32.9 C
ಪುತ್ತೂರು, ಬೆಳ್ತಂಗಡಿ
March 6, 2026
ಅಭಿನಂದನೆಧಾರ್ಮಿಕರಾಷ್ಟ್ರೀಯ ಸುದ್ದಿವರದಿ

1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿಜೀ ಮಹಾರಾಜರವರಿಗೆ ಬೆಹರೀನ್ ಬಿಲ್ಲವಾಸ್ ಮತ್ತು ಬೆಹರೀನ್ ಕನ್ನಡ ಸಂಘದಿಂದ ಸಾವಿರಾರು ಜನರ ಸಮ್ಮುಖದಲ್ಲಿ, ವಿಜೃಂಭಣೆಯ “ಗುರು ವಂದನೆ” ಕಾರ್ಯಕ್ರಮ

ಬೆಹರಿನ್: ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಪರಮ ಪೂಜ್ಯ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿಜೀ ಮಹಾರಾಜರವರಿಗೆ ಅ.17ರಂದು ಬೆಹರೀನ್ ಬಿಲ್ಲವಾಸ್ ಮತ್ತು ಬೆಹರೀನ್ ಕನ್ನಡ ಸಂಘದ ವತಿಯಿಂದ ಬೆಹರೀನ್ ಕನ್ನಡ ಸಂಘದ ಸಭಾಂಗಣದಲ್ಲಿ ಸಾವಿರಾರು ಜನರ ಸಮ್ಮಖದಲ್ಲಿ ಬಹಳ ವಿಜೃಂಭಣೆಯಿಂದ ಸರ್ವ ಸಮಾಜದ ಸಹ ಭಾಗಿತ್ವದಲ್ಲಿ ಗುರು ವಂದನೆ’ ನಡೆಯಿತು.

ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಫಾ. ಸಾಜಿ ತೋಮಸ್, ರೆಕ್ಸರ್ ದ ಕಥೇಡ್ರಾಲ್ ಆಫ್ ಅವರ್ ಲೇಡಿ ಆಫ್ ಅರೇಬಿಯಾ, ಕಿಂಗ್ ಡಂ ಆಫ್ ಬೆಹರೀನ್ ಮತ್ತು ಜಯ ಶಂಕರ್ ವಿಶ್ವನಾಥನ್ ಸಿ.ಇ.ಒ ಯುನೇಕೊ ಗ್ರೂಪ್ ಆಫ್ ಕಂಪನೀಸ್ ಮತ್ತು ಹಾಜಿ ಅಬ್ದುಲ್ ರಜಾಕ್, ಅಧ್ಯಕ್ಷರು, ದ.ಕನ್ನಡ ಮುಸ್ಲಿಮ್ ವಲ್‌ಫಾರ್ ಅಸೋಸಿಯೇಶನ್,ಸತೀಶ್ ಪೂಜಾರಿ, ಅಧ್ಯಕ್ಷರು ಕನ್ನಡ ಸಂಘ ಶಾರ್ಜ, ಶ್ರೀಮತಿ ಗೀತಾಂಜಲಿ ಸುವರ್ಣ ಅಧ್ಯಕ್ಷರು ಮಹಿಳಾ ವಿಭಾಗ, ಬಿಲ್ಲವರ ಮಹಾಮಂಡಲ,ಅಜೀತ್ ಬಂಗೇರ, ಅಧ್ಯಕ್ಷರು, ಕನ್ನಡ ಸಂಘ ಬೆಹರೀನ್, ಅಮರನಾಥ್ ರೈ, ಮಾಜಿ ಅಧ್ಯಕ್ಷರು ಬೆಹರೀನ್ ಕನ್ನಡ ಸಂಘ,ದೀಪಕ್ ಎಸ್. ಪಿ. ಅಧ್ಯಕ್ಷರು, ಬಿಲ್ಲವರ ಫ್ಯಾಮಿಲಿ, ದುಬೈ, ಭಾಸ್ಕರ ಕೋಟ್ಯಾನ್, ಅಧ್ಯಕ್ಷರು ಬಿಲ್ಲವರ ಅಸೋಸಿಯೇಶನ್, ಸೌದಿ ಅರೇಶಬಿಯಾ, ಶ್ರೀಮತಿ ಅಪರ್ಣಾ ಸುವರ್ಣ, ಅಧ್ಯಕ್ಷರು ಕತಾರ್ ಬಿಲ್ಲವಾಸ್,ಸತೀಶ್ ಕುಮಾರ್ ಬಜಾಲ್, ಅಧ್ಯಕ್ಷರು, ದಮಾಮ್ ಬಿಲ್ಲವಾಸ್ ೯ ಸೌದಿ ಅರೇಬಿಯಾ ಅಮರ್ ನಾಥ್ ಸುವರ್ಣ, ಅಧ್ಯಕ್ಷರು, ಕುವೈಟ್ ಬಿಲ್ಲವಾಸ್, ಉಮೇಶ್ ಬಂಟ್ವಾಳ, ಸ್ಥಾಪಕ ಅಧ್ಯಕ್ಷರು, ಓಮನ್ ಬಿಲ್ಲವಾಸ್,ರಾಜಕುಮಾರ್, ಮಾಜಿ ಅಧ್ಯಕ್ಷರು, ಬೆಹರೀನ್ ಬಿಲ್ಲವಾಸ್ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರು, ಸುಜೀತ್ ಅಂಚನ್, ಮಾಜಿ ಅಧ್ಯಕ್ಷರು ಓಮನ್ ಬಿಲ್ಲವಾಸ್. ಡಾ.ಗ ಮಿಥುನ್ ಬಂಡಾರಿ, ಅಧ್ಯಕ್ಷರು, ಬಂಟ್ಸ್ ಸಂಘ, ಬೆಹರೀನ್,ಕೃಷ್ಣ ಕುಮಾರ್, ಅಧ್ಯಕ್ಷರು, ನಾರಾಯಣ ಕಲ್ಪರ್ ಸೊಸೈಟಿ, ಬೆಹರೀನ್, ಶ್ರೀಮತಿ ಶಿಲ್ಪಾ ಶಾಮಿತ್ ಕುಂದರ್, ಅಧ್ಯಕ್ಷರು, ಮೊಗವೀರ ಸಂಘ ಬೆಹರೀನ್,ಗಣೇಶ್ ಮಾನಿಲ, ಅಧ್ಯಕ್ಷರು, ಬೆಹರೀನ್ ಕುಲಾಲ್ ಸಂಘ,ಸತೀಶ್ ಆಚಾರ್ಯ, ಅಧ್ಯಕ್ಷರು,ವಿಶ್ವಕರ್ಮ ಸೇವಾ ಬಳಗ ಬೆಹರೀನ್, ಶ್ರೀಮತಿ ಹೇಮಾ. ಎಸ್. ಪಾಟೇಲ್ ಅಧ್ಯಕ್ಷರು, ಬಸವ ಸಮಿತಿ ಬೆಹರೀನ್,ಪ್ರಕಾಶ್ ಅಂಚನ್, ಅಧ್ಯಕ್ಷರು ಬೆಹರೀನ್ ಬಿಲ್ಲವಾಸ್ ಹಾಗೂ ಈ ಕಾರ್ಯಕ್ರಮದ ರೂವಾರಿಯಾಗಿ ಕೊಲ್ಲಿ ರಾಷ್ಟ್ರದ ಎಲ್ಲಾ ಸಂಘಟನೆಗಳ ಅಧ್ಯಕ್ಷರುಗಳನ್ನು, ಎಲ್ಲ ಸಮಾಜದ ಮುಖ್ಯಸ್ಥರುಗಳನ್ನು ಒಂದೇ ವೇದಿಕೆಯಲ್ಲಿ ಸೇರುವ ಹಾಗೆ ಮಾಡಿದ ಹರೀಶ್ ಪೂಜಾರಿ, ಮಾಜಿ ಅಧ್ಯಕ್ಷರು ಬೆಹರೀನ್ ಬಿಲ್ಲವಾಸ್ ಇನ್ನಿತರ ಪ್ರಮುಖರು ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿಭಿನ್ನ ತಂಡಗಳಿಂದ ಭಜನೆ, ಕುಣಿತ ಭಜನೆ, ಸತ್ಯನಾರಾಯಣ ಪೂಜೆ. ಬ್ರಹ್ಮಶ್ರೀ ನಾರಾಯಣಗುರುಗಳ ಪೂಜೆ, ಶ್ರೀಗಳಿಂದ ಆಶೀರ್ವಚನ, ಮಂತ್ರಾಕ್ಷತೆ ವಿತರಣೆ, ಅನ್ನಪ್ರಸಾದ ವಿತರಣೆ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಠದಿಂದ ಶ್ರೀ ಗುರುಗಳ ಟ್ರಸ್ಸಿ ತುಕರಾಮ ಸಾಲ್ಯಾನ್, ಕೃಷ್ಣಪ್ಪ ಗುಡಿಗಾರ್, ರವೀಂದ್ರ ಪೂಜಾರಿ ಆರ್ಲ, ರಾಘವೇಂದ್ರ, ವಿ. ನಾಯ್ಕ ಭಾಗವಹಿಸಿದ್ದರು.

