22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿವರದಿ

ಮುಂಡಾಜೆ ಬಂಟರ ಗ್ರಾಮ ಸಮಿತಿಯಿಂದ ಬಂಟೆರೆ ಕಲಾ ಪರ್ಬ ಆಚರಣೆ

ಮುಂಡಾಜೆ: ಬಂಟರ ಗ್ರಾಮ ಸಮಿತಿ ಮುಂಡಾಜೆ ಇದರ ಆಶ್ರಯದಲ್ಲಿ ಬಂಟೆರೆ ಕಲಾ ಪರ್ಬ ಕಾರ್ಯಕ್ರಮವು ಅ.20ರಂದು ನಡೆಯಿತು. ತ್ರಿಷಾ ರೈ, ದಿವ್ಯಶ್ರೀ‌ ಶೆಟ್ಟಿ, ಅಧಿತಿ ಶೆಟ್ಟಿ ಇವರು ನೃತ್ಯ ಕಾರ್ಯಕ್ರಮ, ನಾರಾಯಣ ಶೆಟ್ಟಿ ಮಂಜುಶ್ರೀ ನಗರ ಇವರು ಮಿಮಿಕ್ರಿ ಮತ್ತು ಪಾಡ್ದನ ಕಾರ್ಯಕ್ರಮಗಳನ್ನು ನೀಡಿದರು. ಕಟೀಲು ಮೇಳದ ಯಕ್ಷಗಾನ ಕಲಾವಿದ ಮುಂಡಾಜೆ ನವೀನ್ ಶೆಟ್ಟಿ ಇವರ ನಿರ್ದೇಶನ ಹಾಗೂ ಅಗರಿ ಪುರುಷೋತ್ತಮ ಶೆಟ್ಟಿ ಇವರ ಸಂಯೋಜನೆಯಲ್ಲಿ ತುಳುನಾಡ ಬಲಿಯೇಂದ್ರ ಎನ್ನುವ ತುಳು ಯಕ್ಷಗಾನ ಕಾರ್ಯಕ್ರಮ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಅಗರಿ ಪುರುಷೋತ್ತಮ ಶೆಟ್ಟಿ ಮತ್ತು ನಾರಾಯಣ ಶೆಟ್ಟಿ ಮಂಜುಶ್ರಿನಗರ, ಮದ್ದಳೆ ಪುರಂದರ ಧರ್ಮಸ್ಥಳ, ಚೆಂಡೆ ಹರೀಶ್ ಚಾರ್ಮಾಡಿ, ಚಕ್ರತಾಳ ಪವನ್ ಚಾರ್ಮಾಡಿ ಹಾಗೂ ಮುಮ್ಮೆಳದಲ್ಲಿ ನವೀನ್ ಶೆಟ್ಟಿ ಮುಂಡಾಜೆ, ಚಿತ್ರಿತಾ ನವೀನ್ ಶೆಟ್ಟಿ,, ನವೀತ್ ಶೆಟ್ಟಿ ನೆಯ್ಯಾಲು, ರಂಜೀತ್ ಶೆಟ್ಟಿ ನೆಯ್ಯಾಲು, ಹರ್ಷೀತ್ ಶೆಟ್ಟಿ ನೆಯ್ಯಾಲು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಅಧ್ಯಕ್ಷ ಪ್ರದೀಪ್ ಶೆಟ್ಟಿ ನಾಗಂಡ ಸಂಘಟಿಸಿದರು.

ಸಭಾ ಕಾರ್ಯಕ್ರಮದಲ್ಲಿ ಅಗರಿ ರಾಮಣ್ಣ ಶೆಟ್ಟಿ, ಉಜಿರೆ ವಲಯ ಸಮಿತಿಯ ಅಧ್ಯಕ್ಷೆ ವನಿತಾ ಶೆಟ್ಟಿ, ಕಾರ್ಯದರ್ಶಿ ಸುದೇಶ್ ಶೆಟ್ಟಿ, ಪದಾಧಿಕಾರಿಗಳಾದ ವೆಂಕಟರಮಣ ಶೆಟ್ಟಿ ಕಲ್ಮಂಜ, ಜಯರಾಮ ಶೆಟ್ಟಿ ಕೆಂಬರ್ಜೆ, ರಾಧಾಕೃಷ್ಣ ಶೆಟ್ಟಿ ಕುಂಟಿನಿ, ವಿಶ್ವನಾಥ ಶೆಟ್ಟಿ, ಮುಂಡ್ರುಪಾಡಿ, ಚಂದ್ರಲತಾ ಶೆಟ್ಟಿ ಅಗರಿ ಉಪಸ್ಥಿತರಿದ್ದರು. ಭವ್ಯ ರೈ ಅಗರಿ ಇವರು ಸ್ವಾಗತಿಸಿ, ಮಧು ಶೆಟ್ಟಿ ಹುರ್ತಾಜೆ ಇವರ ಧನ್ಯವಾದ ಸಮರ್ಪಿಸಿದರು. ತ್ರಿಶಾ ರೈ ಕಲ್ಲ ಹಿತ್ತಿಲು ಇವರು ನಿರೂಪಿಸಿದರು. ಗ್ರಾಮ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಎಲ್ಲಾ ಬಂಟ ಬಂಧುಗಳು ಸಹಕಾರ ನೀಡಿದರು.

Related posts

ಮದ್ದಡ್ಕ ಕಿನ್ನಿಗೋಳಿ ಬಳಿ ನೇಣು ಬಿಗಿದ ಸ್ಥಿತಿಯಲ್ಲಿಮಹಿಳೆ ಶವಪತ್ತೆ

Suddi Udaya

ಎಕ್ಸೆಲ್ ಪ. ಪೂ. ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪ್ರಾರಂಭೋತ್ಸವ ‘ ಸ್ವಾಗತಮ್ ‘ ಸಮಾರಂಭ

Suddi Udaya

ಬೆಳ್ತಂಗಡಿ ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿಯ ಸಂಚಾಲಕರಾಗಿ ಅಬ್ದುಲ್ ಖಾದರ್ ನಾವೂರು ಆಯ್ಕೆ

Suddi Udaya

ಭಾರೀ ಮಳೆಗೆ: ಮದ್ದಡ್ಕ-ಪಡಂಗಡಿ ಕುದ್ರೆಂಜ ಸಮೀಪ ತೋಟಕ್ಕೆ ನುಗ್ಗಿದ್ದ ನೀರು

Suddi Udaya

ಕುವೆಟ್ಟು ಗ್ರಾಮದ ಆಲಂದಿಲ ಮನೆಯ ಜನಾರ್ದನ ಸಾಲ್ಯಾನ್ ನಿಧನ

Suddi Udaya

ಲಾಯಿಲ : ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸೇವೆಗೈದ ನಿವೃತ್ತ ಯೋಧ ಗಣೇಶ್ ಬಿ ಎಲ್ ರವರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಅಭಿನಂದನಾ ಕಾರ್ಯಕ್ರಮ

Suddi Udaya
error: Content is protected !!