ಅಪರಾಧ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ಆಟೋದಲ್ಲಿ ಅಕ್ರಮ ಗೋ ಮಾಂಸ ಸಾಗಾಟ ಪತ್ತೆ ಹಚ್ಚಿದ ಬೆಳ್ತಂಗಡಿ ಪೊಲೀಸರು

ಬೆಳ್ತಂಗಡಿ: ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದಾಗ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಪತ್ತೆ ಹಚ್ಚಿದ್ದಾರೆ. ಬೆಳ್ತಂಗಡಿ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಅ.23 ರಂದು ಸುಮಾರು ಮಧ್ಯಾಹ್ನ 2:30ಕ್ಕೆ ಕಿಲ್ಲೂರು ರಸ್ತೆಯಿಂದ ಬರುತ್ತಿದ್ದ KA-70-0694 ನಂಬರಿನ ಆಟೋ ರಿಕ್ಷಾವನ್ನು ಬೆಳ್ತಂಗಡಿ ತಾಲೂಕಿನ ಲಾಯಿಲ ಜಂಕ್ಷನ್ ನಲ್ಲಿ ತಡೆದು ನಿಲ್ಲಿಸಿ ಪರಿಶೀಲನೆಗೆ ಮುಂದಾದಾಗ ರಿಕ್ಷಾ ಚಾಲಕ ಲಾಯಿಲ ನಿವಾಸಿ ಹಕೀಂ(27) ಪೊಲೀಸರನ್ನು ನೋಡಿ ತಪ್ಪಿಸಿಕೊಂಡು ಓಡಿ ಪರಾರಿಯಾಗಿದ್ದಾನೆ.

ಪರಿಶೀಲನೆ ವೇಳೆ ಆಟೋ ರಿಕ್ಷಾದೊಳಗೆ 85 ಕೆ.ಜಿ ಗೋಮಾಂಸ ಪತ್ತೆಯಾಗಿದ್ದು. ಆಟೋದ ಮೌಲ್ಯ ರೂಪಾಯಿ 2,50,000 ಮತ್ತು ಗೋಮಾಂಸದ ಮೌಲ್ಯ 21,250 ರೂಪಾಯಿ ಅಗಿದ್ದು ವಶಪಡಿಸಿಕೊಂಡು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ 12 ಕರ್ನಾಟಕ ಗೋವಧೆ ಹಾಗೂ ಜಾನುವಾರು ಸಂರಕ್ಷಣಾ ಅಧಿನಿಯಮ 2020 ರಂತೆಪ್ರಕರಣ ದಾಖಲಾಗಿದೆ.ಬೆಳ್ತಂಗಡಿ ಇನ್ಸ್‌ಪೆಕ್ಟರ್ ಸುಬ್ಬಪುರ್ ಮಠ ನೇತೃತ್ವದ ಸಬ್ ಇನ್ಸ್‌ಪೆಕ್ಟರ್ ಆನಂದ.ಎಮ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ಭಾಗವಹಿಸಿದರು

Related posts

ನೈಮಿಷರವರ ಕೋಕೋ ಡ್ಯೂ ಶುದ್ದ ಗಾಣದ ಕೊಬ್ಬರಿ ಎಣ್ಣೆ ಬಿಡುಗಡೆ

Suddi Udaya

ಪೆರೋಡಿತ್ತಾಯಕಟ್ಟೆ ದ.ಕ.ಜಿ.ಪ.ಉ.ಪ್ರಾ. ಶಾಲೆಯಲ್ಲಿ ಮಕ್ಕಳ ಪೋಷಕರಿಗೆ ವಿಶೇಷ ತರಬೇತಿ ಶಿಬಿರ

Suddi Udaya

ಕುವೆಟ್ಟು ಗ್ರಾ.ಪಂ. ವತಿಯಿಂದ ಚರಂಡಿ ದುರಸ್ತಿ

Suddi Udaya

ಮೈರೋಳ್ತಡ್ಕ ಸ. ಉ. ಹಿ.ಪ್ರಾ.ಶಾಲೆಯ ನೂತನ ಶಾಲಾಭಿವೃದ್ಧಿ ಸಮಿತಿ ರಚನೆ

Suddi Udaya

ಮುಗೇರಡ್ಕ ದೈವಸ್ಥಾನಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಭಾರೀ ಮಳೆ ಹಿನ್ನಲೆ: ನಾಳೆ ದ.ಕ. ಜಿಲ್ಲಾದ್ಯಂತ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಣೆ

Suddi Udaya
error: Content is protected !!