September 6, 2026
Uncategorized

ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ನಂದಗೋಕುಲ ಗೋಶಾಲೆ ಯಲ್ಲಿ ಗೋಪೂಜೆ


ಬೆಳ್ತಂಗಡಿ :ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ)ಕರ್ನಾಟಕ, ಕೇಂದ್ರ ಕಚೇರಿ ತುಮಕೂರು,ನೇತ್ರಾವತಿ ವಲಯ ,ಮಂಗಳೂರು,ದಕ್ಷಿಣ ಕನ್ನಡ ಇವರ ಸಹಯೋಗದಲ್ಲಿ ಬೆಳ್ತಂಗಡಿ ತಾಲೂಕಿನ ಯೋಗ ಬಂಧುಗಳು ಕಾಯರ್ತಡ್ಕದ ಶ್ರೀ ನಂದಗೋಕುಲ ಗೋಶಾಲೆ* ಯಲ್ಲಿ ಸಾಮೂಹಿಕ ಗೋಪೂಜೆ ಯನ್ನು ಆಚರಿಸಿದರು.


ಸುಮಾರು 90 ಕ್ಕೂ ವಿಕ್ಕಿ ಯೋಗ ಬಂಧುಗಳು ಗೋಶಾಲೆಯನ್ನು ಹಾಗೂ ಗೋವುಗಳನ್ನು ಸ್ವಚ್ಛಗೊಳಿಸಿ ಗೋಮಾತೆಗೆ ಅಲಂಕಾರ ಮಾಡಿ ಆರತಿಯನ್ನು ಬೆಳಗಿ ಗೋಗ್ರಾಸವನ್ನು ನೀಡುವ ಮೂಲಕ ಗೋಪೂಜೆಯನ್ನು ನೆರವೇರಿಸಿದರು. ಯೋಗ ಬಂಧುಗಳಾದ ವಸಂತ ಕೆಂಬರ್ಜೆ ದಂಪತಿಗಳು ಗೋಪೂಜೆಯ ಮುಂದಾಳತ್ವ ವನ್ನು ವಹಿಸಿದರು.
ಜಿಲ್ಲಾ ಸಮಿತಿಯ ಮಾರ್ಗದರ್ಶನದೊಂದಿಗೆ ಯೋಗ ತರಗತಿಯ ಮುಖ್ಯ ಶಿಕ್ಷಕಿ ಪ್ರೇಮಲತಾ ಗಣೇಶ್ ಇವರ ನೇತೃತ್ವದಲ್ಲಿ ಸಹ ಶಿಕ್ಷಕರುಗಳಾದ ಸಂತೋಷ ಕಾಪಿನಡ್ಕ ,ಸುಕೇಶ್ ಗೇರುಕಟ್ಟೆ, ಶಶಿಕಲಾ ವಿಶ್ವನಾಥ್, ಕೋಮಲ ಪ್ರಕಾಶ್, ಗಣೇಶ್ ಪ್ರಸಾದ್, ರಕ್ಷಿತಾ ಪ್ರಸಾದ್ ಇವರ ಸಹಕಾರದೊಂದಿಗೆ ಈ ಕಾರ್ಯಕ್ರಮವು ಸಂಪನ್ನಗೊಂಡಿತು. ಗೋಶಾಲೆಯ ಸಿಬ್ಬಂದಿಗಳು ಸಂಪೂರ್ಣ ಸಹಕಾರವನ್ನು ನೀಡಿದರು. ಯೋಗ ಬಂಧುಗಳಾದ ಅಶ್ವಥ್ ಇವರು ಗೋ ಪೂಜೆಯ ಮಹತ್ವ ಹಾಗೂ ಅವಶ್ಯಕತೆಯ ಬಗ್ಗೆ ಬೌದ್ಧಿಕವನ್ನು ನೀಡಿದರು. ಹಾಗೂ ಶ್ರೀಮತಿ ರವಿಕಲ ಇವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Related posts

ನೆರಿಯ ಕಾರಿನ ಮೇಲೆ ಒಂಟಿ ಸಲಗ ದಾಳಿ ಪ್ರಕರಣ: ಘಟನಾ ಸ್ಥಳಕ್ಕೆ ಎಸಿಎಫ್ ಶ್ರೀಧರ್ ಭೇಟಿ ನೀಡಿ ಪರಿಶೀಲನೆ

Suddi Udaya

ಸರಕಾರಿ ಪ್ರೌಢಶಾಲೆ ಬದನಾಜೆಯಲ್ಲಿ ಗಮಕ ಕಾರ್ಯಕ್ರಮ

Suddi Udaya

ಅಭ್ಯಾಸ ಪದವಿಪೂರ್ವ ಕಾಲೇಜಿನಲ್ಲಿ 80ನೇ ಸ್ವಾತಂತ್ರ್ಯೋತ್ಸವ-ದೇಶಸೇವೆಯಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿ ಮಹತ್ವದ್ದು: ನಿವೃತ್ತ ನೌಕಾದಳ ಸೇನಾನಿ ಶ್ರೀಕೃಷ್ಣ ಭಟ್

Suddi Udaya

ಬೆಳಾಲು ಗ್ರಾ.ಪಂ. ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ ಕಾಂಗ್ರೆಸ್ ಸೇರ್ಪಡೆ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಮೋಡ್ ಚೇರ್ ವಿತರಣೆ

Suddi Udaya

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ

Suddi Udaya
error: Content is protected !!