Related posts

ಉಜಿರೆ : ಎಸ್. ಡಿ. ಎಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಡಿಜಿಟಲ್ ಗ್ರಂಥಾಲಯಕ್ಕೆ ಚಾಲನೆ

Suddi Udaya

ದಕ್ಷಿಣ ಆಫ್ರಿಕಾದಲ್ಲಿ ಅಂತ್ಯಕ್ರಿಯೆವಾಗಲಿದ್ದ ಲಾಯಿಲದ ದಾಮೋದರ ಗೌಡ ರವರ ಮೃತದೇಹವನ್ನು ಊರಿಗೆ ತರುವಲ್ಲಿ ಸಹಕರಿಸಿದ ಸಂಸದ ಕ್ಯಾ| ಬ್ರಿಜೇಶ್ ಚೌಟ ಮತ್ತು ಶಾಸಕ ಹರೀಶ್ ಪೂಂಜ

Suddi Udaya

ಕುತ್ಲೂರು ಕಾಡಬಾಗಿಲು ಸೇತುವೆ ಕುಸಿತ: ಸಂಕಷ್ಟದಲ್ಲಿ ಅರಣ್ಯವಾಸಿಗಳು

Suddi Udaya

ಬ್ಯಾಂಕ್ ಆಫ್ ಬರೋಡದ 116ನೇ ಸಂಸ್ಥಾಪನ ದಿನದ ಪ್ರಯುಕ್ತ ಶ್ರೀ ಧ. ಮಂ. ಅ. ಹಿ. ಪ್ರಾ. ಶಾಲೆಗೆ ಶಾಲಾ ಸೂಚನಾ ಫಲಕ ಹಾಗೂ ವೈರ್ಲೆಸ್ ಸೌಂಡ್ ಬಾಕ್ಸ್ ಕೊಡುಗೆ

Suddi Udaya

ಎಸ್ ಎಸ್ ಎಲ್ ಸಿ ಪರೀಕ್ಷೆ: ಬೆಳ್ತಂಗಡಿ ಎಸ್.ಡಿ .ಎಮ್ ಆಂ.ಮಾ. ಶಾಲೆಗೆ ಸತತ ಎಂಟನೇ ಬಾರಿ ಶೇ100 ಫಲಿತಾಂಶ

Suddi Udaya

ಕಲ್ಲೇರಿಯಲ್ಲಿ ಜನಔಷಧಿ ಕೇಂದ್ರ ಶುಭಾರಂಭ

Suddi Udaya
error: Content is protected !!