ಅರಸಿನಮಕ್ಕಿ : ಬೂಡುಮುಗೇರು ನಿವಾಸಿ ಅರಸಿನಮಕ್ಕಿ ಗೋಪಾಲಕೃಷ್ಣ ಅನುದಾನಿತ ಶಾಲೆಯಲ್ಲಿ ಕಳೆದ 2 ವರ್ಷದಿಂದ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ತೇಜಸ್ವಿನಿ (23ವ.)ರವರ
ಶವ ಬಾವಿಯಲ್ಲಿ ಪತ್ತೆಯಾದ ಪ್ರಕರಣ ಇಂದು (ಅ. 23)ರಂದು ವರದಿಯಾಗಿದೆ.

ಇವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರೆನ್ನಲಾಗಿದ್ದು, ಕಾಲು ಜಾರಿ ಬಾವಿಗೆ ಬಿದ್ದರೇ, ಅಥವಾ ಆತ್ಮ ಹತ್ಯೆ ಮಾಡಿಕೊಂಡರೇ ಎಂಬುದು ಖಚಿತವಾಗಿಲ್ಲ, ಧಮ೯ಸ್ಥಳ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
ಮೃತರು ತಂದೆ, ತಾಯಿ, ಸಹೋದರಿಯರು, ಬಂಧು ಬಳಗವನ್ನು ಅಗಲಿದ್ದಾರೆ.











