ಬೆಂಗಳೂರು ವಿಶ್ವವಿದ್ಯಾಲಯದ 2022–24ನೇ ಸಾಲಿನ ಶಿಕ್ಷಣ ಸ್ನಾತಕೋತ್ತರ (Master of Education) ವಿಭಾಗದಲ್ಲಿ ನೈನಾಡಿನ ಚೇತನಾ ಅವರು ನಾಲ್ಕು ಚಿನ್ನದ ಪದಕಗಳನ್ನು ಗೆದ್ದು, ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಈ ಗೌರವವನ್ನು ಅವರು ಬೆಂಗಳೂರು ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ 60ನೇ ವಾರ್ಷಿಕ ದೀಕ್ಷಾಂತ ಸಮಾರಂಭದಲ್ಲಿ ಸ್ವೀಕರಿಸಿದರು.

ಈ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಥಾವರ್ ಚಂದ್ ಗೆಹ್ಲೋಟ್, ಕುಲಸಚಿವರಾದ ಡಾ. ಎಸ್.ಎಂ. ಜಯಕಾರ, ಪ್ರೋಕುಲಪತಿಗಳಾದ ಡಾ. ಸಿ.ಎಂ. ಸುಧಾಕರ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಶ್ರೀಮತಿ ಚೇತನಾ ಕರುಣಾಕರವರು ನೈನಾಡಿನ ಶಿವಪ್ಪ ಮೂಲ್ಯ ಮತ್ತು ಪುಷ್ಪಾವತಿ ದಂಪತಿಗಳ ಸುಪುತ್ರಿಯಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ.











