್ಧೆ ಮತ್ತು ದೀಪಾವಳಿ ಆಚರಣೆ ಮಾಡಲಾಯಿತು.

ಸೋಮಂತ್ತಡ್ಕದಲ್ಲಿ ಅಡೂರು ವೆಂಕಟ್ರಾಯರ ಒಡೆತನದ ಮೈದಾನದಲ್ಲಿ, ಸಂಜೆ ನೀರು ತುಂಬಿಸುವ ಕಾರ್ಯಕ್ರಮ ಮೂಲಕ ಅಡೂರು ವೆಂಕಟ್ರಾಯರು ಮತ್ತು ಅವರ ಮಗ ಸುದಯ್ ನಾಗೇಂದ್ರ ಮತ್ತು ಸೊಸೆ ಶ್ರೀಮತಿ ವಿದ್ಯಾಶ್ರೀ ಅಡೂರು ಅವರು ಚಾಲನೆ ನೀಡಿದರು.

ನಂತರ ನಡೆದ “ದಂಪತಿ ಪಾಕ ಸ್ಪರ್ಧೆ” ನಡೆಯಿತು. ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ. 2000/- ವನ್ನು ವಿಶಿಕಾ ಮತ್ತು ಅಭಿಷೇಕ ದಂಪತಿಗಳು, ದ್ವಿತೀಯ ಬಹುಮಾನ ರೂ 1000/- ವನ್ನು ದಿಶಾ ಮತ್ತು ದಿನೇಶ ಪಟವರ್ಧನ, ತೃತೀಯ ಬಹುಮಾನ ರೂ 500/-ಅಶ್ವಿನಿ ಹೆಬ್ಬಾರ ಮತ್ತು ಅರವಿಂದ ಹೆಬ್ಬಾರ ದಂಪತಿಗಳು ಹಾಗೂ ಸಮಾಧಾನಕರ ಬಹುಮಾನವನ್ನು ವೇದಾವತಿ ಮತ್ತು ಶೇಷಪ್ಪ ದಂಪತಿಗಳು ಹಾಗೂ ಶಕುಂತಲ ಮತ್ತು ಗಣೇಶ ದಂಪತಿಗಳು ಪಡೆದರು.


ನಂತರ ಮಕ್ಕಳು, ಮಹಿಳೆಯರು ಮತ್ತು ಪುರುಷರು ಸೇರಿ ಪಟಾಕಿ ಹಚ್ಚಿ ಸಂಭ್ರಮಿಸಿದರು. ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ವಿದ್ಯಾಶ್ರೀ ಅಡೂರರವರು ಪ್ರಾರ್ಥನೆ ಮಾಡಿದರು, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೊ. ಪ್ರೊ. ಪ್ರಕಾಶ ಪ್ರಭು ಸ್ವಾಗತಿಸಿ, ತಮ್ಮ ಸ್ವರಚಿತ ಕವನವನ್ನು ಹಾಡಿದರು. ರೋಟರಿ ಕ್ಲಬ್ ನ ಆ್ಯನ್ಸಗಳು ಮತ್ತು ಆರ್ ಸಿ ಸಿಯ ಮಹಿಳೆಯರು ರಂಗೋಲಿ ಬಿಡಿಸಿ, ಹಣತೆ ಹಚ್ಚಿದರು. ಉದ್ಘಾಟಕ ಅಡೂರು ವೆಂಕಟ್ರಾಯರು ದೀಪಾವಳಿಯ ಮಹತ್ವ ತಿಳಿಸಿದರು. ಮುಖ್ಯ ಅತಿಥಿ ಮತ್ತು ಸಿ ಎ ಬ್ಯಾಂಕಿನ ಅಧ್ಯಕ್ಷರು ರೊ ಪ್ರಕಾಶ ನಾರಾಯಣ, ಶ್ರೀಮತಿ ವಿದ್ಯಾಶ್ರೀ ಅಡೂರು, ಆರ್ ಸಿ ಸಿ ಮುಂಡಾಜೆ ಅಧ್ಯಕ್ಷ ಸೆಬಾಸ್ಟಿಯನ್, ಆರ್ ಸಿ ಸಿ ನೆರಿಯ ಅಧ್ಯಕ್ಷ ಪಿ ಕೆ ರಾಜನ್, ಆರ್ ಸಿ ಸಿ ಚಾರ್ಮಾಡಿ- ಕಕ್ಕಿಂಜೆ ಅಧ್ಯಕ್ಷೆ ಶ್ರೀಮತಿ ಶಾರದ ಮತ್ತು ಆರ್ ಸಿ ಸಿ ಕಲ್ಮಂಜದ ಕಾರ್ಯದರ್ಶಿ ದಿನೇಶ ಗೌಡರು ಉಪಸ್ಥಿತರಿದ್ದರು. ಡಾ. ಎಂ ಎಂ ದಯಾಕರರು ವಂದಿಸಿದರು. ರೊ. ರೇಷ್ಮಾ ಹೆಗ್ಡೆಯವರು ಕಾರ್ಯಕ್ರಮವನ್ನು ನಿರೂಪಿಸಿದರು.


