25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ಹೈಕೋರ್ಟ್ ಪೀಠ ಪೋಸ್ಟ್ ಕಾರ್ಡ್ ಅಭಿಯಾನ

ಬೆಳ್ತಂಗಡಿ: ಬೆಳ್ತಂಗಡಿ ವಕೀಲರ ಸಂಘ ಹಾಗೂ ಹೈಕೋರ್ಟ್ ಪೀಠ ಹೋರಾಟ ಸಮಿತಿ ಬೆಳ್ತಂಗಡಿ ವತಿಯಿಂದ ಹೈಕೋರ್ಟ್ ಪೀಠ ಪೋಸ್ಟ್ ಕಾರ್ಡ್ ಅಭಿಯಾನ ಹಿರಿಯ ವಕೀಲರಾದ ಪ್ರತಾಪ ಸಿಂಹ ನಾಯಕ್ ನೆರವೇರಿಸಿದರು.

ನಮ್ಮ ರಾಜ್ಯದಲ್ಲಿ ಕರಾವಳಿ ಕರ್ನಾಟಕಕ್ಕೆ (ಮಂಗಳೂರಿಗೆ) ಅಗತ್ಯವಾಗಿ ಹೈಕೋರ್ಟ್ ಪೀಠ ಬೇಕಾಗಿದೆ. ಈ ನಿಟ್ಟಿನಲ್ಲಿ ಇವತ್ತು ಹಮ್ಮಿಕೊಂಡ ಈ ಅಭಿಯಾನ ನಿಜಕ್ಕೂ ಪ್ರೇರಣಾದಾಯಕವಾಗಿದೆ. ಈ ಕಾರ್ಯಕ್ಕೆ ವಕೀಲರು, ಸಾರ್ವಜನಿಕರು, ಉದ್ಯಮಿಗಳು ಹಿರಿಯರು ದನಿಗೂಡಿಸಬೇಕು ಎಂದು ತಮ್ಮ ಸಂಪೂರ್ಣ ಸಹಕಾರ ಬೆಂಬಲವನ್ನು ವ್ಯಕ್ತಪಡಿಸಿದರು.ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸುವುದಾಗಿ ತಿಳಿಸಿದರು.

ಈ ಸಂಧರ್ಭದಲ್ಲಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಬೆಳ್ತಂಗಡಿಯ ಅಧ್ಯಕ್ಷರಾದ ಬಿಕೆ ಧನಂಜಯ ರಾವ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಆರ್ಟಿಕಲ್ 21 ನ್ನು ಉಲ್ಲೇಖಸುತ್ತಾ ನ್ಯಾಯ ಪಡೆಯೋದು ಪ್ರತಿಯೊಬ್ಬರ ಹಕ್ಕು, ನ್ಯಾಯವು ಸರಿಯಾದ ಸಮಯಕ್ಕೆ ಸಿಗಬೇಕು ಈ ನಿಟ್ಟಿನಲ್ಲಿ ನಾವು ಅಭಿಯಾನ ಹೋರಾಟವನ್ನು ಮಾಡುತ್ತಾ ಬಂದಿದ್ದೇವೆ ಪ್ರತಿಯೊಬ್ಬರೂ ನಮ್ಮೊಂದಿಗೆ ಕೈಜೋಡಿಸಿದಾಗ ನಾವು ನಮ್ಮ ಗುರಿ ತಲುಪಲು ಸಾಧ್ಯ ಎಂದು ತಮ್ಮ ಮಾತಲ್ಲಿ ನುಡಿದರು.

ವಕೀಲರ ಸಂಘದ ಅಧ್ಯಕ್ಷರಾದ ವಸಂತ ಮರಕಡ ಮಾತನಾಡುತ್ತಾ ಅತೀ ಶೀಘ್ರದಲ್ಲಿ ನಮ್ಮ ಕರಾವಳಿ ಭಾಗಕ್ಕೆ ಹೈಕೋರ್ಟ್ ಪೀಠ ಬರುವ ಸಾಧ್ಯತೆ ಇದೆ. ಈ ಬಗ್ಗೆ ನಾವು ಸರಕಾರವನ್ನು ಇನ್ನಷ್ಟು ತ್ವರಿತಗತಿಯಲ್ಲಿ ತಲುಪುವವ್ವರಿದ್ದೇವೆ. ಹಾಗಾಗಿ ಈ ದಿನ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಈ ಪೋಸ್ಟ್ ಕಾರ್ಡ್ ಅಭಿಯಾನ ಹಮ್ಮಿಕೊಂಡಿದ್ದು ಇದರಲ್ಲಿ ವಕೀಲರುಗಳು, ಸಾರ್ವಜನಿಕರು ನಮ್ಮೊಂದಿಗೆ ಕೈಜೋಡಿಸಿದ್ದು ನಮ್ಮ ಹೋರಾಟಕ್ಕೆ ಇನ್ನಷ್ಟು ಬಲವನ್ನು ತುಂಬಿದೆ ಎಂದರು.