ಇಡೀ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಹಕರಿಸಿದ ಸೆಬೆಸ್ಟಿಯನ್, ಪಿ.ಕೆ ರಾಜನ್, ಗೋಪಾಲಕೃಷ್ಣ, ರೊ. ವೆಂಕಟೇಶ ಕಜೆ, ಅರವಿಂದ ಹೆಬ್ಬಾರ, ರಾಕೇಶ, ಓಬಯ್ಯ ಹಾಗೂ ಆ್ಯನ್ ಗೀತಾ ಪ್ರಭು ರವರಿಗೆ ಅಧ್ಯಕ್ಷ ಪ್ರೊ. ಪ್ರಕಾಶ ಪ್ರಭುಗಳು ಕೃತಜ್ಞತೆ ಸಲ್ಲಿಸಿದರು.


ಅಡೂರು ವೆಂಕಟ್ರಾಯರು ತಯಾರಿಸಿದ ಭೋಜನದೊಂದಿಗೆ, ಮಹಿಳೆಯರು ಮನೆಯಲ್ಲಿ ತಯಾರು ಮಾಡಿ ತಂದ ಸಿಹಿ/ಖಾರ ತಿಂಡಿ ಹಾಗೂ ಸ್ಪರ್ಧೆಯಲ್ಲಿ ತಯಾರಾದ ತಿಂಡಿಗಳೊಂದಿಗೆ ಮಿತ್ರ ಭೋಜನ ನಡೆಯಿತು.

Related posts

ಬೆಳ್ತಂಗಡಿ: ವಿದ್ಯಾರ್ಥಿ ನಿಲಯಗಳ ಅಭಿವೃದ್ಧಿಗೆ ಅನುದಾನವನ್ನು ಮಂಜೂರುಗೊಳಿಸಲು ಶಾಸಕ ಹರೀಶ್ ಪೂಂಜರಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

Suddi Udaya

ಉಜಿರೆಯಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಧರ್ಮಸ್ಥಳದಲ್ಲಿ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಲೋಕಾರ್ಪಣೆ, ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧಾ ವಿಜೇತರಿಗೆ ಪುರಸ್ಕಾರ

Suddi Udaya

ಧರ್ಮಸ್ಥಳ: ಶ್ರೀ. ಮಂ.ಅ.ಪ್ರೌ. ಶಾಲೆಯಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ

Suddi Udaya

ಮುಂಡಾಜೆ : ಮನೆಯಲ್ಲಿಟ್ಟಿದ್ದ ರೂ.5 ಲಕ್ಷ ಬೆಲೆಬಾಳುವ 122ಗ್ರಾಂ ಚಿನ್ನಾಭರಣ ಕಳವು : ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಪ್ರತಿಭಾ ಕಾರಂಜಿ ಸ್ಪರ್ಧೆ: ಕುಂಭಶ್ರೀ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

Suddi Udaya
error: Content is protected !!