ಕಾರ್ಯಕ್ರಮದ ಕೊನೆಯಲ್ಲಿ ವಕೀಲರ ಸಂಘದ ಕಾರ್ಯದರ್ಶಿ ನವೀನ್ ಬಿಕೆ ವಂದಿಸಿದರು.ಈ ಅಭಿಯಾನ ದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು, ವಕೀಲರುಗಳು ಹಾಜರಿದ್ದರು.ನೆರೆದಿದ್ದ ಎಲ್ಲರೂ ಪೋಸ್ಟ್ ಕಾರ್ಡ್ ಗೆ ಸಹಿಯನ್ನು ಮಾಡುವ ಮೂಲಕ ಅಭಿಯಾನ ದಲ್ಲಿ ಪಾಲ್ಗೊಂಡರು.ಕಾರ್ಯಕ್ರಮದ ನಿರೂಪಣೆ ಯನ್ನು ಹೈಕೋರ್ಟ್ ಹೋರಾಟ ಸಮಿತಿ ಬೆಳ್ತಂಗಡಿ ಯ ಕಾರ್ಯದರ್ಶಿ ಶೈಲೇಶ್ ತೋಸರ್ ನಡೆಸಿಕೊಟ್ಟರು.

Related posts

ದ.ಕ. ಜಿಲ್ಲಾ ಮತ್ತು ಬೆಳ್ತಂಗಡಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ: ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ – ನಿವೃತ್ತ ಶಿಕ್ಷಕರಿಗೆ ಸನ್ಮಾನ

Suddi Udaya

ಧರ್ಮಸ್ಥಳ ಪೊಲೀಸ್ ಠಾಣೆಯ ನೂತನ ಕಟ್ಟಡದ ಉದ್ಘಾಟನೆ

Suddi Udaya

ಸಿಎ ಪರೀಕ್ಷೆಯಲ್ಲಿ ಬೆಳ್ತಂಗಡಿಯ ಕೇಶವ ಕಾಮತ್ ತೇರ್ಗಡೆ

Suddi Udaya

ಪುತ್ತಿಲ ಕುಂಡಡ್ಕ : ಮನೆಯ ದಾರಂದ ಬಿದ್ದು ಶಾಲಾ ಬಾಲಕಿ ಅಲ್ಫಿಯಾ ಮೃತ್ಯು

Suddi Udaya

ಜೆಸಿಐ ಬೆಳ್ತಂಗಡಿ ಆತಿಥ್ಯದಲ್ಲಿ ಎಕ್ಸೆಲ್ ಪಿಯು ಕಾಲೇಜು ಸಹಭಾಗಿತ್ವದಲ್ಲಿ ಜೆಸಿಐ ಭಾರತದ ವಲಯ 15 ರ ಚಿಗುರು ತರಬೇತಿ ಕಾರ್ಯಾಗಾರ

Suddi Udaya

ಸರಕಾರಿ ಪ.ಪೂ. ಕಾಲೇಜು ಬೆಳ್ತಂಗಡಿಯ ರಾಜ್ಯ ಪ್ರಶಸ್ತಿ ಪಡೆದ ಪ್ರಾಂಶುಪಾಲರಾದ ಸುಕುಮಾರ್ ರವರಿಗೆ ಅಭಿನಂದನೆ: ವಗಾ೯ವಣೆಗೊಂಡ ಉಪನ್ಯಾಸಕ ಗಣಪತಿ ಭಟ್ ರವರಿಗೆ ಬೀಳ್ಕೊಡುಗೆ

Suddi Udaya
error: Content is protected !!